ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Plane Emergency landing: ತಾಂತ್ರಿಕ ದೋಷ; ಬೆಳಗಾವಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ

ಮುಂಬೈಗೆ ತೆರಳುತಿದ್ದ ವಿಮಾನ ಬೆಳಗಾವಿಯಲ್ಲಿ ತುರ್ತು ಭೂಸ್ಪರ್ಶ

Star Air Flight Emergency Landing: ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಎಂಜಿನ್‌ನಲ್ಲಿ ಇಂಧನ ಸೋರಿಕೆ ಸೇರಿ ತಾಂತ್ರಿಕ ದೋಷ ಕಂಡುಬಂದಿದೆ. ಇದನ್ನು ಗಮನಿಸಿದ ಪೈಲಟ್‌ಗಳು ತಕ್ಷಣವೇ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಾಪಸ್‌ ಆಗಿ ತುರ್ತು ಭೂಸ್ಪರ್ಶ ಮಾಡಿದ್ದಾರೆ.

Actor Ajay Rao: ಒಂದೇ ವರ್ಷಕ್ಕೆ ಡಿವೋರ್ಸ್​ ಆಗುತ್ತೆ; ನಟ ಅಜಯ್‌ ರಾವ್‌ ಮದುವೆ ವೇಳೆ ಭವಿಷ್ಯ ನುಡಿದಿದ್ದ ಜ್ಯೋತಿಷಿ!

ಅಜಯ್‌ ರಾವ್‌ಗೆ ಒಂದೇ ವರ್ಷಕ್ಕೆ ಡಿವೋರ್ಸ್​ ಆಗುತ್ತೆ ಎಂದಿದ್ದ ಜ್ಯೋತಿಷಿ!

Actor Ajay Rao: ಮದುವೆಯಾದ ಮುಹೂರ್ತ ಸರಿಯಿಲ್ಲ, ʻನೀವಿಬ್ಬರೂ ಒಂದು ವರ್ಷವೂ ಜತೆ ಇರಲ್ಲ, ಡಿವೋರ್ಸ್‌ ಆಗುತ್ತೆʼ ಅಂದಿದ್ದರು. ಆದರೆ ನಾನು ಯಾವ ಮುಹೂರ್ತವೂ ನೋಡಲ್ಲ. ನನಗೆ ಜ್ಯೋತಿಷ್ಯ ಓದುವುದಕ್ಕೆ ಬರುತ್ತೆ ಎಂದು ಈ ಹಿಂದೆ ನಟ ಅಜಯ್‌ ರಾವ್‌ ಸಂದರ್ಶನವೊಂದರಲ್ಲಿ ಹೇಳಿದ್ದರು.

Karnataka Rains: ಮುಂದಿನ 4 ದಿನ ಕರಾವಳಿ, ಮಲೆನಾಡಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ!

ಮುಂದಿನ 4 ದಿನ ಕರಾವಳಿ, ಮಲೆನಾಡಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ

Karnataka weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27°C ಮತ್ತು 20°C ಇರುವ ಸಾಧ್ಯತೆ ಇದೆ.

DK Shivakumar: ಹಿಂದುತ್ವ ತಮ್ಮ ಮನೆ ಆಸ್ತಿ ಎಂದು ಬಿಜೆಪಿಯವರು ಭಾವಿಸಿದ್ದಾರೆ: ಡಿ.ಕೆ. ಶಿವಕುಮಾರ್

