ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಂಗೀತ ಸಂಯೋಜಕ ರಮೇಶ್ ವಿನಾಯಕಂ ಜತೆ ಪ್ರಧಾನಿ ಚರ್ಚೆ; ʼವಂದೇ ಮಾತರಂʼ ನುಡಿಸಿ ಗಮನ ಸೆಳೆದ ಮೋದಿ

Vande Mataram on a gamaka box: ಚುನಾವಣಾ ಪ್ರಚಾರದ ಮಧ್ಯೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಖ್ಯಾತ ಸಂಯೋಜಕ ರಮೇಶ್ ವಿನಾಯಕಂ ಮತ್ತು ಅವರ ಕುಟುಂಬವನ್ನು ಭೇಟಿಯಾದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಟ್ಯಾಬ್ಲೆಟ್‌ನಲ್ಲಿ ವಂದೇ ಮಾತರಂ ನುಡಿಸಿದರು.

Priyanka P
Priyanka P Apr 4, 2026 6:07 PM

ಚೆನ್ನೈ, ಏ. 4: ಚುನಾವಣಾ ಪ್ರಚಾರದ ಮಧ್ಯೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಖ್ಯಾತ ಸಂಯೋಜಕ ರಮೇಶ್ ವಿನಾಯಕಂ (Ramesh Vinayakam) ಮತ್ತು ಅವರ ಕುಟುಂಬವನ್ನು ಭೇಟಿಯಾದರು. ಈ ವೇಳೆ ಮೋದಿ ಗಮಕ ಪೆಟ್ಟಿಗೆ ಬಗ್ಗೆ ತಿಳಿದುಕೊಂಡರು. ವಿನಾಯಕಂ ಅವರ ಮಾರ್ಗದರ್ಶನದಲ್ಲಿ ಪ್ರಧಾನಿ ಮೋದಿ ಟ್ಯಾಬ್ಲೆಟ್‌ನಲ್ಲಿ ವಂದೇ ಮಾತರಂ ನುಡಿಸುವುದನ್ನು ಕಲಿತರು. ʼʼನೀವು ಅತ್ಯುತ್ತಮ ವಿದ್ಯಾರ್ಥಿ ಸರ್ʼʼ ಎಂದು ರಮೇಶ್ ವಿನಾಯಕಂ ಪ್ರಧಾನಿಯನ್ನು ಶ್ಲಾಘಿಸಿದರು. ʼʼರಮೇಶ್ ಅತ್ಯುತ್ತಮ ಸಂಗೀತ ಸಂಯೋಜಕರಾಗಿದ್ದು, ಭಾರತೀಯ ಸಂಗೀತವನ್ನು ಜನಪ್ರಿಯಗೊಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆʼʼ ಎಂದು ಮೋದಿ ಅಭಿನಂದಿಸಿದರು.