ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೇಸಗೆಯಲ್ಲಿ ಮುಖದ ಮೊಡವೆ, ಟ್ಯಾನ್ ರಿಮೂವ್ ಮಾಡುವ ಸುಲಭ ಕ್ರಮ ಇಲ್ಲಿದೆ

ಸುಡು ಬಿಸಿಲು ಬೆವರಿನಿಂದಾಗಿ ಸಾಕಷ್ಟು ಜನರು ಮುಖದ ಆರೈಕೆ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ. ಸೂರ್ಯನ ನೇರ ಕಿರಣ- ಬೆವರು ಸೇರಿ ಮುಖದ ಅಂದವನ್ನೇ ಕೆಡಿಸುತ್ತದೆ. ಇವುಗಳಿಂದ ಮುಖದ ಮೇಲೆ ಮೊಡವೆ, ಸನ್ ಬರ್ನ್ ಮತ್ತು ಚರ್ಮ ಕಪ್ಪಾಗುವ ಸಮಸ್ಯೆಗಳು ಕಂಡು ಬರುತ್ತವೆ. ಇದಕ್ಕೆ ಮನೆಯಲ್ಲೇ ಯಾವ ರೀತಿಯ ಆರೈಕೆ ಮಾಡಬಹುದು? ಸುಲಭ ಪರಿಹಾರ ಏನು ಎಂದು ಆಯುರ್ವೇದ ಸೌಂದರ್ಯ ತಜ್ಞೆ ದೀಪಾ ನಾಗೇಶ್ ಮಾಹಿತಿ ನೀಡಿದ್ದಾರೆ.

Profile
Pushpa Kumari Apr 21, 2026 3:21 PM

ಬೆಂಗಳೂರು, ಏ. 21: ಹೆಚ್ಚಾಗಿ ಮುಖದಲ್ಲಿ ಮೊಡವೆ ಅಥವಾ ಟ್ಯಾನ್ ಆದಾಗ ಕೆಮಿಕಲ್ ಪ್ರಾಡಕ್ಟ್‌ಗಳ ಮೊರೆ ಹೊಗಿ ಸರ್ಕಸ್ ಮಾಡುತ್ತೇವೆ. ಆದರೆ ವಿವಿಧ ರೀತಿಯ ಐಸ್ ಕ್ಯೂಬ್ ಬಳಸಿ ಮನೆಯಲ್ಲೇ ಪರಿಹಾರ ಪಡೆದುಕೊಳ್ಳಬಹುದು. ಸೌತೆ ಕಾಯಿಯ ಸಿಪ್ಪೆ ಸುಳಿದು ಮಿಕ್ಸ್ ಜಾರಿನಲ್ಲಿ ಗ್ರೈನ್ ಮಾಡಿ ಐಸ್ ಟ್ರೇ ಒಳಗೆ ಇಟ್ಟರೆ ಸೌತೆ ಕಾಯಿ ಐಸ್ ಕ್ಯೂಬ್ ಸಿದ್ಧವಾಗುತ್ತದೆ, ಇದನ್ನು ಮುಖಕ್ಕೆ ಮಸಾಜ್ ಮಾಡಬಹುದು. ಇದೇ ರೀತಿ ವಿವಿಧ ಹಣ್ಣುಗಳನ್ನು ಬಳಕೆ ಮಾಡಿಯೂ ಐಸ್ ಕ್ಯೂಬ್ ಸಿದ್ಧವಾಗಿಟ್ಟು ಮುಖಕ್ಕೆ ಮಸಾಜ್ ಮಾಡುವ ಮೂಲಕ ಕಾಂತಿ ಹೆಚ್ಚಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.