ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಅಡುಗೆ ಮನೆ ಉತ್ತರ ದಿಕ್ಕಿನಲ್ಲಿ ಇದೆಯೇ? ಹಾಗಿದ್ದರೆ ಈ ನಿಯಮ ಪಾಲಿಸಿ, ಸುಖ, ಶಾಂತಿ, ಸಮೃದ್ಧಿಯನ್ನು ಆಹ್ವಾನಿಸಿ

ಸಾಮಾನ್ಯವಾಗಿ ಅಡುಗೆ ಮನೆಯು ಅಗ್ನೇಯ ದಿಕ್ಕಿನಲ್ಲಿರಬೇಕು ಎನ್ನುತ್ತದೆ ವಾಸ್ತು. ಆದರೆ ಸ್ಥಳಾವಕಾಶದ ಕೊರತೆ, ವಿನ್ಯಾಸದ ಸಮಸ್ಯೆಯಿಂದಾಗಿ ಕೆಲವೊಮ್ಮೆ ಅಡುಗೆ ಮನೆಯನ್ನು ಉತ್ತರ ದಿಕ್ಕಿನಲ್ಲಿ ನಿರ್ಮಿಸುತ್ತೇವೆ. ಈ ದಿಕ್ಕಿನಲ್ಲಿ ಅಡುಗೆ ಮನೆ ಇದ್ದರೆ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಬಹುದು.

ಉತ್ತರ ದಿಕ್ಕಿನಲ್ಲಿರುವ ಅಡುಗೆ ಮನೆಗೆ ಸಲಹೆಗಳು

ಅಡುಗೆ ಕೋಣೆಯು (Vastu for kitchen) ಮನೆಯ ಹೃದಯಭಾಗವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಇದು ಮನೆ ಮಂದಿಗೆಲ್ಲ ಪೋಷಣೆ ಮತ್ತು ಶಕ್ತಿಯನ್ನು ನೀಡುವ ಸ್ಥಳವಾಗಿದೆ. ಸಾಮಾನ್ಯವಾಗಿ ಅಡುಗೆ ಕೋಣೆಯು ಮನೆಯ ಅಗ್ನೇಯ ದಿಕ್ಕಿನಲ್ಲಿರಬೇಕು ಎನ್ನುತ್ತದೆ ವಾಸ್ತು (vastu tips for home) ಶಾಸ್ತ್ರ. ಆದರೆ ಯಾವುದಾದರೂ ಕಾರಣದಿಂದ ಅಡುಗೆ ಮನೆಯನ್ನು ಈ ದಿಕ್ಕಿನಲ್ಲಿ ನಿರ್ಮಿಸಲು ಸಾಧ್ಯವಾಗದೆ ಉತ್ತರ ದಿಕ್ಕಿನಲ್ಲಿ (vastu about north direction kitchen) ನಿರ್ಮಿಸಿದರೆ ಕೆಲವೊಂದು ವಾಸ್ತು ನಿಯಮಗಳನ್ನು ಅನುಸರಿಸಿ ಮನೆಯ ಸಕಾರಾತ್ಮಕ ಶಕ್ತಿಗಳನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ಆಧ್ಯಾತ್ಮಿಕ ತಜ್ಞರಾದ ಪೂಜಾ ಸೇಠ್ ಹೇಳಿರುವ ಕೆಲವು ವಾಸ್ತು ನಿಯಮಗಳು ಇಂತಿವೆ.

ಅಡುಗೆ ಮನೆಯು ಸಾಮಾನ್ಯವಾಗಿ ನೀರಿನ ಅಂಶದಿಂದ ನಿಯಂತ್ರಿಸಲ್ಪಡುತ್ತದೆ. ಒಂದು ವೇಳೆ ಅದು ಉತ್ತರದಲ್ಲಿದ್ದರೆ ಆಗ ಅಗ್ನಿಯೊಂದಿಗೆ ಸಂಘರ್ಷಕ್ಕೆ ಒಳಗಾಗಬಹುದು. ಇಂತಹ ಸಂದರ್ಭಗಳಲ್ಲಿ ಯಂತ್ರ, ಬಣ್ಣ ಅಥವಾ ಶಕ್ತಿಯನ್ನು ನೀಡುವ ವಸ್ತುಗಳನ್ನು ಇಡುವಂತಹ ಜಾಗವನ್ನು ಗುರುತಿಸುವುದು ಬಹುಮುಖ್ಯ. ಇದರಿಂದ ಕೋಣೆಯಲ್ಲಿ ಇರುವ ವಾಸ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

ಒಲೆ ಎಲ್ಲಿರಬೇಕು?