ಹಿಂದುತ್ವ ತಮ್ಮ ಮನೆ ಆಸ್ತಿ ಎಂದು ಬಿಜೆಪಿಯವರು ಭಾವಿಸಿದ್ದಾರೆ: ಡಿಕೆಶಿ

DK Shivakumar: ಮುಸುಕುಧಾರಿ ದೂರು ಕೊಟ್ಟ ದಿನ ಬಿಜೆಪಿಯವರು ಯಾಕೆ ಮಾತನಾಡಲಿಲ್ಲ? ಆತನ ದೂರು ಸರಿಯಿಲ್ಲ ಎಂದು ಯಾಕೆ ಹೇಳಲಿಲ್ಲ? ಎಸ್ಐಟಿ ರಚಿಸಿದ ಮೊದಲ ದಿನ ಯಾಕೆ ಮಾತನಾಡಲಿಲ್ಲ. ನಮಗೆ ರಾಜಕೀಯಕ್ಕೆ ಧರ್ಮಸ್ಥಳ ಬೇಡ. ಧರ್ಮಸ್ಥಳದ ಗೌರವ ಕಾಪಾಡುವುದು ನಮ್ಮ ಚಿಂತನೆ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಲಿ ಎನ್ನುವವರು ನಾವು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Dharawad News: ಥಿನ್ನರ್‌ನಿಂದ ಮನೆಗೆ ಹೊತ್ತಿಕೊಂಡ ಬೆಂಕಿ, ಬಾಲಕ ಸಾವು, ತಂದೆಗೆ ತೀವ್ರ ಗಾಯ

ಥಿನ್ನರ್‌ನಿಂದ ಮನೆಗೆ ಹೊತ್ತಿಕೊಂಡ ಬೆಂಕಿ, ಬಾಲಕ ಸಾವು, ತಂದೆಗೆ ತೀವ್ರ ಗಾಯ

Dharawad: ಬಾಲಕನ ಅಜ್ಜಿ ಒಲೆ ಹೊತ್ತಿಸಲು ಥಿನ್ನರ್ ಬಳಸಿದ್ದಾರೆ. ಈ ವೇಳೆ ದಿಡೀರನೆ ಬೆಂಕಿ ಹೊತ್ತಿಕೊಂಡು ಬೆಂಕಿ ಇಡೀ ಮನೆ ಆವರಿಸಿದೆ. ಬೆಂಕಿಯಲ್ಲಿ ಸಿಲುಕಿ ಬಾಲಕ ಅಗಸ್ತ್ಯ ಪರದಾಡುತ್ತಿದ್ದಾಗ ರಕ್ಷಣೆಗೆ ಬಂದ ತಂದೆ ಚಂದ್ರಕಾಂತ ಅವರಿಗೂ ಬೆಂಕಿ ಹೊತ್ತಿಕೊಂಡಿದೆ.

Laxmi Hebbalkar: ಅಕ್ಟೋಬರ್‌ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಲಕ್ಷ್ಮೀ ಹೆಬ್ಬಾಳ್ಕರ್

ಅಕ್ಟೋಬರ್‌ನಲ್ಲಿ ʼಅಂಗನವಾಡಿ ಸುವರ್ಣ ಮಹೋತ್ಸವʼ ಆಚರಣೆ

ಅಂಗನವಾಡಿ ಆರಂಭವಾಗಿ 50 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 2ರ ಹೊತ್ತಿಗೆ ಸುವರ್ಣ ಮಹೋತ್ಸವ ಆಚರಿಸಲು ಸಿದ್ಧತೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 70 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಹಂತ ಹಂತವಾಗಿ ಎಲ್ಲ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ‌

Sirsi News: ಕಾಂಗ್ರೆಸ್ ನಾಯಕರ ದ್ವಂದ್ವ ನೀತಿಯ ಹೇಳಿಕೆಗಳು ಸಮಾಜದ ದಿಕ್ಕು ತಪ್ಪಿಸುವ ಪ್ರಯತ್ನ

