ಪರಿಚಯವಾದ ಕೆಲವೇ ದಿನಕ್ಕೆ ಮದುವೆ ಪ್ರಸ್ತಾಪ: ಯುವತಿಯನ್ನು ಒಪ್ಪಿಸಲು ಸ್ಯಾಲರಿ ಸ್ಲಿಪ್ ಕಳುಹಿಸಿದ ಯುವಕ!
Viral News: ಯುವತಿಯೊಬ್ಬಳಿಗೆ ಪರಿಚಯವಾದ ನಾಲ್ಕೇ ದಿನಕ್ಕೆ ಯುವಕನು ಮದುವೆ ಪ್ರಸ್ತಾಪ ಇಟ್ಟ ಘಟನೆಯನ್ನು ವಿವರಿಸಿದ್ದಾಳೆ. ಅಷ್ಟೇ ಅಲ್ಲದೆ ತಾನು ಶ್ರೀಮಂತ ಹುಡುಗನನ್ನು ಬಯಸುತ್ತಿದ್ದೇನೆ ಎಂದು ಸ್ಯಾಲರಿ ಸ್ಲಿಪ್ ಅನ್ನು ಕಳುಹಿಸಿರುವ ಬಗ್ಗೆ ರೆಡ್ಡಿಟ್ ನಲ್ಲಿ ಬರೆದುಕೊಂಡಿದ್ದಾಳೆ...
ಸಂಗ್ರಹ ಚಿತ್ರ -
ನವದೆಹಲಿ,ಜು.15: ಇಂದಿನ ಆಧುನಿಕ ಯುಗದಲ್ಲಿ ಮದುವೆಯಾಗಲು ಸರಿಯಾದ ವಧು ಸಿಗುತ್ತಿಲ್ಲ ಎಂದು ಹೆಚ್ಚಿನ ಯುವಕರು ದೂರುತ್ತಾರೆ. ಹೆಣ್ಣಿನ ಕಡೆಯವರೆಗೆ ನಿರೀಕ್ಷೆಗಳು ಹೆಚ್ಚಾಗಿದ್ದು ಶ್ರೀಮಂತ ಹುಡುಗರನ್ನಷ್ಟೇ ಒಪ್ಪಿಕೊಳ್ಳುತ್ತಾರೆ ಎನ್ನುವ ಚರ್ಚೆಗಳು ಆಗುತ್ತಿರುತ್ತವೆ. ಸೋಷಿಯಲ್ ಮೀಡಿಯಾದಲ್ಲೂ ಇದಕ್ಕೆ ಸಂಬಂಧ ಪಟ್ಟ ಘಟನೆಗಳು ವೈರಲ್ ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಯುವತಿಯೊಬ್ಬಳಿಗೆ ಪರಿಚಯವಾದ ನಾಲ್ಕೇ ದಿನಕ್ಕೆ ಯುವಕನು ಮದುವೆ ಪ್ರಸ್ತಾಪ ಇಟ್ಟ ಘಟನೆಯನ್ನು ವಿವರಿಸಿದ್ದಾಳೆ. ಅಷ್ಟೇ ಅಲ್ಲದೆ ತಾನು ಶ್ರೀಮಂತ ಹುಡುಗನನ್ನು ಬಯಸುತ್ತಿದ್ದೇನೆ ಎಂದು ಸ್ಯಾಲರಿ ಸ್ಲಿಪ್ ಅನ್ನು ಕಳುಹಿಸಿರುವ ಬಗ್ಗೆ ರೆಡ್ಡಿಟ್ ನಲ್ಲಿ (Viral News) ಬರೆದುಕೊಂಡಿದ್ದಾಳೆ.
ತನಗೆ ಕೆಲವು ದಿನಗಳಿಂದ ಪರಿಚಿತನಾಗಿದ್ದ ಯುವಕನೊಬ್ಬ ಮದುವೆಯ ಬಗ್ಗೆಯೇ ಪ್ರಸ್ತಾಪ ಇಟ್ಟಿದ್ದಾನೆ. ಅಷ್ಟೇ ಅಲ್ಲದೆ ಒಳ್ಳೆಯ ಸಂಗಾತಿಯಾಗುತ್ತಾನೆ ಎಂದು ಮನವೊಲಿಸಲು ಆತನ ಸಂಬಳ ಚೀಟಿಗಳನ್ನು ಕಳುಹಿಸಿದನು ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಯುವತಿಗೆ ತನ್ನ ಸ್ನೇಹಿತನ ಮೂಲಕ ಈ ಯುವಕನ ಪರಿಚಯವಾಗಿತ್ತು. ಆರಂಭದಲ್ಲಿ ಇಬ್ಬರ ಹಾಸ್ಯ ಮಾತುಗಳು ಹಾಗೂ ಆಲೋಚನೆಗಳು ಕನೆಕ್ಟ್ ಆಗಿರುವುದರಿಂದ ಸ್ನೇಹ ಪರವಾಗಿ ಇದ್ದರು. ಆದರೆ ಪರಿಚಯ ವಾದ ಕೇವಲ ನಾಲ್ಕೇ ದಿನಗಳಲ್ಲಿ ಯುವಕ ಮದುವೆಯ ಬಗ್ಗೆ ಮಾತನಾಡಲು ಆರಂಭ ಮಾಡಿದ್ದು ಯುವತಿಯೂ ಅಚ್ಚರಿಗೆ ಒಳಗಾಗಿದ್ದಾಳೆ.