ಅಡುಗೆ ಮನೆಯು ಉತ್ತರ ದಿಕ್ಕಿನಲ್ಲಿದ್ದರೂ ಒಲೆಯುನ್ನು ಆಗ್ನೇಯ ಮೂಲೆಯಲ್ಲಿ ಇಡಬೇಕು. ಯಾವತ್ತೂ ಅಡುಗೆ ಮಾಡುವ ವ್ಯಕ್ತಿಯು ಊಟವನ್ನು ತಯಾರಿಸುವಾಗ ಪೂರ್ವಕ್ಕೆ ಮುಖ ಮಾಡಬೇಕು. ಇದು ಮನೆ ಮಂದಿಯ ಜೀರ್ಣಕ್ರಿಯೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ.

ಸಿಂಕ್ ಎಲ್ಲಿರಬೇಕು?

ವಾಸ್ತು ಶಾಸ್ತ್ರದಲ್ಲಿ ಸಿಂಕ್ ನೀರಿನ ಅಂಶವನ್ನು ಪ್ರತಿನಿಧಿಸುತ್ತದೆ. ಇದು ಯಾವತ್ತೂ ವಾಯುವ್ಯ ಮೂಲೆಯಲ್ಲಿರಬೇಕು. ಬೆಂಕಿ ಮತ್ತು ನೀರಿನ ಅಂಶಗಳು ಪ್ರತ್ಯೇಕವಾಗಿ ಇರಬೇಕು. ಇದು ಮನೆ ಮಂದಿಯ ಆರೋಗ್ಯ ಮತ್ತು ಸಾಮರಸ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಶಕ್ತಿಯಲ್ಲಿನ ಸಂಘರ್ಷಗಳನ್ನು ತಪ್ಪಿಸುತ್ತದೆ.

ಶೇಖರಣಾ ಸ್ಥಳ ಎಲ್ಲಿರಬೇಕು?

ಅಡುಗೆ ಕೋಣೆಯಲ್ಲಿ ಧಾನ್ಯ, ಪಾತ್ರೆ ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಲು ಬಳಸುವ ಭಾರವಾದ ಶೇಖರಣಾ ಕಪಾಟುಗಳು ಅಥವಾ ಕ್ಯಾಬಿನೆಟ್‌ಗಳು ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿಡಬೇಕು. ಇದು ಅಡುಗೆಮನೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ದೈನಂದಿನ ಕಾರ್ಯಾಚರಣೆಗಳನ್ನು ಸುಗಮವಾಗಿರುವಂತೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

vastu1

ಗೋಡೆಯ ಬಣ್ಣ ಹೇಗಿರಬೇಕು?

ಅಡುಗೆ ಕೋಣೆಯ ಬಣ್ಣ ಮನಸ್ಥಿತಿ ಮತ್ತು ಶಕ್ತಿಯ ಮೇಲೆ ಪರಿಣಾಮ ಬೀರುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ತಿಳಿ ಹಸಿರು, ತಿಳಿ ಹಳದಿ ಅಥವಾ ಕೆನೆಯಂತಹ ತಿಳಿ ಬಣ್ಣಗಳು ಇದಕ್ಕೆ ಸೂಕ್ತ. ಯಾಕೆಂದರೆ ಈ ಬಣ್ಣಗಳು ಅಡುಗೆ ಮಾಡುವಾಗ ಶಾಂತಿ, ಉಷ್ಣತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುತ್ತವೆ.

ಈಶಾನ್ಯ ಮೂಲೆಯಲ್ಲಿ ಏನಿರಬೇಕು?

ಅಡುಗೆ ಮನೆಯ ಈಶಾನ್ಯ ಮೂಲೆಯಲ್ಲಿ ಯಾವುದೇ ಭಾರವಾದ ವಸ್ತು ಇಡಬಾರದು. ಇಲ್ಲಿ ಯಾವುದೇ ಅಸ್ತವ್ಯಸ್ತತೆಯೂ ಇರಕೂಡದು. ಈಶಾನ್ಯ ಮೂಲೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಧನಾತ್ಮಕ ಶಕ್ತಿಗಳು ಮನೆಗೆ ಮುಕ್ತವಾಗಿ ಹರಿಯುವಂತೆ ಮಾಡಲು ಈ ಮೂಳೆಯನ್ನು ಮುಕ್ತ ಮತ್ತು ಸ್ವಚ್ಛವಾಗಿಡಬೇಕು.

