ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ದಂಪತಿಯ ನಡುವೆ ಪ್ರೀತಿ ಹೆಚ್ಚಿಸಲು ಸಹಾಯ ಮಾಡುತ್ತೆ ಈ ಗಿಡಗಳು

ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರಬೇಕು ಎನ್ನುವ ಬಯಕೆ ಎಲ್ಲರದ್ದು. ಆದರೆ ದಂಪತಿಯ (vastu tips for couples) ನಡುವೆ ಬರುವ ಕೆಲವು ಸಣ್ಣಪುಟ್ಟ ಮನಸ್ತಾಪಗಳು ಮನೆ ಮಂದಿಯ ಸುಖ, ಶಾಂತಿ, ನೆಮ್ಮದಿಯನ್ನು ಹಾಳು ಮಾಡುತ್ತದೆ. ದಂಪತಿಯ ನಡುವೆ ಮನಸ್ತಾಪಗಳಿಗೆ ಕೆಲವೊಮ್ಮೆ ವಾಸ್ತು ದೋಷಗಳೂ ಕಾರಣವಾಗುತ್ತದೆ. ಇದನ್ನು ಕೆಲವು ಸುಲಭ ವಿಧಾನದ ಮೂಲಕ ಪರಿಹರಿಸಿಕೊಳ್ಳಲು ಸಾಧ್ಯವಿದೆ.

ಮನೆಯ ಸುತ್ತಮುತ್ತ ಇರಲಿ ಈ ಗಿಡಗಳು

ಮನೆಯಲ್ಲಿ (Vastu for home) ಕೆಲವೊಂದು ಗಿಡಗಳನ್ನು ಇಡುವುದರಿಂದ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವನ್ನು ಸುಂದರ ಮತ್ತು ಸುಖಮಯವಾಗುವಂತೆ ಮಾಡಬಹುದು. ದಂಪತಿಯ (vastu tips for couples) ನಡುವೆ ಬರುವ ಕೆಲವು ಸಣ್ಣಪುಟ್ಟ ಮನಸ್ತಾಪಗಳು ಮನೆ ಮಂದಿಯ ಸುಖ, ಶಾಂತಿ, ನೆಮ್ಮದಿಯನ್ನು ಹಾಳು ಮಾಡುತ್ತದೆ. ಆದರೆ ಕೆಲವೊಂದು ಸಸ್ಯಗಳನ್ನು ಮನೆಯಲ್ಲಿ ಇರಿಸುವುದರಿಂದ ಸಂಬಂಧಗಳಲ್ಲಿ ಸಕಾರಾತ್ಮಕತೆಯನ್ನು ತರಬಹುದಾಗಿದೆ. ಅಂತಹ ಸಸ್ಯಗಳ ಕುರಿತು ವಾಸ್ತು ಶಾಸ್ತದಲ್ಲೂ ಹೇಳಲಾಗಿದೆ. ಈ ಸಸ್ಯಗಳು (Vastu for plant) ಸಂಬಂಧದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಹೆಚ್ಚಾಗುವಂತೆ ಮಾಡುತ್ತದೆ. ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಮನೆ ಹಾಗೂ ಸುತ್ತಮುತ್ತ ಸುಗಂಧಭರಿತ ಗಿಡಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು ಎನ್ನುತ್ತದೆ ವಾಸ್ತು ಶಾಸ್ತ್ರ. ಇದರಲ್ಲಿ ನಿತ್ಯಹರಿದ್ವರ್ಣ, ಚಂಪಾ, ಮಲ್ಲಿಗೆ ಮತ್ತು ಚಾಂದನಿ ಗಿಡಗಳು ಸೇರಿವೆ.

ದಂಪತಿಯ ನಡುವೆ ಸಕಾರಾತ್ಮಕತೆ ಮತ್ತು ಪ್ರೀತಿಯನ್ನು ತರುವ ಈ ಗಿಡಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಗಂಡ ಮತ್ತು ಹೆಂಡತಿಯ ನಡುವೆ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ.

