ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೀಲ್ಸ್ ಚಟ; ಹೆಚ್ಚು ವೀವ್ಸ್‌ಗಾಗಿ 30 ಅಡಿ ಎತ್ತರದ ಡ್ಯಾಮ್‌ನಿಂದ ಜಿಗಿದು ಎರಡೂ ಕಾಲು ಮುರಿದುಕೊಂಡ ವ್ಯಕ್ತಿ!

Viral Video: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು 30 ಅಡಿ ಎತ್ತರದ ಡ್ಯಾಮ್ ಮೇಲಿಂದ ನೀರಿಗೆ ಜಿಗಿದು ಎರಡೂ ಕಾಲುಗಳನ್ನು ಮುರಿದುಕೊಂಡಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಇಂತಹ ಹುಚ್ಚು ಸಾಹಸ ಬೇಕೇ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಅಪಾಯಕಾರಿ ರೀಲ್ಸ್ ಮಾಡಲು ಹೋಗಿ ಎರಡು ಕಾಲು ಮುರಿದುಕೊಂಡ ವ್ಯಕ್ತಿ!

ಇಂಟರ್ ನೆಟ್ ಚಿತ್ರ -

Profile
Pushpa Kumari Sep 8, 2026 3:24 PM

ಉತ್ತರಪ್ರದೇಶ,ಸೆ.8: ಇತ್ತೀಚೆಗೆ ರೀಲ್ಸ್ ಹುಚ್ಚು ಅನ್ನೋದು ಮಿತಿ ಮೀರಿದೆ. ಜೀವಕ್ಕೆ ಅಪಾಯವಾದರೂ ತೊಂದರೆಯಿಲ್ಲ,ತನಗೆ ಲೈಕ್ಸ್, ವೀವ್ಸ್ ಮುಖ್ಯ ಎಂದು ನಾನಾ ರೀತಿಯ ಸಾಹಸ ಮೆರೆಯಲು ಹೋಗುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು 30 ಅಡಿ ಎತ್ತರದ ಡ್ಯಾಮ್ ಮೇಲಿಂದ ನೀರಿಗೆ ಜಿಗಿದು ಎರಡೂ ಕಾಲುಗಳನ್ನು ಮುರಿದು ಕೊಂಡಿದ್ದಾರೆ. ಈ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ಇಂತಹ ಹುಚ್ಚು ಸಾಹಸ ಬೇಕೇ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ರಸ್ತೆ ಮಧ್ಯೆ ಸ್ಟಂಟ್ ಮಾಡುವುದು, ರೈಲು ಹಳಿಯಲ್ಲಿ ನಿಂತು ವಿಡಿಯೊ ಚಿತ್ರೀಕರಣ ಮಾಡುವುದು ಇತ್ಯಾದಿ ಸಾಹಸ ಮಾಡಿ ಅಪಾಯಕ್ಕೆ ಸಿಲುಕಿದವರು ಅನೇಕರು ಇದ್ದಾರೆ. ಇದೀಗ ಝಾನ್ಸಿಯ ಪಹುಜ್ ಡ್ಯಾಮ್ ಬಳಿಯಲ್ಲಿ ಪುಷ್ಪೇಂದ್ರ (38) ಎಂಬ ವ್ಯಕ್ತಿ ತಮ್ಮ ಸ್ನೇಹಿತರೊಂದಿಗೆ ರೀಲ್ಸ್ ಮಾಡಲು ಇಲ್ಲಿಗೆ ಆಗಮಿಸಿದ್ದರು. ಆದರೆ ಕ್ಯಾಮರಾ ಎದುರು ಸಾಹಸ ಮಾಡಲು ಹೋಗಿ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಜಿಗಿದಿದ್ದಾರೆ.

ವಿಡಿಯೋ ನೋಡಿ:

ಆದಾಗ್ಯೂ, ನೀರಿನ ಮಟ್ಟ ಕಡಿಮೆ ಇದ್ದ ಕಾರಣ, ಪುಷ್ಪೇಂದ್ರ ಆಳವಾದ ನೀರಿಗೆ ಬೀಳುವ ಬದಲು ಬಂಡೆಗಳ ಮೇಲೆ ಬಿದ್ದು, ಎರಡೂ ಕಾಲುಗಳಿಗೆ ಗಂಭೀರವಾಗಿ ಗಾಯ ಮಾಡಿಕೊಂಡಿದ್ದಾರೆ.​ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದರಿಂದ ಅವರಿಗೆ ನೀರಿನಿಂದ ಹೊರಬರಲು ಸಾಧ್ಯವಾಗದೆ ಮುಳುಗುವ ಸ್ಥಿತಿ ನಿರ್ಮಾಣವಾಗಿತ್ತು. ನೋವಿನ ನಡುವೆಯೂ ಈಜಿ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದು ಸ್ಥಳೀಯರು ಕೂಡಲೇ ನೀರೊಳಗಿಂದ ರಕ್ಷಿಸಿದ್ದಾರೆ.

Viral Video: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ; ನಿದ್ದೆಯ ಮಂಪರಿನಲ್ಲಿ ಬೈಕ್ ಸವಾರನನ್ನು ಅರ್ಧ ಕಿಲೋ ಮೀಟರ್ ಎಳೆದೊಯ್ದ ಉಬರ್ ಚಾಲಕ

ಅವರನ್ನು ತಕ್ಷಣ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಎರಡೂ ಕಾಲುಗಳು ಮುರಿದಿವೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ಘಟನೆಯಲ್ಲಿ ಮತ್ತೊಂದು ಆಘಾತಕಾರಿ ವಿಷಯವೆಂದರೆ, ವ್ಯಕ್ತಿ ಜಿಗಿಯುವ ದೃಶ್ಯವನ್ನು ಆತನ ಸ್ನೇಹಿತರು ವಿಡಿಯೊ ಮಾಡಿದ್ದು ಜಿಗಿ ಯುವ ಕೆಲವೇ ಕ್ಷಣಗಳ ಮೊದಲು ಆತನ ಸ್ನೇಹಿತನೊಬ್ಬ ತಮಾಷೆ ಮಾಡಿದ್ದು "ದೇವರು ನಿನ್ನ ಆತ್ಮಕ್ಕೆ ಶಾಂತಿ ನೀಡಲಿ" ಎಂದು ಹೇಳಿರುವುದು ಕಂಡು ಬಂದಿದೆ.

ಈ ಘಟನೆಯು ವೈರಲ್ ಆಗಲು ಹೋಗಿ ಅಪಾಯಕಾರಿ ಸಾಹಸಗಳನ್ನು ಮಾಡುವುದರಿಂದ ಉಂಟಾಗುವ ಅಪಾಯಗಳನ್ನು ಎತ್ತಿ ತೋರಿಸಿದೆ. ಬಳಕೆದಾರರೊಬ್ಬರು ಕೇವಲ ಒಂದು ಸೆಕೆಂಡಿನ‌ ರೀಲ್ಸ್ ಪ್ರಾಣಕ್ಕೆ ಕುತ್ತು ತರಬಹುದು ಎಂದು ಅಘಾತ ವ್ಯಕ್ತ ಪಡಿಸಿದ್ದಾರೆ.