Viral Video: ಹುಚ್ಚು ಪ್ರೀತಿ! ರೈಲು ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಪ್ರೇಯಸಿಯ ಕಾಲು ಹಿಡಿದು ಯುವಕನ ಹೈಡ್ರಾಮ
ಮಹಾರಾಷ್ಟ್ರದ ಮುಂಬೈಯ ಬೊರಿವಲಿ ರೈಲು ನಿಲ್ದಾಣದಲ್ಲಿ ಯುವಕನ ಅತಿರೇಕದ ವರ್ತನೆ ಕಂಡು ಜನ ಕಿಡಿಕಾರಿದ್ದಾರೆ. ವಿಡಿಯೊದಲ್ಲಿ ಯುವಕನೊಬ್ಬ ಪ್ಲಾಟ್‌ಫಾರ್ಮ್ ಮೇಲೆ ಮಲಗಿ, ಯುವತಿಯೊಬ್ಬಳ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಿರುವ ದೃಶ್ಯ ಕಂಡು ಬಂದಿದೆ. ಯುವತಿ ಆತನ ಹಿಡಿತದಿಂದ ಬಿಡಿಸಿಕೊಳ್ಳಲು ಪದೇ ಪದೆ ಪ್ರಯತ್ನಿಸಿದ್ದಾಳೆ. ಇದರ ಹೊರತಾಗಿಯೂ, ಆತ ಆಕೆಯ ಕಾಲನ್ನು ಬಿಟ್ಟಿಲ್ಲ.
ಮುಂಬೈಯ ರೈಲು ನಿಲ್ದಾಣದಲ್ಲಿ ಯುವತಿಯ ಕಾಲಿಗೆರಗಿದ ಯುವಕ -
ಮುಂಬೈ, ಜು. 12: ಇತ್ತೀಚೆಗೆ ಯುವಕ-ಯುವತಿಯರ ಹುಚ್ಚಾಟ ಮಿತಿ ಮೀರಿದೆ. ಸಾರ್ವಜನಿಕ ಸ್ಥಳದಲ್ಲೆ ಜಗಳವಾಡುವ, ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ವಿಡಿಯೊಗಳು ವೈರಲ್ (Viral News) ಆಗುತ್ತಿರುತ್ತವೆ. ಇದೀಗ ಮಹಾರಾಷ್ಟ್ರದ ಮುಂಬೈಯ ಬೊರಿವಲಿ ರೈಲು ನಿಲ್ದಾಣದಲ್ಲಿ ಯುವಕನ ವರ್ತನೆ ಕಂಡು ಜನ ಕಿಡಿಕಾರಿದ್ದಾರೆ. ವಿಡಿಯೋದಲ್ಲಿ ಯುವಕನೊಬ್ಬ ಪ್ಲಾಟ್‌ಫಾರ್ಮ್ ಮೇಲೆ ಮಲಗಿ, ಯುವತಿಯೊಬ್ಬಳ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಿರುವ ದೃಶ್ಯ ಕಂಡು ಬಂದಿದೆ. ಯುವತಿ ಆತನ ಹಿಡಿತದಿಂದ ಬಿಡಿಸಿ ಕೊಳ್ಳಲು ಪದೇ ಪದೆ ಪ್ರಯತ್ನಿಸಿದ್ದಾಳೆ. ಆಕೆಯ ಪ್ರಯತ್ನಗಳ ಹೊರತಾಗಿಯೂ ಆತ ಕಾಲನ್ನು ಬಿಟ್ಟುಕೊಟ್ಟಿಲ್ಲ. ಇವರಿಬ್ಬರು ಪ್ರೇಮಿಗಳು ಎನ್ನಲಾಗಿದೆ.
ತಿಳಿ ನೀಲಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ಯುವಕನೊಬ್ಬ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿ ಯುವತಿಯ ಕಾಲನ್ನು ಬಿಗಿಯಾಗಿ ಹಿಡಿದುಕೊಳ್ಳುವುದರೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ಹಸಿರು-ಬಿಳಿ ಬಣ್ಣದ ಉಡುಪನ್ನು ಧರಿಸಿ, ಮುಖವನ್ನು ಮುಚ್ಚಿಕೊಂಡ ಯುವತಿ ಅವನ ಹಿಡಿತದಿಂದ ಬಿಡಿಸಿಕೊಳ್ಳಲು ಪದೇ ಪದೆ ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ವಿಡಿಯೊ ನೋಡಿ:
ಈ ಹೈಡ್ರಾಮ ನೋಡಲು ರೈಲು ನಿಲ್ದಾಣ ಬಳಿ ಜನ ಸಾಗರವೇ ತುಂಬಿ ಹೋಗಿತ್ತು. ಸ್ಥಳದಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ತಕ್ಷಣ ಈ ದೃಶ್ಯ ನೋಡಿ ಯುವಕನನ್ನು ಪ್ರಶ್ನಿಸಿದ್ದಾರೆ. ಈ ವಿಡಿಯೊದ ಮೇಲೆ ನಿಜವಾದ ಪ್ರೀತಿ ಮತ್ತು ಬೊರಿವಲಿ ರೈಲ್ವೇ ಸ್ಟೇಷನ್ ಎಂದು ಬರೆಯಲಾಗಿದೆ. ಆದರೆ ಈ ವಿಡಿಯೊ ಕಂಡು ಕೆಲವರು ಕಿಡಿಕಾರಿದ್ದು ಪ್ರೀತಿಯನ್ನು ರೈಲು ನಿಲ್ದಾಣದಲ್ಲಿ ಹರಾಜು ಹಾಕುವದಲ್ಲ, ವೈಯಕ್ತಿಕವಾಗಿ ಬಗೆಹರಿಸಿಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಗಾಯಗೊಂಡಂತೆ ನಟಿಸಿ ನೆರವಿಗೆ ಧಾವಿಸಿದ ವ್ಯಕ್ತಿಯಿಂದಲೇ 1 ಲಕ್ಷ ರುಪಾಯಿಯ ಐಫೋನ್ ದೋಚಿದ ಖದೀಮರು!
ಈಗಾಗಲೇ ಈ ವಿಡಿಯೊ 60 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇಂತಹ ಕಾಲದಲ್ಲಿ ಇಷ್ಟೊಂದು ಹಠವಾಗಿ ಪ್ರೀತಿಸುವವರು ಎಲ್ಲಿ ಇರುತ್ತಾರೆ? ಎಂದು ಕೆಲವರು ಕಮಂಟ್ ಮಾಡಿದರೆ ಅನೇಕರು ಜನದಟ್ಟಣೆಯ ರೈಲ್ವೆ ನಿಲ್ದಾಣದಲ್ಲಿ ಇಂತಹ ನಡವಳಿಕೆಯ ಅಗತ್ಯವನ್ನು ಪ್ರಶ್ನಿಸಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರಾಗಲಿ ಅಥವಾ ರೈಲ್ವೇ ಇಲಾಖೆಯಾಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.