ಈ ಸಸ್ಯಗಳು ದಂಪತಿಯ ನಡುವಿನ ಮನಸ್ತಾಪಗಳನ್ನು ದೂರ ಮಾಡುವುದು ಮಾತ್ರವಲ್ಲ ಅವುಗಳಲ್ಲಿ ಬೆಳೆಯುವ ಹೂವುಗಳು ಮನೆಯ ವಾತಾವರಣವನ್ನು ಆಹ್ಲಾದಕರವಾಗಿಸುತ್ತದೆ ಮತ್ತು ಅದೃಷ್ಟವನ್ನು ತರುವಲ್ಲಿ ಸಹಾಯ ಮಾಡುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.

ನಿತ್ಯಹರಿದ್ವರ್ಣ ಸಸ್ಯಗಳು ಗುಲಾಬಿ ಮತ್ತು ಬಿಳಿ ಬಣ್ಣದ ಹೂವುಗಳನ್ನು ಹೊಂದಿರುತ್ತದೆ. ಇದು ಮನೆ ಮಂದಿಯಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ತರುತ್ತದೆ. ಇದನ್ನು ಮನೆಯ ಪೂರ್ವ ದಿಕ್ಕಿನಲ್ಲಿ ನೆಡುವುದರಿಂದ ಗಂಡ ಮತ್ತು ಹೆಂಡತಿಯ ನಡುವೆ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ. ತನ್ನ ಹೆಸರಿನಂತೆಯೇ ಇದು ಸದಾ ಹಸಿರಾಗಿರುತ್ತದೆ. ಇದರ ಸಕಾರಾತ್ಮಕ ಕಂಪನಗಳು ಮನೆ ಮಂದಿಯಲ್ಲಿ ಪ್ರೀತಿಯನ್ನು ಕೂಡ ಸದಾ ಕಾಪಾಡುವಂತೆ ಮಾಡುತ್ತದೆ. ಇದರಲ್ಲಿ ಬಿಳಿ ಹೂವುಗಳನ್ನು ನವವಿವಾಹಿತರಿಗೆ ವಿಶೇಷವಾಗಿ ಶುಭವೆಂದು ಪರಿಗಣಿಸಲಾಗಿದೆ. ಯಾಕೆಂದರೆ ಅವು ಮನಸ್ಸಿಗೆ ಶಾಂತಿ ಮತ್ತು ಸ್ಥಿರತೆಯನ್ನು ಕೊಡುತ್ತದೆ. ಪರಸ್ಪರರ ಮೇಲೆ ಪ್ರೀತಿ, ವಿಶ್ವಾಸವನ್ನು ಹೆಚ್ಚಿಸುತ್ತದೆ.

champa

ಬಿಳಿ ಚಂಪಾ ಹೂವಿನ ಗಿಡಗಳು ಶುದ್ಧತೆ, ಶಾಂತಿ ಮತ್ತು ಆಧ್ಯಾತ್ಮಿಕ ಜ್ಞಾನದ ಸಂಕೇತವಾಗಿದೆ. ಮನೆಯಲ್ಲಿ ಈ ಸಸ್ಯವನ್ನು ನೆಡುವುದರಿಂದ ದಂಪತಿಯ ನಡುವೆ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ.

ಇದನ್ನೂ ಓದಿ: Vastu Tips: ಊಟದ ಮೇಜಿನ ಮೇಲೆ ಇವುಗಳನ್ನು ಇಡಲೇಬಾರದು ಎನ್ನುತ್ತದೆ ವಾಸ್ತು

ದಂಪತಿಯ ನಡುವೆ ಪ್ರೀತಿ ಮತ್ತು ಸಮರ್ಪಣೆಯನ್ನು ಹೆಚ್ಚಿಸಲು ಮಲ್ಲಿಗೆ ಸಸ್ಯ ಶುಭವಾಗಿದೆ. ಇದನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬೇಕು. ಮಲ್ಲಿಗೆ ಹೂವಿನ ಸುವಾಸನೆಯು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವನ್ನು ಉಂಟು ಮಾಡಿ ಮಾನಸಿಕ ಒತ್ತಡವನ್ನು ದೂರ ಮಾಡುತ್ತದೆ.

moon

ಮನೆಯಲ್ಲಿ ಸಕಾರಾತ್ಮಕತೆಯನ್ನು ಆಹ್ವಾನಿಸುವ ಚಾಂದಿನಿ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ ದಂಪತಿಯ ನಡುವೆ ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗುತ್ತದೆ. ಚಾಂದಿನಿ ಸಸ್ಯವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಟ್ಟರೆ ಒಳ್ಳೆಯದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.