ಆಕೆ ಇತ್ತೀಚೆಗೆ ಕಾಲೇಜು ಪ್ರಾರಂಭಿಸಿದ್ದು ಮದುವೆಯ ಬಗ್ಗೆ ಯೋಚಿಸಲು ಸಿದ್ಧವಾಗಿಲ್ಲ ಎಂದು ಹೇಳಿದ್ದಳು.ಅಷ್ಟೇ ಅಲ್ಲದೆ ತನಗೆ ಧೂಳಿನ ಅಲರ್ಜಿ ಸಮಸ್ಯೆ ಕೂಡ ಇದೆ ಎಂದು ಹೇಳಿ ಕೊಂಡಿದ್ದಳು. ಯುವಕ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಭಾರತದಲ್ಲೇ ಉಳಿದು ತನ್ನ ತಂದೆಯ ಪೀಠೋಪಕರಣ ವ್ಯವಹಾರವನ್ನು ಮಾಡುತ್ತೇನೆಂದು ಹೇಳಿಕೊಂಡಿದ್ದ. ಆದರೆ ಯುವತಿ ತಾನು ಓದು ಮುಗಿಸಬೇಕು ಹಾಗೂ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಮದುವೆಗೆ ನಿರಾಕರಣೆ ಮಾಡಿದ್ದಾಳೆ.
Viral News: ಕರ್ನಾಟಕ ಮಾತ್ರವಲ್ಲ ಆಸ್ಟ್ರೇಲಿಯಾದಲ್ಲೂ ಇದೆ ಮಂಗಳೂರು; ಏನೀದರ ಇತಿಹಾಸ?
ಆದರೆ ಆಕೆ ತನ್ನ ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ಹೆದರುತ್ತಿದ್ದಾಳೆ ಎಂದು ಯುವಕ ಅರ್ಥೈಸಿ ಕೊಂಡು ತನ್ನ ಸಂಬಳದ ಚೀಟಿ ಮತ್ತು ಇತರ ಹಣಕಾಸಿನ ದಾಖಲೆಗಳನ್ನು ಆಕೆಗೆ ಕಳುಹಿಸಿದ್ದಾನೆ. ಇದರ ಜೊತೆ ಆರಾಮದಾಯಕ ಜೀವನವನ್ನು ಒದಗಿಸುವುದಾಗಿ ಮತ್ತು ಪ್ರತಿ ವರ್ಷ ವಿದೇಶ ಪ್ರವಾಸ ಕರೆದೊಯ್ಯುವುದಾಗಿ ಭರವಸೆ ನೀಡಿದ್ದನೆಂದು ಅವಳು ಹೇಳಿಕೊಂಡಳು.
ಈ ಅನುಭವವನ್ನು ಹಂಚಿಕೊಳ್ಳುತ್ತಾ "ನಾನು ಶ್ರೀಮಂತ ಹುಡುಗನನ್ನು ಮಾತ್ರ ಮದುವೆ ಯಾಗುತ್ತೇನೆ ಎಂದು ನಾನು ಯಾವಾಗಲೂ ನನ್ನ ಆತ್ಮೀಯ ಸ್ನೇಹಿತರ ಜೊತೆ ತಮಾಷೆ ಮಾಡುತ್ತಿದ್ದೆ. ಆದರೆ ನಾನು ಹಣಕ್ಕೆ ಆಸೆ ಪಡುವುದಿಲ್ಲ ಎಂಬುದು ಈಗ ನನಗೇ ತಿಳಿದಿದೆ'' ಎಂದು ಬರೆದುಕೊಂಡಿದ್ದಾಳೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದು ಮದುವೆಯಾಗುವಂತೆ ಮನವೊಲಿಸಲು ಯುವಕನು ಇನ್ಮುಂದೆ ಸಂಬಳ ಚೀಟಿಗಳು ಮತ್ತು ಹಣಕಾಸಿನ ದಾಖಲೆಗಳನ್ನು ಹಂಚಿಕೊಳ್ಳುವುದು ಉತ್ತಮ ಆಯ್ಕೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಯುವಕರು ಇನ್ಮುಂದೆ ಮದುವೆಯಾಗಲು ಯಾವ ದಾಖಲೆಗಳನ್ನು ತೋರಿಸಲು ಸಿದ್ದರಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.