ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪುಟ್ಟ ಸನ್ಯಾಸಿಗಳೊಂದಿಗೆ ಮಠದಲ್ಲಿ ಫುಟ್‌ಬಾಲ್ ಆಡಿದ ಗೋಲ್ಡನ್ ರಿಟ್ರೈವರ್ ನಾಯಿ: ಕ್ಯೂಟ್ ವಿಡಿಯೊ ನೋಡಿ!

Viral News: ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯ ನೈಜ ಸೌಂದರ್ಯದ ಮಧ್ಯೆ ಅಪರೂಪದ ಘಟನೆಯೊಂದು ನಡೆದಿದೆ. ಮಠ ವೊಂದರಲ್ಲಿ ಪುಟ್ಟ ಬೌದ್ಧ ಸನ್ಯಾಸಿಗಳು ಫುಟ್‌ಬಾಲ್ ಆಡುತ್ತಿದ್ದಾಗ ಮಾಫು ಎಂಬ ಹೆಸರಿನ ಗೋಲ್ಡನ್ ರಿಟ್ರೈವರ್‌ ತಳಿಯ ನಾಯಿ ಅವರ ಜೊತೆಗೆ ಆಟಕ್ಕೆ ಎಂಟ್ರಿ ಕೊಟ್ಟಿದೆ. ಸನ್ಯಾಸಿಗಳು ಕೂಡ ತಮ್ಮ ತಂಡದಲ್ಲಿ ಗೋಲ್ಡನ್ ರಿಟ್ರೈವರ್ ಅನ್ನು ಸಂತೋಷದಿಂದ ಸ್ವಾಗತಿಸಿದ್ದಾರೆ. ಈ ಮುದ್ದಾದ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಪುಟ್ಟ ಬೌದ್ಧ ಸನ್ಯಾಸಿಗಳ ಜೊತೆ ಫುಟ್ ಬಾಲ್ ಆಡಿದ ಶ್ವಾನ: ಮುದ್ದಾದ ದೃಶ್ಯ!

ಪುಟ್ಟ ಬೌದ್ಧ ಸನ್ಯಾಸಿಗಳ ಜೊತೆ ಫುಟ್ ಬಾಲ್ ಆಡಿದ ಶ್ವಾನ -

Profile
Pushpa Kumari Sep 8, 2026 3:33 PM

ಹಿಮಾಚಲ ಪ್ರದೇಶ,ಸೆ.8: ಶ್ವಾನಗಳ ಮುದ್ದಾದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಇದೀಗ ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯ ನೈಜ ಸೌಂದರ್ಯದ ಮಧ್ಯೆ ಅಪರೂಪದ ಘಟನೆಯೊಂದು ನಡೆದಿದೆ. ಮಠವೊಂದರಲ್ಲಿ ಪುಟ್ಟ ಬೌದ್ಧ ಸನ್ಯಾಸಿಗಳು ಫುಟ್‌ಬಾಲ್ ಆಡುತ್ತಿದ್ದಾಗ ಮಾಫು ಎಂಬ ಹೆಸರಿನ ಗೋಲ್ಡನ್ ರಿಟ್ರೈವರ್‌ ತಳಿಯ ನಾಯಿ ಅವರ ಜೊತೆಗೆ ಆಟಕ್ಕೆ ಎಂಟ್ರಿ ಕೊಟ್ಟಿದೆ. ಸನ್ಯಾಸಿಗಳು ಕೂಡ ತಮ್ಮ ತಂಡದಲ್ಲಿ ಗೋಲ್ಡನ್ ರಿಟ್ರೈವರ್ ಅನ್ನು ಸಂತೋಷದಿಂದ ಸ್ವಾಗತಿಸಿದ್ದಾರೆ. ಈ ಮುದ್ದಾದ ದೃಶ್ಯ (Viral News) ನೆಟ್ಟಿಗರ ಮನ ಗೆದ್ದಿದೆ.