ದಿಕ್ಕು ತಪ್ಪಿಸುವ ಹೇಳಿಕೆ ನೀಡದೆ ಮೀನುಗಾರರ ರಕ್ಷಣೆಗೆ ಕ್ರಮ ಕೈಗೊಳ್ಳಲಿ

ಮೋದಿಯವರು ಆರ್ ಎಸ್ ಎಸ್ ಬಗ್ಗೆ ಗೌರವಿಸಿ ಮಾತನಾಡುವುದು ತಪ್ಪು ಎನ್ನುವ ಸಿದ್ಧರಾಮಯ್ಯ ತಾವು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕೇಂದ್ರ ಸರಕಾರವನ್ನು ಟೀಕಿಸುವುದು ಎಷ್ಟು ಸರಿ? ಮಾತು ಮಾತಿಗೆ ತಾವು ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು ಸಾಂವಿಧಾನಿಕ ಸಂಸ್ಥೆಗಳಿಗೆ, ನ್ಯಾಯಾಲಯದ ತೀರ್ಮಾನಗಳಿಗೆ ಗೌರವ ಕೊಡುವುದನ್ನು ಮೊದಲು ರೂಢಿಸಿಕೊಳ್ಳಲಿ

Road Accident: ನೆಲಮಂಗಲದಲ್ಲಿ ಲಾರಿ-ಬಸ್‌ ಡಿಕ್ಕಿಯಾಗಿ ಮೂವರ ದುರ್ಮರಣ

ನೆಲಮಂಗಲದಲ್ಲಿ ಲಾರಿ-ಬಸ್‌ ಡಿಕ್ಕಿಯಾಗಿ ಮೂವರ ದುರ್ಮರಣ

Road Accident: ಕುರಿ, ಮೇಕೆ ತುಂಬಿಕೊಂಡು ಮುಧೋಳದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಟಯರ್ ಪಂಚರ್ ಆಗಿದ್ದರಿಂದ ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ವೇಳೆ ನಿಂತಿದ್ದ ಲಾರಿಗೆ ಕೆಎಸ್​ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Chikkaballapur News: ಹಿರಿಯ ನಾಗರಿಕರಿಗೆ ಬಹುಮಾನಗಳ ವಿತರಿಸಿದ ಎಂ ಸಿ ಎಸ್ ಅಭಿಮಾನಿ ಬಳಗ

ಹಿರಿಯ ನಾಗರಿಕರಿಗೆ ಬಹುಮಾನಗಳ ವಿತರಿಸಿದ ಎಂ ಸಿ ಎಸ್ ಅಭಿಮಾನಿ ಬಳಗ

ಇತ್ತೀಚೆಗೆ ಚಿಂತಾಮಣಿ ನಗರದ ಜಾನ್ಸಿ ರಾಣಿ ಕ್ರೀಡಾಂಗಣದಲ್ಲಿ ಎಂ ಸಿ ಎಸ್ ಅಭಿಮಾನಿ ಬಳಗದ ವತಿಯಿಂದ ಹಿರಿಯ ನಾಗರೀಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ರೀತಿಯ ಸ್ಪರ್ಧೆಗಳಾದ ವಾಕಿಂಗ್,ಮಡಿಕೆ ಹೊಡೆಯುವುದು, ಗುಂಡು ಎಸೆತ, ಮ್ಯೂಸಿಕಲ್ ಛೇರ್ ಹಾಗೂ ಚಮಚ ಮತ್ತು ನಿಂಬೆ ಹಣ್ಣಿನ ಓಟಗಳನ್ನು 60,70,80,90 ವರ್ಷ ಮೇಲ್ಪಟ್ಟರ ಶ್ರೇಣಿಗಳನ್ನು ವರ್ಗೀಕರಿಸಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಟೋಟಗಳನ್ನು ಏರ್ಪಡಿಸಿದ್ದರು.

