ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಉಪ್ಪು ನೀರಿನಿಂದ ಕೈ ತೊಳೆಯುವುದು ಸರಿಯೇ?

ವಾಸ್ತು ಶಾಸ್ತ್ರದಲ್ಲಿ ವಿಶೇಷ ಪ್ರಾಮುಖ್ಯತೆ ನೀಡಿರುವ ಉಪ್ಪಿಗೆ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುವ ಶಕ್ತಿ ಇದೆ ಎಂದು ನಂಬಲಾಗಿದೆ. ಇತ್ತೀಚೆಗೆ ಕೆಲವರು ಉಪ್ಪು ನೀರಿನಿಂದ ಕೈಗಳನ್ನು ತೊಳೆಯುತ್ತಾರೆ. ಆದರೆ ಇದು ಸರಿಯೇ? ಈ ಬಗ್ಗೆ ವಾಸ್ತು ಹೇಳುವುದು ಏನು ಗೊತ್ತೇ?

ಉಪ್ಪು ನೀರಿನಿಂದ ಕೈ ತೊಳೆಯುವುದು ಸರಿಯೇ?

ಉಪ್ಪ (Salt) ಅಡುಗೆಗೆ ಮಾತ್ರವಲ್ಲ ಕೆಲವೊಂದು ಆರೋಗ್ಯ (Health) ಸಮಸ್ಯೆಗಳಿಗೆ ಔಷಧವಾಗಿಯೂ ಬಳಸಲಾಗುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿಯೂ (vast for handwash) ಇದಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಯಾಕೆಂದರೆ ಉಪ್ಪಿಗೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಶಕ್ತಿ ಇದೆ. ಹೀಗಾಗಿಯೇ ಮನೆ ಮುಂದಿನ ಪ್ರವೇಶ ದ್ವಾರದ ಬಳಿ ಉಪ್ಪಿನ ಸಣ್ಣಚೀಲವನ್ನು ಅಥವಾ ಕಾಗದದಲ್ಲಿ ಉಪ್ಪನ್ನು ಕಟ್ಟಿ ಇಡಬೇಕು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಅಲ್ಲದೇ ಮಕ್ಕಳು, ಮನೆಮಂದಿಯ ದೃಷ್ಟಿ ತೆಗೆಯಲು ಕೂಡ ಉಪ್ಪನ್ನು ಬಳಸಲಾಗುತ್ತದೆ. ಮನೆಯ ಒಳಾಂಗಣ, ಹೊರಾಂಗಣದ ಶುದ್ದೀಕರಣವನ್ನೂ ಉಪ್ಪಿನಿಂದ ಮಾಡಲಾಗುತ್ತದೆ.

ಉಪ್ಪಿನ ಋಣವನ್ನು ಯಾವತ್ತೂ ಇಟ್ಟುಕೊಳ್ಳಬಾರದು ಎನ್ನುತ್ತಾರೆ ಹಿರಿಯರು. ಊಟಕ್ಕೆ ಕುಳಿತುಕೊಳ್ಳುವಾಗ ಬಾಳೆ ಎಲೆಯ ತುದಿಯಲ್ಲಿ ಉಪ್ಪು ಹಾಕುತ್ತಾರೆ. ಊಟ ಮುಗಿದ ಮೇಲೆ ಅದಕ್ಕೆ ನೀರು ಹಾಕುವ ಸಂಪ್ರದಾಯವನ್ನು ಕೆಲವರು ಪಾಲಿಸುತ್ತಾರೆ. ಇದರ ಅರ್ಥ ಉಪ್ಪಿನ ಋಣ ಇಟ್ಟುಕೊಳ್ಳುವುದಿಲ್ಲ ಎಂಬುದಾಗಿದೆ. ಉಪ್ಪು ನೀರಿನಿಂದ ಬಂದಿರುತ್ತದೆ. ಹೀಗಾಗಿ ಅದನ್ನು ಮರಳಿ ನೀರಿಗೆ ಸೇರಿಸುವ ಮೂಲಕ ಅದರ ಋಣ ಕಳೆದುಕೊಳ್ಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿಯೂ ವಿಶೇಷ ಪ್ರಾಮುಖ್ಯತೆ ನೀಡಿರುವ ಉಪ್ಪಿಗೆ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುವ ಶಕ್ತಿ ಇದೆ ಎಂದು ನಂಬಲಾಗಿದೆ. ಇತ್ತೀಚೆಗೆ ಕೆಲವರು ಉಪ್ಪು ನೀರಿನಿಂದ ಕೈಗಳನ್ನು ತೊಳೆಯುತ್ತಾರೆ. ಆದರೆ ಇದು ಸರಿಯೇ? ಈ ಬಗ್ಗೆ ವಾಸ್ತು ಹೇಳುವುದು ಏನು?

