ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೈಲಿನ ಕಿಟಕಿ, ರಾಡ್ ಧ್ವಂಸಗೊಳಿಸಿ ಹುಚ್ಚಾಟ ಮೆರೆದ ಯುವಕ: ವಿಡಿಯೋ ನೋಡಿದವರು ಏನಂದ್ರು?

Viral Video: ಸಾರ್ವಜನಿಕ ಸ್ಥಳದಲ್ಲಿರುವ ವಸ್ತುಗಳನ್ನು ಕೆಲವರು ತಮ್ಮದೆ ಆಸ್ತಿ ಎಂಬಂತೆ ಮೆರೆಯುತ್ತಿದ್ದಾರೆ.‌ ಪ್ರವಾಸಿ ಸ್ಥಳದಲ್ಲಿ ಕಸ ಎಸೆಯುವುದು, ವಸ್ತುಗಳನ್ನು ಮುಟ್ಟಿ ಹಾನಿ ಗೆಡವುದು ಹೀಗೆ ದಿನಕ್ಕೊಂದು ದೂರುಗಳು ಕೇಳಿ ಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಚಲಿಸುತ್ತಿದ್ದ ರೈಲಿನಲ್ಲಿ ಯುವಕ ನೊಬ್ಬ ಸಾರ್ವಜನಿಕ ಆಸ್ತಿಯನ್ನು ಧ್ವಂಸ ಗೊಳಿಸಿ ಮಜಾ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಈತನ ವರ್ತನೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.

ರೈಲಿನಲ್ಲಿದ್ದ ವಸ್ತುಗಳನ್ನು ಹಾನಿಗೊಳಿಸಿ ಯುವಕನ ವಿಕೃತಿ: ವಿಡಿಯೊ ವೈರಲ್

ರೈಲಿನ ಕಿಟಕಿ, ರಾಡ್ ಧ್ವಂಸಗೊಳಿಸಿ ಹುಚ್ಚಾಟ ಮೆರೆದ ಯುವಕ -

Profile
Pushpa Kumari Aug 7, 2026 8:26 PM

ನವದೆಹಲಿ,ಆ.7: ಭಾರತೀಯಲ್ಲಿ ನಾಗರಿಕ ಪ್ರಜ್ಞೆ ಅನ್ನೋದು ಇಂದು ಕಣ್ಮರೆಯಾಗಿದೆ. ಸಾರ್ವ ಜನಿಕ ಸ್ಥಳದಲ್ಲಿರುವ ವಸ್ತು ಗಳನ್ನು ಕೆಲವರು ತಮ್ಮದೆ ಆಸ್ತಿ ಎಂಬಂತೆ ಮೆರೆಯುತ್ತಿದ್ದಾರೆ.‌ ಪ್ರವಾಸಿ ಸ್ಥಳದಲ್ಲಿ ಕಸ ಎಸೆಯುವುದು, ವಸ್ತುಗಳನ್ನು ಮುಟ್ಟಿ ಹಾನಿ ಗೆಡವುದು ಹೀಗೆ ದಿನಕ್ಕೊಂದು ದೂರುಗಳು ಕೇಳಿ ಬರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಚಲಿಸುತ್ತಿದ್ದ ರೈಲಿನಲ್ಲಿ ಯುವಕನೊಬ್ಬ ಸಾರ್ವಜನಿಕ ಆಸ್ತಿಯನ್ನು ಧ್ವಂಸ ಗೊಳಿಸಿ ಮಜಾ ಮಾಡುತ್ತಿರುವ ವಿಡಿಯೊವೊಂದು ವೈರಲ್ (Viral News) ಆಗಿದೆ. ಈತನ ವರ್ತನೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದು ತರಾಟೆಗೆ ತೆಗೆದುಕೊಂಡಿದ್ದಾರೆ.

