ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಲಿಸುವ ರೈಲಿನಲ್ಲೇ ಪಾನ್ ತಯಾರಿಸಿದ ವ್ಯಾಪಾರಿ: ಸ್ವಚ್ಛತೆ ಬಗ್ಗೆ ನೆಟ್ಟಿಗರ ಆತಂಕ

Viral News: ಸಾರ್ವಜನಿಕ ಸಾರಿಗೆಯನ್ನು ತಮ್ಮದೇ ಆಸ್ತಿ ಎಂಬಂತೆ ಬಿಂಬಿಸಿ ಬಳಸಿಕೊಳ್ಳುತ್ತಿರುವವರು ಅನೇಕರು ಇದ್ದಾರೆ. ಇಲ್ಲೊಬ್ಬ ವ್ಯಕ್ತಿ ರೈಲಿನ 3ನೇ ಎಸಿ ಕೋಚ್‌ನಲ್ಲೇ ಕುಳಿತು ಬರೋಬ್ಬರಿ 25 ಪಾನ್‌ಗಳನ್ನು ರೆಡಿ ಮಾಡಿ ಅಚ್ಚರಿ ಮುಡಿಸಿದ್ದಾನೆ. ಮುಂಬೈಯಿಂದ ಛತ್ತೀಸ್‌ಗಢಕ್ಕೆ ಹೋಗುವ ರೈಲಿನಲ್ಲಿ ಈ ಘಟನೆ ನಡೆದಿದೆ.

ರೈಲು ಬೋಗಿಯಲ್ಲೇ ಪಾನ್‌ ತಯಾರಿಸಿದ ಮಾರಾಟಗಾರ; ನೈರ್ಮಲ್ಯದ ಬಗ್ಗೆ ಆತಂಕ

ರೈಲು ಬೋಗಿಯಲ್ಲೇ ಪಾನ್‌ ತಯಾರಿಸಿದ ಮಾರಾಟಗಾರ -

Profile
Pushpa Kumari Oct 17, 2026 9:09 PM

​ನವದೆಹಲಿ, ಅ‌. 17: ಇತ್ತೀಚೆಗೆ ರೈಲಿನಲ್ಲಿ ಅನೇಕ ವಿಚಿತ್ರ ಘಟನೆಗಳು ವರದಿಯಾಗಿವೆ. ಸಾರ್ವಜನಿಕ ಸಾರಿಗೆಯನ್ನು ತಮ್ಮದೇ ಆಸ್ತಿ ಎಂಬಂತೆ ಬಿಂಬಿಸಿ ಬಳಸಿಕೊಳ್ಳುತ್ತಿರುವವರು ಅನೇಕರು ಇದ್ದಾರೆ. ಇಲ್ಲೊಬ್ಬ ವ್ಯಕ್ತಿ ರೈಲಿನ 3ನೇ ಎಸಿ ಕೋಚ್‌ನಲ್ಲೇ ಕುಳಿತು ಬರೋಬ್ಬರಿ 25 ಪಾನ್‌ಗಳನ್ನು ರೆಡಿ ಮಾಡಿ ಅಚ್ಚರಿ ಮೂಡಿಸಿದ್ದಾನೆ. ಮಹಾರಾಷ್ಟ್ರದ ಮುಂಬೈಯಿಂದ ಛತ್ತೀಸ್‌ಗಢಕ್ಕೆ ಹೋಗುವ ರೈಲಿನಲ್ಲಿ ಈ ಘಟನೆ (Viral News) ನಡೆದಿದೆ.

ಘಟನೆಯನ್ನು ವಿಡಿಯೊ ಮಾಡಿದ ಪ್ರಯಾಣಿಕರೊಬ್ಬರು ಈ ಬಗ್ಗೆ ತಿಳಿಸಿ, ʼʼಮಾರಾಟಗಾರನಿಗೆ ಸುಮಾರು 20ರಿಂದ 25 ಪಾನ್‌ಗಳ ಆರ್ಡರ್ ಬಂದಿದ್ದರಿಂದ ಪ್ರಯಾಣದ ವೇಳೆಯೇ ಅವುಗಳನ್ನು ತಯಾರಿಸುವ ಕೆಲಸದಲ್ಲಿ ಆತ ನಿರತನಾಗಿದ್ದʼʼ ಎಂದು ತಿಳಿಸಿದ್ದಾರೆ. ಆತ 3 ಎಸಿ ಕೋಚ್‌ನ ಲೋಯರ್ ಬರ್ತ್ ಮೇಲೆ ಒಂದು ಬಟ್ಟೆ ಹಾಸಿಕೊಂಡು ಕುಳಿತುಕೊಂಡು ಬರೋಬ್ಬರಿ 20ರಿಂದ 25 ಪಾನ್‌ಗಳನ್ನು ಮಾಡಿ ಪ್ಯಾಕ್ ಮಾಡಿದ್ದಾಗಿ ಹೇಳಿದ್ದಾರೆ.

ವಿಡಿಯೊ ನೋಡಿ:



ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರೈಲು ಬೋಗಿಗಳ ಒಳಗೆ ಇಂತಹ ಚಟುವಟಿಕೆ ನಡೆಸಲು ಅನುಮತಿ ಇದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಪಾನ್ ತಿನ್ನೋದು ಅವರವರ ಇಷ್ಟ ಆಗಿದ್ದರೂ ಪ್ರಯಾಣಿಕರು ಕುಳಿತುಕೊಳ್ಳಲು ಅಥವಾ ಮಲಗಲು ಇರುವ ರೈಲಿನ ಬರ್ತ್ ಅನ್ನು ಇಂತಹ ಕೆಲಸಗಳಿಗೆ ಬಳಸಿಕೊಳ್ಳುವುದು ಎಷ್ಟು ಸರಿ? ಎಂದು ಕೇಳುತ್ತಿದ್ದಾರೆ.

ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ತಲೆ ತಗ್ಗಿಸಿದ ನಾಗರಿಕ ಸಮಾಜ

ರೈಲಿನ ಬರ್ತ್‌ಗಳು ಮೂಲತಃ ಪ್ರಯಾಣಿಕರು ಕುಳಿತುಕೊಳ್ಳಲು ಅಥವಾ ಮಲಗಲು ಇರುತ್ತವೆ. ಇವುಗಳನ್ನು ಆಹಾರ ತಯಾರಿಸುವ ಸ್ಥಳವಾಗಿ ಬಳಸುವುದು ನೈರ್ಮಲ್ಯದ ದೃಷ್ಟಿಯಿಂದ ಆತಂಕಕಾರಿ. ಜನರು ಎಲ್ಲಿ ಬೇಕಾದರೂ ಏನನ್ನು ಬೇಕಾದರೂ ಮಾಡಬಹುದಾದ ಏಕೈಕ ದೇಶ ಭಾರತ. ಇಲ್ಲಿ ಸರ್ಕಾರವಾಗಲಿ ಅಥವಾ ಕಾನೂನಾಗಲಿ ಯಾವುದರ ಭಯವೂ ಇಲ್ಲ ಎಂದು ಬಳಕೆದಾರರೊಬ್ಬರು ಕಿಡಿಕಾರಿದ್ದಾರೆ.