ಶ್ವಾನಗಳಿಗೆ ಒಮ್ಮೆ ಕಾಳಜಿ ವಹಿಸಿದರೆ ಸಾಕು, ಬೇರೊಂದನ್ನೂ ಅವು ಕೇಳುವುದಿಲ್ಲ. ಪ್ರೀತಿ ಮತ್ತು ನಿಷ್ಠೆಯ ಶುದ್ಧ ರೂಪವಾಗಿ ಮಾಲೀಕನನ್ನು ಕಾಪಾಡುತ್ತದೆ. ಅದೇ ರೀತಿ ​ಸ್ಪಿಟಿಯ ಮಠವೊಂದರಲ್ಲಿ ಪುಟ್ಟ ಬೌದ್ಧ ಸನ್ಯಾಸಿಗಳು ಫುಟ್‌ಬಾಲ್ ಆಡುತ್ತಿದ್ದಾಗ, ಗೋಲ್ಡನ್ ರಿಟ್ರೈವರ್ ತಳಿಯ ನಾಯಿ ತಾನು ಫುಟ್ ಬಾಲ್ ಆಡುತ್ತೇನೆ ಎಂಬಂತೆ ಆಟದ ಮಧ್ಯೆ ಸೇರಿಕೊಂಡಿದೆ.

ವಿಡಿಯೋ ನೋಡಿ:

​ಸಂಪ್ರದಾಯಿಕ ಉಡುಪಿನಲ್ಲಿದ್ದ ಪುಟ್ಟ ಸನ್ಯಾಸಿಗಳು ಕೂಡ ಈ ಮುದ್ದಾದ ನಾಯಿಯನ್ನು ತಮ್ಮ ತಂಡಕ್ಕೆ ಸೇರಿಸಿ ಕೊಂಡಿದ್ದಾರೆ. ಬಾಲ್ ಹಿಡಿಯಲು ಪ್ರಯತ್ನಿಸುತ್ತಾ ಮಕ್ಕಳೊಂದಿಗೆ ಹೆಜ್ಜೆ ಹಾಕುತ್ತ ಮೈದಾನದಲ್ಲಿ ಅದು ಓಡಾಡುತ್ತಿದೆ. ಆಟದ ಮಧ್ಯೆ ಬಾಲಕನೊಬ್ಬನಿಗೆ ನಾಯಿ ಅಡ್ಡ ಬಂದರೂ ಕೂಡ ಮಗು ತನ್ನ ಸಮತೋಲನ ಕಾಯ್ದುಕೊಂಡು ಆಟ ಮುಂದುವರಿಸಿದೆ. ಈ ದೃಶ್ಯವು ವೀಕ್ಷಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

Viral Video: ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ? ನೆಟ್ಟಿಗರ ಪ್ರಶ್ನೆ

ಮಾಫು ಮೈದಾನದ ಉದ್ದಕ್ಕೂ ಯುವ ಆಟಗಾರರೊಂದಿಗೆ ಸುತ್ತಾಡುತ್ತಿದ್ದರೂ ಪುಟ್ಟ ಸನ್ಯಾಸಿಗಳು ಆಟವನ್ನು ಮುಂದುವರಿಸಲು ಉತ್ಸಾಹದಿಂದ ಪ್ರಯತ್ನಿಸುತ್ತಿದ್ದರು. ಪೋಸ್ಟ್‌ನ ಶೀರ್ಷಿಕೆಯಲ್ಲಿ, "ಗೋಲ್ಡನ್ ರಿಟ್ರೈವರ್‌ನ ಮಾಲೀಕರು ಬರೆದಿದ್ದಾರೆ..ತಾವು ಸ್ಪಿಟಿಯ ಮಠವೊಂದರಲ್ಲಿ ತಂಗಿದ್ದಾಗ ಈ ದೃಶ್ಯ ಕಂಡುಬಂದಿದೆ. ಮಾಫು ಸನ್ಯಾಸಿಗಳ ಜೊತೆ ಫುಟ್‌ಬಾಲ್ ಆಡುವ ಖುಷಿ ​ಎಂದು ಬಳಕೆ ದಾರ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗಾಗಲೇ 1.8 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ನೆಟ್ಟಿಗರು "ಇದು ಇಂದಿನ ಅತ್ಯಂತ ಸುಂದರ ವಿಡಿಯೋ" ಎಂದು ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.