KD The Devil: ‘ಕೆಡಿ’ ಟ್ರೈಲರ್ ಡಿಲೀಟ್ ಆಗೋಕೆ ಅದೇ ಕಾರಣ; ಪ್ರೇಮ್ ಉತ್ತರ ಇಲ್ಲಿದೆ
Director Prem: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಕೆಡಿ: ದಿ ಡೆವಿಲ್’ ಚಿತ್ರದ ಟ್ರೇಲರ್ ಏಪ್ರಿಲ್ 22 ರಂದು ರಿಲೀಸ್ ಆಯ್ತು. ಏಪ್ರಿಲ್ 24 ರಂದು ಏಕಾಏಕಿ ‘ಕೆಡಿ’ ಚಿತ್ರದ ಟ್ರೇಲರ್‌ನ ಯೂಟ್ಯೂಬ್‌ನಿಂದ ತೆಗೆಯಲಾಯಿತು. ಸೆನ್ಸಾರ್ ಸರ್ಟಿಫಿಕೇಷನ್ ಪ್ರಾಬ್ಲಂನಿಂದಾಗಿ ‘ಕೆಡಿ’ ಟ್ರೇಲರ್‌ನ ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಯಿತು. ಈ ಬಗ್ಗೆ ಪ್ರೇಮ್ ಹೇಳಿದ ಮಾತಿದು.
Yashaswi Devadiga
Apr 25, 2026 6:26 PM
ನಟ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕೆಡಿ: ದಿ ಡೆವಿಲ್' ಚಿತ್ರತಂಡಕ್ಕೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇತ್ತು. ಸೆರಗ ಸರ್ಸೆ ಹಾಡು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಸೆನ್ಸಾರ್ ಸಮಸ್ಯೆ ಎದುರಾಗಿರುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು."ಕೆಡಿ" ಚಿತ್ರತಂಡವು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ತನ್ನ ಅಧಿಕೃತ ಟ್ರೈಲರ್ ಅನ್ನು ಯೂಟ್ಯೂಬ್‌ನಿಂದ ತಾತ್ಕಾಲಿಕವಾಗಿ ಹಿಂಪಡೆದಿದೆ. ಟ್ರೈಲರ್ ಡಿಲೀಟ್ ಆಗೋಕೆ ಅದೇ ಕಾರಣ ಏನು? ಈ ಎಲ್ಲ ವಿಚಾರಗಳ ಬಗ್ಗೆ ನಿರ್ದೇಶಕ ಪ್ರೇಮ್ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.