ಸೊನಾಲಿಕಾ ಏಪ್ರಿಲ್-ಜುಲೈ 2025ರಲ್ಲಿ 53,772 ಟ್ರಾಕ್ಟರ್ ಮಾರಾಟದ ಹೊಸ ದಾಖಲೆ

ಏಪ್ರಿಲ್-ಜುಲೈ 2025ರಲ್ಲಿ 53,772 ಟ್ರಾಕ್ಟರ್ ಮಾರಾಟದ ಹೊಸ ದಾಖಲೆ

ಸೊನಾಲಿಕಾದ ವಿಶ್ವದ ನಂ.1 ಟ್ರಾಕ್ಟರ್ ಘಟಕವು ರೊಬೊಟಿಕ್ ಕಾರ್ಯಾಚರಣೆಗಳೊಂದಿಗೆ 2 ನಿಮಿಷ ಗಳಲ್ಲಿ ಹೆವಿ ಡ್ಯೂಟಿ ಟ್ರಾಕ್ಟರ್ ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಈ ಸೌಲಭ್ಯವು ಸುಧಾರಿತ ಪ್ರೊಸೆ ಸಸ್ ಗಳಿಂದ ಸನ್ನದ್ಧವಾಗಿದ್ದು ಪ್ರತಿಯೊಂದನ್ನೂ ಆಂತರಿಕವಾಗಿ ಉತ್ಪಾದಿಸಲು ಸಜ್ಜಾಗಿದ್ದು ಇದು ಟ್ರಾಕ್ಟರ್ ಅನ್ನು ಶಕ್ತಿಯುತ ಹಾಗೂ ಇಂಧನ ಕ್ಷಮತೆಯ ಎಂಜಿನ್ ಗಳು, ಉನ್ನತ ಟ್ರಾನ್ಸ್ ಮಿಷನ್ ಗಳು ಮತ್ತು ಸುಧಾರಿತ ಹೈಡ್ರಾಲಿಕ್ಸ್ ಹೊಂದಿದ್ದು ವಿಸ್ತಾರ ಬಗೆಯ ಕೃಷಿ ಭೂಮಿಗಳಲ್ಲಿ ರೈತರ ಅಗತ್ಯಗಳನ್ನು ಪೂರೈಸುತ್ತದೆ.

Actor Darshan: ದರ್ಶನ್‌ ಜೈಲಿಗೆ, ಪತ್ನಿ ವಿಜಯಲಕ್ಷ್ಮಿಯಿಂದ ಒಡೆದ ಹೃದಯದ ಪೋಸ್ಟ್‌

ದರ್ಶನ್‌ ಜೈಲಿಗೆ, ಪತ್ನಿ ವಿಜಯಲಕ್ಷ್ಮಿಯಿಂದ ಒಡೆದ ಹೃದಯದ ಪೋಸ್ಟ್‌

Social Media: ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಪ್ರಾಣಿಗಳನ್ನು ನೋಡುತ್ತ ನಿಂತ ದರ್ಶನ್‌ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಜಯಲಕ್ಷ್ಮೀ ಅವರು, ಹೃದಯ ಒಡೆದಿದೆ ಎಂದು ಅರ್ಥ ಕೊಡುವ ಇಮೋಜಿಯನ್ನು ಜೊತೆಗೆ ಹಂಚಿಕೊಂಡಿದ್ದಾರೆ. ಫ್ಯಾನ್‌ಗಳು ಧೈರ್ಯ ತುಂಬಿಂದ್ದಾರೆ.

ನಾಗರಿಕ ಜವಾಬ್ದಾರಿಯನ್ನು ಬೀದಿ ನಾಟಕದೊಂದಿಗೆ ಮುಖ್ಯ ವೇದಿಕೆಗೆ ತಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ನಾಲೆಡ್ಜಿಎಂ ಅಕಾಡೆಮಿ

ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ನಾಲೆಡ್ಜಿಎಂ ಅಕಾಡೆಮಿ

ಹಾಸ್ಯ, ವಿಡಂಬನೆ ಮತ್ತು ಶಾಂತ ಪ್ರತಿಬಿಂಬದ ಕ್ಷಣಗಳ ಮೂಲಕ, ನಾಟಕವು ಭಾರತ ಮಾತೆ ಯನ್ನು ಇನ್ನೂ ವಸಾಹತುಶಾಹಿ ಸರಪಳಿಗಳಿಂದಲ್ಲ, ನಿರಾಸಕ್ತಿ, ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಮತ್ತು ಕ್ಷೀಣಿಸುತ್ತಿರುವ ನಾಗರಿಕ ಕರ್ತವ್ಯ ಪ್ರಜ್ಞೆಯಿಂದ ಬಂಧಿಸಲಾಗಿದೆ ಎಂದು ಚಿತ್ರಿಸಿತು.