ಉಪ್ಪು ನೀರಿನಿಂದ ಕೈ ತೊಳೆಯುವುದು ಸಾಕಷ್ಟು ಪ್ರಯೋಜನಕಾರಿ ಎನ್ನುತ್ತಾರೆ ವಾಸ್ತು ತಜ್ಞ ರಾಧಾಕಾಂತ್ ವತ್ಸ್. ಇದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ಅವರು ಹೇಳುವುದು ಹೀಗೆ...

salt

ಯಾವಾಗಲು ದಣಿವು ಅಥವಾ ಕೆಲಸ ಪೂರ್ಣಗೊಳ್ಳುವ ಮೊದಲೇ ಹಾಳಾಗುತ್ತಿದ್ದರೆ ನಕಾರಾತ್ಮಕ ಶಕ್ತಿಯು ನಮ್ಮ ಮೇಲೆ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಉಪ್ಪು ಅಥವಾ ಉಪ್ಪು ನೀರಿನಿಂದ ಕೈಗಳನ್ನು ತೊಳೆದರೆ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಬಹುದು. ಇದಕ್ಕಾಗಿ ಅಂಗೈಗೆ ಒಂದು ಚಮಚ ಉಪ್ಪನ್ನು ಹಾಕಿ ಕೈಗಳನ್ನು ಚೆನ್ನಾಗಿ ಉಜ್ಜಬೇಕು. ಬಳಿಕ ನೀರಿನಿಂದ ತೊಳೆಯಬೇಕು.

ಯಾರನ್ನಾದರೂ ಭೇಟಿಯಾದ ಅನಂತರ ಅಥವಾ ಕೈಕುಲುಕಿದ ಬಳಿಕ ಕೆಲವರ ಆರೋಗ್ಯ ಹದಗೆಡಲು ಪ್ರಾರಂಭಿಸುತ್ತದೆ. ಇದು ದುಷ್ಟ ಕಣ್ಣಿನ ಪರಿಣಾಮ. ಇದರಿಂದ ಪಾರಾಗಲು ಕೂಡ ಉಪ್ಪು ನೀರಿನಿಂದ ಕೈ ತೊಳೆಯುವುದು ಪ್ರಯೋಜನಕಾರಿ.

ವಾಸ್ತು ಶಾಸ್ತ್ರದಲ್ಲಿ ಉಪ್ಪು ಶನಿ ಮತ್ತು ರಾಹುವಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ನಮ್ಮ ಜೀವನದಲ್ಲಿ ಶನಿ ಅಥವಾ ರಾಹುವಿನ ದೋಷವಿದ್ದರೆ ಅದನ್ನು ಕೂಡ ದೂರ ಮಾಡಲು ಉಪ್ಪಿನಿಂದ ಕೈ ತೊಳೆಯುವುದು ಒಳ್ಳೆಯದು. ಇದರಿಂದ ಗ್ರಹಗಳ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಮಾನಸಿಕ ಒತ್ತಡದಿಂದ ಬಳಲುತ್ತಿರುವ ಉಪ್ಪು ನೀರಿನಿಂದ ಕೈ ತೊಳೆಯುವುದು ಪ್ರಯೋಜನಕಾರಿ. ಇದರಿಂದ ಶಕ್ತಿಯ ಸಮತೋಲನ ಉಂಟಾಗುತ್ತದೆ. ಮನಸ್ಸು ಶಾಂತವಾಗುತ್ತದೆ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ.

ಇದನ್ನೂ ಓದಿ: Vastu Tips: ಮನೆಗೆ ಸಂಪತ್ತನ್ನು ಆಹ್ವಾನಿಸುವ ಡೋರ್‌ಮ್ಯಾಟ್‌ ಹೇಗಿರಬೇಕು ?

ಜೀವನದಲ್ಲಿ ಎದುರಾಗುವ ಆರ್ಥಿಕ ಅಡೆತಡೆಗಳನ್ನು ತೆಗೆದುಹಾಕಲು ಕೂಡ ಉಪ್ಪು ನೀರಿನಿಂದ ಕೈ ತೊಳೆಯುವುದು ಉಪಯುಕ್ತ.

ಯಾವಾಗ ಉಪ್ಪು ನೀರಿನಿಂದ ಕೈ ತೊಳೆಯಬೇಕು?

ವಾಸ್ತು ಶಾಸ್ತ್ರದ ಪ್ರಕಾರ ಯಾರನ್ನಾದರೂ ಭೇಟಿಯಾಗಿ ಬಂದ ಬಳಿಕ ಮನಸ್ಸು ಭಾರವಾದ ಭಾವನೆ ಉಂಟಾದರೆ ಅಂತಹ ಸಂದರ್ಭದಲ್ಲಿ ಉಪ್ಪು ನೀರಿನಿಂದ ಕೈ ತೊಳೆಯುವುದು ಉಪಯುಕ್ತ. ಪ್ರತಿದಿನ ಅಥವಾ ಪದೇ ಪದೆ ಉಪ್ಪು ನೀರಿನಿಂದ ಕೈತೊಳೆಯಬಾರದು. ಇದು ರಾಹು ಮತ್ತು ಶನಿಯ ಪ್ರಭಾವವನ್ನು ಹೆಚ್ಚಿಸುತ್ತದೆ. ಅಲ್ಲದೇ ಗುರುವಾರ ಉಪ್ಪು ನೀರಿನಿಂದ ಕೈ ತೊಳೆಯಬಾರದು. ಯಾಕೆಂದರೆ ಗುರುವಾರ ಗುರುಗ್ರಹದ ದಿನ. ಈ ದಿನ ಉಪ್ಪು ಬಳಸುವುದರಿಂದ ಗುರು ಗ್ರಹ ದುರ್ಬಲವಾಗುತ್ತದೆ ಮತ್ತು ಜೀವನದಲ್ಲಿ ತೊಂದರೆಗಳು ಎದುರಾಗುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು.