ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

20 ರೂಪಾಯಿ ವಡಾಪಾವ್‌ಗೆ 15,000 ಖರ್ಚು ಮಾಡಿ ದೆಹಲಿಯಿಂದ ಮುಂಬೈಗೆ ತೆರಳಿದ ಯುವತಿ! ಟೇಸ್ಟ್‌ ಹೇಗಿತ್ತು?

Viral News: ಇಲ್ಲೊಬ್ಬರು ಕೇವಲ 20 ರೂಪಾಯಿ ವಡಪಾವ್ ತಿನ್ನಲು ದೆಹಲಿಯಿಂದ ಮುಂಬೈಗೆ ಪ್ರಯಾಣ ಮಾಡಿದ್ದಾರೆ. ಮುಂಬೈ ಶೈಲಿಯ ವಡಾಪಾವ್ ರುಚಿ ಹೇಗಿದೆ ಎಂದು ತಿಳಿದುಕೊಳ್ಳಲು 15,000 ರೂಪಾಯಿ ಖರ್ಚು ಮಾಡಿದ್ದಾರೆ. ಈ ಬಗ್ಗೆ ಯುವತಿ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ತಾನು ಸವಿದಿರುವ ಬೆಸ್ಟ್ ವಡಾಪಾವ್ ಎಂದು ಬರೆದುಕೊಂಡಿದ್ದಾರೆ.

20 ರೂ. ವಡಾಪಾವ್ ಖರೀದಿಗೆ ಫ್ಲೈಟ್ ಬುಕ್ ಮಾಡಿ ಮುಂಬೈಗೆ ಹೊರಟ ಯುವತಿ

20 ರೂ.ವಡಾಪಾವ್ ಖರೀದಿಗೆ ಫ್ಲೈಟ್ ಬುಕ್ ಮಾಡಿ ಮುಂಬೈ ಗೆ ಹೊರಟ ಯುವತಿ -

Profile
Pushpa Kumari Sep 7, 2026 1:49 PM

ಮುಂಬೈ,ಸೆ.7: ಸಾಮಾನ್ಯವಾಗಿ ಜೋರು ಹಸಿವಾದಾಗ ಎಷ್ಟು ದೂರ ಬೇಕಾದರೂ ಹೋಟೆಲ್, ರೆಸ್ಟೋರೆಂಟ್ ಹುಡುಕುತ್ತಾ ಸಾಗುತ್ತೇವೆ. ಆದರೆ ಇಲ್ಲೊಬ್ಬರು ಕೇವಲ 20 ರೂಪಾಯಿ ವಡಪಾವ್ ತಿನ್ನಲು ದೆಹಲಿಯಿಂದ ಮುಂಬೈಗೆ ಪ್ರಯಾಣ ಮಾಡಿದ್ದಾರೆ. ಮುಂಬೈ ಶೈಲಿಯ ವಡಾಪಾವ್ ರುಚಿ ಹೇಗಿದೆ ಎಂದು ತಿಳಿದುಕೊಳ್ಳಲು 15,000 ರೂಪಾಯಿ ಖರ್ಚು ಮಾಡಿದ್ದಾರೆ. ಈ ಬಗ್ಗೆ ಯುವತಿ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದು ತಾನು ಸವಿದಿರುವ ಬೆಸ್ಟ್ ವಡಾಪಾವ್ ಎಂದು ಬರೆದುಕೊಂಡಿದ್ದಾರೆ.

ಯುವತಿಯೂ ದೆಹಲಿಯಲ್ಲಿ ವಡಾ ಪಾವ್ ತಿನ್ನುತ್ತಿದ್ದಾಗ ಅದು ರುಚಿ ಇದೆ ಎಂದು ಅನಿಸರಲಿಲ್ಲ. ಹೀಗಾಗಿ ನಿಜವಾದ, ಅಸಲಿ ವಡಾಪಾವ್ ರುಚಿ ನೋಡಬೇಕಾದರೆ ಮುಂಬೈಗೆ ಹೋಗಲೇಬೇಕು ಎಂದು ನಿರ್ಧರಿಸಿದ ಅವರು ತಕ್ಷಣ ತಮ್ಮ ಬ್ಯಾಗ್‌ ಪ್ಯಾಕ್ ಮಾಡಿ ಹೊರಡಲು ಸಿದ್ದರಾಗಿದ್ದಾರೆ.