Sirsi News: 19 ರಂದು ಧರ್ಮ ಯುದ್ದದಂತೆಯೇ ಹೋರಾಟ ನಡೆಸಲಿದ್ದೇವೆ

19 ರಂದು ನಾವು ಧರ್ಮ ಯುದ್ದದಂತೆಯೇ ಹೋರಾಟ ನಡೆಸಲಿದ್ದೇವೆ

ಧರ್ಮಸ್ಥಳ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಅನಾಮಧೇಯ ವ್ಯಕ್ತಿಯ ಹೇಳಿಕೆಯ ಮೇರೆಗೆ ಎಸ್ ಐ ಟಿಯೂ ಸಹ ಮಾನದಂಡ ಚೌಕಟ್ಟನ್ನು ಮೀರಿ ಅನಾಮಧೇಯ ವ್ಯಕ್ತಿಯ ಹೇಳಿಕೆ ಯ ಮೇಲೆ ಕಾರ್ಯ ನಡೆಯುತ್ತಿದೆ. ಇದನ್ನು ನಾವೆಲ್ಲ ಖಂಡಿಸುತ್ತೇವೆ. ಧರ್ಮಸ್ಥಳ ಕೊಡುಗೆಯ ಬಗ್ಗೆ ನಾವು ಯಾರು ಏನನ್ನೂ ಹೇಳಬೇಕಿಲ್ಲ

Murder Case: ವಿವಾಹಿತೆಗೆ 9 ಸಲ ಇರಿದು ಕೊಂದು ಬಾಯ್‌ಫ್ರೆಂಡ್‌ ಆತ್ಮಹತ್ಯೆ

ವಿವಾಹಿತೆಗೆ 9 ಸಲ ಇರಿದು ಕೊಂದು ಬಾಯ್‌ಫ್ರೆಂಡ್‌ ಆತ್ಮಹತ್ಯೆ

Belagavi: ರೇಷ್ಮಾ ಹಾಗು ಆನಂದ್ ಕಳೆದ 10 ವರ್ಷಗಳಿಂದ ಒಂದೇ ಕಾಲೋನಿಯಲ್ಲಿ ಇದ್ದರು. ಇಬ್ಬರು ಮಧ್ಯ ಹಲವು ವರ್ಷಗಳಿಂದ ಸ್ನೇಹವಿತ್ತು. ಆನಂದ್‌ಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ರೇಷ್ಮಾಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯ ಬಳಿಕವು ಆನಂದ್ ಮತ್ತು ರೇಷ್ಮಾ ನಡುವೆ ಅನೈತಿಕ ಸಂಬಂಧ ಇತ್ತು.

Fire Accident: ಬೆಂಗಳೂರಿನ ಪ್ಲಾಸ್ಟಿಕ್‌ ಮ್ಯಾಟ್‌ ಅಂಗಡಿಯಲ್ಲಿ ಅಗ್ನಿ ದುರಂತ; ಒಂದೇ ಕುಟುಂಬದ ಐವರ ಸಾವು