ವಾಸ್ತು ಯಂತ್ರಗಳು ಎಲ್ಲಿರಬೇಕು?

ಅಡುಗೆ ಮನೆಯ ಈಶಾನ್ಯ ಗೋಡೆಯ ಮೇಲೆ ವಾಸ್ತು ಯಂತ್ರವನ್ನು ಇರಿಸಬಹುದು. ಇದು ಅಡುಗೆಕೋಣೆಯಲ್ಲಿ ಉತ್ಪಾದನೆಯಾಗುವ ಶಕ್ತಿಗಳನ್ನು ಸಮತೋಲನಗೊಳಿಸಲು, ನಕಾರಾತ್ಮಕತೆಯನ್ನು ದೂರಮಾಡಿ ಸಕಾರಾತ್ಮಕತೆಯನ್ನು ಆಕರ್ಷಿಸಲು ಸಹಾಯ ಮಾಡುತ್ತದೆ.

ರೆಫ್ರಿಜರೇಟರ್ ಎಲ್ಲಿರಬೇಕು?

ರೆಫ್ರಿಜರೇಟರ್ ಅಡುಗೆ ಮನೆಯ ನೈಋತ್ಯ ದಿಕ್ಕಿನಲ್ಲಿ ಇರಿಸಬಹುದು. ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ದೀರ್ಘಕಾಲ ಉಳಿದ ಅಥವಾ ಅವಧಿ ಮೀರಿದ ಆಹಾರದಿಂದ ನಿಶ್ಚಲವಾದ ಶಕ್ತಿಯು ಸಮೃದ್ಧಿ ಮತ್ತು ಆರೋಗ್ಯದಲ್ಲಿ ತೊಂದರೆಯನ್ನು ಉಂಟು ಮಾಡುತ್ತದೆ.

ನೀರು ಮತ್ತು ಬೆಂಕಿ ಸ್ಥಳಗಳು

ಅಡುಗೆ ಕೋಣೆಯಲ್ಲಿ ಎಂದಿಗೂ ಸಿಂಕ್ ಮತ್ತು ಒಲೆಯನ್ನು ಅಕ್ಕಪಕ್ಕ ಇದಕೂಡದು. ಅವುಗಳ ನಡುವೆ ನಿರ್ದಿಷ್ಟ ಅಂತರ ಇರಬೇಕು. ಒಂದು ವೇಳೆ ಅನಿವಾರ್ಯವಾದರೆ ಮರದಿಂದ ಅಥವಾ ಹಸಿರು ಸಸ್ಯಗಳಿಂದ ವಿಭಜಕಗಳನ್ನು ಮಾಡಿ. ಯಾಕೆಂದರೆ ಇದು ಸಂಬಂಧ ಮತ್ತು ಭಾವನಾತ್ಮಕ ಯೋಗಕ್ಷೇಮದ ಮೇಲೆ ಪರಿಣಾಮ ಬಿರುವುದು.

ಇದನ್ನೂ ಓದಿ: Vastu Tips: ಬಿದಿರಿನ ಗಿಡ ಮನೆಯಲ್ಲಿದ್ದರೆ ಏನೆಲ್ಲಾ ಲಾಭವಿದೆ ಗೊತ್ತೇ?

vastu2

ಹಸಿರು ಅವೆಂಚುರಿನ್ ಕಲ್ಲಿನ ಪಿರಮಿಡ್

ಅಡುಗೆಮನೆಯ ಉತ್ತರ ದಿಕ್ಕಿನಲ್ಲಿ ಹಸಿರು ಅವೆಂಚುರಿನ್ ಕಲ್ಲಿನ ಪಿರಮಿಡ್ ಅನ್ನು ಇಡುವುದು ವೃತ್ತಿ ಮತ್ತು ಆರ್ಥಿಕ ಅವಕಾಶಗಳನ್ನು ಹಚ್ಚಿಸುತ್ತದೆ ಎಂದು ನಂಬಲಾಗುತ್ತದೆ. ಹಸಿರು ಅವೆಂಚುರಿನ್ ಅದೃಷ್ಟ, ಸಮೃದ್ಧಿ ಮತ್ತು ಹೊಸ ಆರಂಭಗಳನ್ನು ಆಕರ್ಷಿಸುತ್ತದೆ.