ವಿಡಿಯೋ ನೋಡಿ:

ಸೋಷಿಯಲ್ ಮೀಡಿಯಾದಲ್ಲಿ 'ವಿಟ್ಟಿ ಸ್ಪೇಸ್' ಹೆಸರಿನಿಂದ ಗುರುತಿಸಿಕೊಂಡಿರುವ ಯುವತಿಯೂ ​ರೂ. 15,000 ಖರ್ಚಾಗಿದ್ದು ಹೇಗೆ ಎಂದು ತಿಳಿಸಿದ್ದಾರೆ‌. ಕ್ಯಾಬ್‌ನಲ್ಲಿ ಪ್ರಯಾಣಿಸುವಾಗಲೇ ಆಕೆ 5,000 ರೂಪಾಯಿ ನೀಡಿ ಮುಂಬೈಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಅಲ್ಲಿಗೆ ತಲುಪಿ ತನ್ನ ವಿಮಾನಕ್ಕಾಗಿ ಕಾಯುತ್ತಿದ್ದಾಗ, 165 ರೂ. ಬೆಲೆಯ ಒಂದು ಕಪ್ ಚಹಾ ಕುಡಿಯಲು ನಿರ್ಧರಿಸಿದ್ದಾರೆ. ನಂತರ ಸಂಜೆ 4 ಗಂಟೆಗೆ ತನ್ನ ವಿಮಾನವನ್ನು ಹತ್ತಿದ ನಂತರ ನೂಡಲ್ಸ್‌ಗೆ 300 ರೂ. ಪಾವತಿಸಿದ್ದಾರೆ. ಸಂಜೆ 7 ಗಂಟೆಗೆ ಮುಂಬೈಗೆ ತಲುಪಿದರೂ, ನಗರದ ರಸ್ತೆ ಸಂಚಾರ ದಟ್ಟಣೆ ಯಿಂದಾಗಿ ಕೇವಲ 11 ಕಿ.ಮೀ ದೂರ ಕ್ರಮಿಸಲು ಆಕೆಗೆ 70 ನಿಮಿಷ ಬೇಕಾಯಿತು. ಹೀಗಾಗಿ, ಆ ರಾತ್ರಿ 4,000 ರೂಪಾಯಿ ನೀಡಿ ಹೋಟೆಲ್ ಕೊಠಡಿ ಬುಕ್ ಮಾಡಿ ತಂಗಿದ್ದಾಳೆ.​

Viral Video: ಕೆಲಸದ ಸಮಯ ಮುಗಿದ್ರೂ ಮನೆಗೆ ಹೋಗಂಗಿಲ್ಲ; ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್ ಮಾಡಿದ ಮ್ಯಾನೇಜರ್!

ಮಾರುದಿನ ಬೆಳಿಗ್ಗೆ ಬೀದಿಬದಿಯ ಸ್ಟಾಲ್‌ಗೆ ತೆರಳಿ ಕೊನೆಗೂ 20 ರೂಪಾಯಿ ನೀಡಿ ಬಿಸಿಬಿಸಿ ವಡಾಪಾವ್ ತಿಂದಿದ್ದಾರೆ. ಇದಕ್ಕಾಗಿ ಆಕೆ ಒಟ್ಟು 15,000 ರೂಪಾಯಿ ಖರ್ಚು ಮಾಡಿದ್ದಾಳೆ. ವಡಪಾವ್ ತಿಂದ ನಂತರ ಪ್ರತಿಕ್ರಿಯಿಸಿದ ಯುವತಿ, ಇಂತಹ ವಡಪಾವ್ ಮುಂಬೈನಲ್ಲಿ ಮಾತ್ರ ಸಿಗಲು ಸಾಧ್ಯ, ಇಷ್ಟು ಸಮಯ ಮತ್ತು ಹಣವನ್ನು ಖರ್ಚು ಮಾಡಿದ ನಂತರ, ಇದು ನನ್ನ ಜೀವನದ ಅತ್ಯುತ್ತಮ ವಡಾಪಾವ್ ಎಂದು ನಾನು ಹೇಳಬಲ್ಲೆ ಅಂದರು

​ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಬಳಕೆದಾರರು 20 ತಿಂಡಿಗೆ ರೂ. 15,000 ಖರ್ಚು ಮಾಡುವುದು ನಿಜವಾಗಿಯೂ ಯೋಗ್ಯವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ನೆಟ್ಟಿಗರೊಬ್ಬರು 15,000 ರೂಪಾಯಿ ಖರ್ಚು ಮಾಡಿದ ಮೇಲೆ ವಡಾಪಾವ್ ಇಷ್ಟವಿಲ್ಲದಿದ್ದರೂ ಚೆನ್ನಾಗಿದೆ ಎಂದು ಹೇಳಬೇಕಲ್ಲವೇ? ಎಂದು ಕಾಲೆಳೆದಿದ್ದಾರೆ