ಯುವಕನು ಲೋಹದ ರಾಡ್ ಅನ್ನು ಮುರಿಯಲು ಪ್ರಯತ್ನಿ ಸುತ್ತಿದ್ದು ಕಿಟಕಿಯಲ್ಲಿದ್ದ ರಬ್ಬರ್ ಪಟ್ಟಿಯನ್ನು ಹರಿದು ಹಾಕಲು ಮುಂದಾಗಿದ್ದಾನೆ. ಅದು ಸಾಧ್ಯವಾಗದಿದ್ದಾಗ ಬ್ಯಾಗ್ ಇಡುವ ಹುಕ್ ಹಾಗೂ ಪವರ್ ಸಾಕೆಟ್‌ಗಳನ್ನು ಧ್ವಂಸ ಮಾಡಲು ಯತ್ನಿಸಿದ್ದಾನೆ. ಈತನ ಸ್ನೇಹಿತರು ಅದನ್ನು ತಡೆಯುವ ಬದಲು ವಿಡಿಯೊ ಚಿತ್ರೀಕರಣ ಮಾಡುತ್ತಾ ಕಲಾಹರಣ ಮಾಡಿದ್ದಾರೆ. ಈ ವಿಡಿಯೊ ನೋಡಿದ ಅನೇಕರು ಯುವಕರ ವಿರುದ್ಧ ಕಿಡಿಕಾರಿದ್ದು ನಿಮ್ಮ ಸ್ವಂತ ಆಸ್ತಿಯೇ ಇದು? ಇಂತವರಿಗೆ ಸರಿಯಾದ ದಂಡ ವಿಧಿಸಿ ಎಂದು ಮನವಿ ಮಾಡಿದ್ದಾರೆ.

ವಿಡಿಯೋ ನೋಡಿ:



ವೈರಲ್ ವೀಡಿಯೊದಲ್ಲಿ, ಕಂದು ಬಣ್ಣದ ಶರ್ಟ್ ಧರಿಸಿದ್ದ ಯುವಕ, ಮೊದಲು ಕಿಟಕಿ ಜೋಡಿಸಲಾದ ರಬ್ಬರ್ ಪಟ್ಟಿಯನ್ನು ಹರಿದು ಹಾಕುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ ಪ್ರಯಾಣಿಕರ ಸುರಕ್ಷತೆಗಾಗಿ ಕಿಟಕಿಗೆ ಜೋಡಿಸಲಾದ ಲೋಹದ ರಾಡ್‌ಗಳಲ್ಲಿ ಒಂದನ್ನು ಮುರಿಯಲು ಅವನು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಈ ಘಟನೆಯು ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವ ಬಗ್ಗೆ ಮತ್ತು ಜನರ ಜವಾಬ್ದಾರಿಯ ಬಗ್ಗೆ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ.

Viral Video: ನೆರೆಮನೆಯ ಯುವಕನಿಂದನೇ ಕಿರುಕುಳ; ವಿಡಿಯೊ ಮಾಡಿ ಕಣ್ಣೀರು ಹಾಕಿದ ಅಪ್ರಾಪ್ತ ಬಾಲಕಿ

ಘಟನೆ ನಡೆದ ನಿಖರವಾದ ಸ್ಥಳವನ್ನು ಪರಿಶೀಲಿಸಲಾಗಿಲ್ಲ.ಅನೇಕರು ಈ ಕೃತ್ಯವನ್ನು ಖಂಡಿಸಿದ್ದು ವ್ಯಕ್ತಿಯ ವಿರುದ್ಧ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದಾರೆ.ಬಳಕೆದಾರರೊಬ್ಬರು ರೈಲ್ವೆ ಬೋಗಿಗಳು ಸಾರ್ವಜನಿಕ ಆಸ್ತಿಯಾಗಿದೆ, ದಯವಿಟ್ಟು ಇವರನ್ನು ಬಂಧಿಸಿ,ಭವಿಷ್ಯದಲ್ಲಿ ಯಾರೂ ಅಂತಹ ಕೆಲಸಗಳನ್ನು ಮಾಡಲು ಧೈರ್ಯ ಮಾಡಬಾರದು ಎಂದು ಬರೆದಿದ್ದಾರೆ.