ಬೆಂಗಳೂರಿನಲ್ಲಿ ಭಾರಿ ಅಗ್ನಿ ದುರಂತ; ಒಂದೇ ಕುಟುಂಬದ ಐವರ ಸಾವು

Bengaluru: ಪ್ಲಾಸ್ಟಿಕ್‌ ಅಂಗಡಿಯೊಳಗೆ ರಾತ್ರಿ ಕೆಲಸಗಾರರು ಮಲಗಿ ನಿದ್ರಿಸಿರುವಾಗ ಬೆಂಕಿ ಹೊತ್ತಿಕೊಂಡಿದೆ. ತೀವ್ರ ದಹನಕಾರಿ ವಸ್ತುಗಳು ಅಂಗಡಿಯಲ್ಲಿ ಇದ್ದುದರಿಂದ ಬೆಂಕಿ ಶೀಘ್ರವಾಗಿ ವ್ಯಾಪಿಸಿದೆ. ಮಾಹಿತಿ ದೊರೆತ ಕೂಡಲೆ ಘಟನಾ ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನಗಳು ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಕಾರ್ಯನಿರತವಾಗಿವೆ.

Chandrashekhar Swamiji Passes away: ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಇನ್ನಿಲ್ಲ

ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಇನ್ನಿಲ್ಲ

Chandrashekhar Swamiji: ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಅವರು ತಮ್ಮ ಕೆಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಗಮನ ಸೆಳೆದಿದ್ದರು. ಮುಸ್ಲಿಮರ ಮತದಾನದ ಹಕ್ಕಿನ ಬಗ್ಗೆ, ಡಿಕೆ ಶಿವಕುಮಾರ್‌ ಸಿಎಂ ಆಗುವ ಬಗ್ಗೆ ಹೇಳಿಕೆ ನೀಡಿದ್ದರು.

Bannerghatta: ಬನ್ನೇರುಘಟ್ಟ ಸಫಾರಿಯಲ್ಲಿ ಎಗರಿ ಬಾಲಕನ ಕೈಗೆ ಪರಚಿದ ಚಿರತೆ!

ಬನ್ನೇರುಘಟ್ಟ ಸಫಾರಿಯಲ್ಲಿ ಎಗರಿ ಬಾಲಕನ ಕೈಗೆ ಪರಚಿದ ಚಿರತೆ!

Leopard Attack: ಪೋಷಕರ ಜೊತೆಗೆ ಬಾಲಕ ಸುಹಾಸ್ ಸಫಾರಿಗೆ ತೆರಳಿದ್ದಾಗ ಬಾಲಕನ ಕೈಗೆ ಚಿರತೆ ಪರಚಿದೆ. ಸಫಾರಿ ಜೀಪನ್ನು ಬೆನ್ನಟ್ಟಿ ಬಂದು ಹಾರಿ ಬಾಲಕನ ಕೈಗೆ ಚಿರತೆ ಪರಚಿದೆ. ಮಾಂಸ ಕಿತ್ತು ಬರುವಂತೆ ಪರಚಿದ್ದು, ಸದ್ಯ ಬಾಲಕನಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Dharmasthala chalo: ಅಪಪ್ರಚಾರ ಖಂಡಿಸಿ ಇಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ

ಅಪಪ್ರಚಾರ ಖಂಡಿಸಿ ಇಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ

ಸಂಜೆ ಧರ್ಮಸ್ಥಳದ ಮಂಜುನಾಥನ ವಿಶೇಷ ದರ್ಶನ ಪಡೆದು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂಬ ಬೇಡಿಕೆಯೊಂದಿಗೆ ಸಂಕಲ್ಪ ಮಾಡಲಿದ್ದಾರೆ. ಬಳಿಕ ಭಾನುವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸೇರಿ ಪಕ್ಷದ ಶಾಸಕರೊಂದಿಗೆ ಮತ್ತೊಮ್ಮೆ ಮಂಜುನಾಥನ ವಿಶೇಷ ದರ್ಶನ ಪಡೆದು ವಾಪಸಾಗಲಿದ್ದಾರೆ.

