ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ತಮ್ಮ ಹಕ್ಕಿಗಾಗಿ ಮಹಿಳೆಯರು 40 ವರ್ಷಗಳಿಂದ ಕಾದಿದ್ದರು”: ಲೋಕಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಗುಡುಗು

MP Tejasvi Surya: ʼʼತಮ್ಮ ಹಕ್ಕಿಗಾಗಿ ಮಹಿಳೆಯರು 40 ವರ್ಷಗಳಿಂದ ಕಾಯುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ನಾರಿ ಶಕ್ತಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿದೆʼʼ ಎಂದು ಸಂಸದ ತೇಜಸ್ವಿ ಸೂರ್ಯ ಶ್ಲಾಘಿಸಿದರು.

ಲೋಕಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು?

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಬಗ್ಗೆ ಮಾತನಾಡಿದ ತೇಜಸ್ವಿ ಸೂರ್ಯ -

Priyanka P
Priyanka P Apr 16, 2026 6:38 PM

ನವದೆಹಲಿ, ಏ. 16: ಲೋಕಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯ (Tejaswi Surya) ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಬಗ್ಗೆ ಮಾತನಾಡಿದ್ದಾರೆ. ʼʼತಮ್ಮ ಹಕ್ಕಿಗಾಗಿ ಮಹಿಳೆಯರು 40 ವರ್ಷಗಳಿಂದ ಕಾಯುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ನಾರಿ ಶಕ್ತಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಿದೆʼʼ ಎಂದು ಅವರು ಶ್ಲಾಘಿಸಿದರು. ಈ ಹಿಂದೆ ಸಮಾಜವಾದಿ ಪಕ್ಷ ಮತ್ತು ಆರ್‌ಜೆಡಿಯಂತಹ ಪಕ್ಷಗಳು ಈ ಮಸೂದೆಯನ್ನು ವಿರೋಧಿಸಿ ಹರಿದು ಹಾಕಿದ್ದವು ಎಂದು ನೆನಪಿಸಿದ ಅವರು, ʼʼಈಗಿನ ವಿರೋಧ ಪಕ್ಷಗಳು ಕ್ಷೇತ್ರ ಮರುವಿಂಗಡಣೆಯ (Delimitation of constituencies) ನೆಪವೊಡ್ಡಿ ಮಸೂದೆಯನ್ನು ವಿಳಂಬ ಮಾಡುತ್ತಿವೆʼʼ ಎಂದು ಟೀಕಿಸಿದರು. ʼʼ1971ರಿಂದ ಲೋಕಸಭಾ ಸೀಟುಗಳ ಸಂಖ್ಯೆಯನ್ನು 543ಕ್ಕೆ ಸೀಮಿತಗೊಳಿಸಲಾಗಿದ್ದ ಸಮಯದಲ್ಲಿ ದೇಶದ ಜನಸಂಖ್ಯೆ 55 ಕೋಟಿ ಇತ್ತು. ಈಗ 140 ಕೋಟಿ ದಾಟಿದೆ. ಉತ್ತಮ ಆಡಳಿತಕ್ಕಾಗಿ ಸೀಟುಗಳ ಹೆಚ್ಚಳ ಅತ್ಯಗತ್ಯʼʼ ಎಂದು ಪ್ರತಿಪಾದಿಸಿದರು. ʼʼಈ ಮಸೂದೆಗೆ ದಕ್ಷಿಣ ಭಾರತದ ರಾಜ್ಯಗಳು ವಿರೋಧಿಸುತ್ತಿವೆ. ನಾನೊಬ್ಬ ಹೆಮ್ಮೆಯ ಕನ್ನಡಿಗನಾಗಿ ಹೇಳುತ್ತಿದ್ದೇನೆ. ದಕ್ಷಿಣ ಭಾರತಕ್ಕೆ ಒಂದು ಅಂಶದಷ್ಟು ಅನ್ಯಾಯವಾಗಿದ್ದರೂ ನಾನು ಮೊದಲು ಇದನ್ನು ವಿರೋಧಿಸುತ್ತಿದ್ದೆ. ಕೇರಳ, ಕರ್ನಾಟಕಕ್ಕೆ ಇದು ಲಾಭವಾಗಲಿದೆʼʼ ಎಂದು ಲೋಕಸಭೆಯಲ್ಲಿ ತೇಜಸ್ವಿ ಸೂರ್ಯ ಆರ್ಭಟಿಸಿದರು.