Road Accident: ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ, ಸ್ಥಳದಲ್ಲೇ ಮೂವರ ದುರ್ಮರಣ

ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ, ಸ್ಥಳದಲ್ಲೇ ಮೂವರ ಮರಣ

Uttara Kannada: ಓವರ್​ಟೇಕ್​ ಮಾಡುವ ಸಂದರ್ಭದಲ್ಲಿ ರಸ್ತೆಯಂಚಿನಲ್ಲಿ ನಿಂತಿದ್ದ ಕೇರಳ ಮೂಲದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್​ ಡಿಕ್ಕಿ ಹೊಡೆದಿದೆ. ಚಾಲಕ ಇಂಡಿಕೇಟರ್​ ಹಾಕದೆ ಕತ್ತಲೆಯಲ್ಲಿ ಲಾರಿ ನಿಲ್ಲಿಸಿದ್ದ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್​ನ ಒಂದು ಬದಿ ಸಂಪೂರ್ಣ ನಜ್ಜು ಗುಜ್ಜಾಗಿದೆ.

Karnataka Weather: ಇಂದಿನ ಹವಾಮಾನ; ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ!

ಇಂದಿನ ಹವಾಮಾನ; ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ!

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ (Karnataka Rains) ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 26°C ಮತ್ತು 20°C ಇರುವ ಸಾಧ್ಯತೆ ಇದೆ.

79th Independence Day: ಬಾಗೇಪಲ್ಲಿಯಲ್ಲಿ ಸಡಗರದಿಂದ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಾಗೇಪಲ್ಲಿಯಲ್ಲಿ ಸಡಗರದಿಂದ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ

ನಾವೆಲ್ಲರೂ ಯಾವುದೋ ಸಿನಿಮಾ ನಟ ನಟಿಯರ ಅಭಿಮಾನಿ ಗಳಾಗುತ್ತೇವೆ ಆದರೆ ನನ್ನ ಪ್ರಕಾರ ದೇಶದ ಅಭಿಮಾನಿಯಾಗಬೇಕು ಭಾರತಮಾತೆಯ ಅಭಿಮಾನಿ ಯಾಗಬೇಕು ಆ ನಿಟ್ಟಿನಲ್ಲಿ ದೇಶಕ್ಕೆ ಗೌರವವನ್ನು ತೋರಿಸುವಂತ ಮನೋಭಾವ ಬೆಳೆಸಿಕೊಳ್ಳ ಬೇಕು. ಏಕೆಂದರೆ ಈ ದೇಶದ ಸ್ವಾತಂತ್ರ್ಯ ಕ್ಕಾಗಿ ಹಲವಾರು ದೇಶಾಭಿಮಾನಿಗಳು ತಮ್ಮ ಪ್ರಾಣವನ್ನ ತ್ಯಾಗ ಮಾಡಿ, ಪರಕಿಯರಿಂದ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ.

MLA S R Srinivas: ರಾಜ್ಯದಲ್ಲಿ ತಲಾ ಆದಾಯ ಹೆಚ್ಚಿಸುವಲ್ಲಿ ಗ್ಯಾರಂಟಿ ಯೋಜನೆ ಪಾತ್ರ ಹೆಚ್ಚಿದೆ : ಶಾಸಕ ಎಸ್.ಆರ್.ಶ್ರೀನಿವಾಸ್

ರಾಜ್ಯದಲ್ಲಿ ತಲಾ ಆದಾಯ ಹೆಚ್ಚಿಸುವಲ್ಲಿ ಗ್ಯಾರಂಟಿ ಯೋಜನೆ ಪಾತ್ರ ಹೆಚ್ಚಿದೆ

ಸ್ವಾತಂತ್ರ್ಯ ಎಂದರೆ ದೇಶದ ಪ್ರಗತಿಯ ಜೊತೆ ಸಮಾಜ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಆಗಿದೆ. ಪ್ರಸ್ತುತ ವಿದ್ಯಮಾನದಲ್ಲಿ ಸಮೃದ್ಧ ದೇಶವನ್ನು ಕಟ್ಟುವ ಕೆಲಸ ಆಗಬೇಕಿದೆ. ನಮ್ಮಲ್ಲಿನ ಯುವಶಕ್ತಿ ಬಳಸಿ ಇಡೀ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಬೆಳೆಯಲು ಮೊದಲು ದೇಶಾಭಿಮಾನ ಬೆಳೆಸಬೇಕಿದೆ.

Minister Dr M C Sudhakar: ಸಂಸದರ ಗೊಡ್ಡು ಬೆದರಿಕೆಗೆ ಹೆದರುವ ಪೈಕಿನ ನಾನಲ್ಲ : ಡಾ.ಎಂ.ಸಿ.ಸುಧಾಕರ್

ಸಂಸದರ ಗೊಡ್ಡು ಬೆದರಿಕೆಗೆ ಹೆದರುವ ಪೈಕಿನ ನಾನಲ್ಲ

ಜನರ ವಿಶ್ವಾಸ ಇರೋವರೆಗೂ ನಮ್ಮನ್ನು ಯಾರೂ ಏನು ಮಾಡಕ್ಕಾಗಲ್ಲ,ಎರಡು ಕಾಲು ವರ್ಷದಲ್ಲಿ ನಾವು ಯಾವತ್ತು ದ್ವೇಷದ ರಾಜಕಾರಾಣ ಮಾಡಿಲ್ಲ , ಎಲ್ಲರನ್ನೂ ಸೋಲಿಸಿ ಬಿಡ್ತೇನೆ, ಮುಗಿಸಿ ಬಿಡುತ್ತೇನೆ ಎಂದು ಅಬ್ಬರಿಸುವ ಈತ ದುಡ್ಡಿನ ದುರಹಂಕಾರದಿಂದ ಆ ರೀತಿ ಮಾತಾಡ್ತಾರೆ. ೨೦೨೩ರ ಚುನಾವಣೆಯಲ್ಲಿ ಚಿಂತಾಮಣಿಯಲ್ಲಿ ನಾನು ನಿಲ್ಲಿಸುವ ಕ್ಯಾಂಡಿಟೇಟ್ ಮೇಲೆ ಗೆದ್ದು ಬರಲಿ ನೋಡೋಣ ಅಂದಿದ್ರು

Pralhad Joshi: ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿಯಲು ಸರ್ಕಾರದ್ದೂ ಸಾಥ್‌ ಇದೆಯೇ? ಜೋಶಿ ಪ್ರಶ್ನೆ

ಧರ್ಮಸ್ಥಳಕ್ಕೆ ಕಪ್ಪು ಮಸಿ ಬಳಿಯಲು ಸರ್ಕಾರದ್ದೂ ಸಾಥ್‌ ಇದೆಯೇ? ಜೋಶಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸತ್ಯ ತಿಳಿದಿದ್ದರೂ ಎಸ್‌ಐಟಿ ತನಿಖೆ, ಶೋಧ ಕಾರ್ಯ, ಅಗೆತ ಕಾರ್ಯಾಚರಣೆಗೆ ಆದೇಶ ನೀಡಿದ್ದಾರೆಯೇ? ಎಂದು ಪ್ರಶ್ನಿಸಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ, ಪೊಲೀಸ್‌ ತನಿಖೆ ಬಳಿಕ ಕುರುಹುಗಳೇನಾದರೂ ಸಿಕ್ಕಿದ್ದೇ ಆಗಿದ್ದಲ್ಲಿ ಎಸ್‌ಐಟಿ ರಚಿಸಿ ಹೆಚ್ಚಿನ ತನಿಖೆ ಮುಂದುವರಿಸಬಹುದಿತ್ತು. ಆದರೆ ʼಸರ್ಕಾರ ಗುಡ್ಡ ಅಗೆದು ಇಲಿ ಹಿಡಿಯದಂತೆʼ ಯೂ ಆಗಿದೆ ಎಂದು ಟೀಕಿಸಿದ್ದಾರೆ.

Loading...