ಬಿಟ್ಟು ತಬಾಹಿ ಪರಿಸರ ಕಾಳಜಿಗೆ ನೆಟ್ಟಿಗರು ಫಿದಾ: ದೆಹಲಿಯ ಯಮುನಾ ನದಿ ಸ್ವಚ್ಛತಾ ಆಂದೋಲನದಲ್ಲಿ 585 ಕೆಜಿ ತ್ಯಾಜ್ಯ ವಿಲೇವಾರಿ!
Viral News: ಪರಿಸರ ಕಾಳಜಿ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾದ ಬಿಟ್ಟು ತಬಾಹಿ ತಮ್ಮ ಸ್ವಚ್ಚತಾ ಅಭಿಯಾನವನ್ನು ದೆಹಲಿಯಲ್ಲೂ ವಿಸ್ತರಣೆ ಮಾಡಿದ್ದಾರೆ. ವಿಶ್ವ ಸ್ವಚ್ಚತಾ ದಿನದ ಅಂಗವಾಗಿ ದೆಹಲಿಯ ಯಮುನಾ ನದಿ ತೀರದಲ್ಲಿ ಸ್ವಯಂ ಸೇವಕರೊಂದಿಗೆ ಒಟ್ಟುಗೂಡಿ 585 ಕೆಜಿ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ.
ಯಮುನಾ ನದಿ ಸ್ವಚ್ಛತೆಗೆ ಶ್ರಮಿಸಿದ ಬಿಟ್ಟು ತಬಾಹಿ -
ಮಧ್ಯಪ್ರದೇಶ,ಸೆ.22: ಪರಿಸರ ಕಾಳಜಿ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾದ (Viral News) ಬಿಟ್ಟು ತಬಾಹಿ ತಮ್ಮ ಸ್ವಚ್ಚತಾ ಅಭಿಯಾನವನ್ನು ದೆಹಲಿಯಲ್ಲೂ ವಿಸ್ತರಣೆ ಮಾಡಿದ್ದಾರೆ. ವಿಶ್ವ ಸ್ವಚ್ಚತಾ ದಿನದ ಅಂಗವಾಗಿ ದೆಹಲಿಯ ಯಮುನಾ ನದಿ ತೀರದಲ್ಲಿ ಸ್ವಯಂ ಸೇವಕರೊಂದಿಗೆ ಒಟ್ಟುಗೂಡಿ 585 ಕೆಜಿ ತ್ಯಾಜ್ಯ ವಿಲೇವಾರಿ ಮಾಡಿದ್ದಾರೆ. ಈ ಪ್ರದೇಶದಲ್ಲಿ ಪ್ಲಾಸ್ಟಿಕ್ ಮತ್ತು ಧಾರ್ಮಿಕ ವಸ್ತುಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ತ್ಯಾಜ್ಯವಿದ್ದು ನದಿ ದಡವನ್ನು ಸ್ವಚ್ಛಗೊಳಿಸಲು ಸ್ವಯಂಸೇವಕರು ಹಲವು ಗಂಟೆಗಳ ಕಾಲ ಒಟ್ಟಾಗಿ ಶ್ರಮಿಸಿದ್ದಾರೆ ಎಂದು ಬಿಟ್ಟು ತಬಾಹಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಮಧ್ಯಪ್ರದೇಶದ ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸುವ ವೀಡಿಯೊಗಳನ್ನು ಶೇರ್ ಮಾಡಿದ ಬಿಟ್ಟು ತಬಾಹಿ ಬಹಳಷ್ಟು ಜನಪ್ರಿಯರಾಗಿದ್ದಾರೆ. ಅವರ ಈ ಪ್ರಯತ್ನಗಳು 'ದಿ ಓಷನ್ ಕ್ಲೀನಪ್' ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ಬೋಯಾನ್ ಸ್ಲಾಟ್ ಅವರ ಮೆಚ್ಚುಗೆಗಳಿಸಿದ್ದು ಆ ಸಂಸ್ಥೆಯೊಂದಿಗೆ ಕೆಲಸ ಮಾಡುವ ಅವಕಾಶವನ್ನು ಕೂಡ ನೀಡಿದ್ದರು.
ವಿಡಿಯೋ ನೋಡಿ:
ಮಧ್ಯಪ್ರದೇಶದಲ್ಲಿ ಕಲುಷಿತ ನದಿಯನ್ನು ಸ್ವಚ್ಛ ಗೊಳಿಸುವ ಮೂಲಕ ಪ್ರಾರಂಭಿಸಿದ ಸ್ವಚ್ಛತಾ ಅಭಿಯಾನವು ಈಗ ದೆಹಲಿಯನ್ನು ತಲುಪಿದೆ. 'ಬಿಟ್ಟು ತಬಾಹಿ' ಎಂದೇ ಖ್ಯಾತರಾದ ಸುರೇಂದ್ರ ಸಿಂಗ್ ಚೌಧರಿ ತಮ್ಮ ಪರಿಸರ ಜಾಗೃತಿಯನ್ನು ಇತರ ಸ್ಥಳಗಳಿಗೂ ಪ್ರೇರೆಪಿಸಲು ಮುಂದಾಗಿದ್ದಾರೆ. ಇದೀಗ ಯಮುನಾ ನದಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಸೆಪ್ಟೆಂಬರ್ 21 ರಂದು ಶೇರ್ ಮಾಡಿದ ವೀಡಿಯೊದಲ್ಲಿ, ಅವರು ದೆಹಲಿಯಲ್ಲಿನ ತಮ್ಮ ಮೊದಲ ಸ್ವಚ್ಛತಾ ಕಾರ್ಯದ ಬಗ್ಗೆ ಮಾತನಾಡುತ್ತಾ, ಈ ಅಭಿಯಾನದ ವೇಳೆ 585 ಕೆಜಿ ತ್ಯಾಜ್ಯವನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದರು.
Viral Video: ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ
ಫಿಲಿಪ್ ಮೊರಿಸ್ ಸಂಸ್ಥೆಯೊಂದಿಗೆ ನಡೆದ ಅಭಿಯಾನದಲ್ಲಿ ಯಮುನಾ ನದಿ ತೀರವನ್ನು ಸ್ವಚ್ಛಗೊಳಿಸಲು ಸುಮಾರು ನಾಲ್ಕುವರೆ ಗಂಟೆಗಳ ಕಾಲ ಶ್ರಮಿಸಿದ ತಂಡವು, ನದಿ ತೀರದಲ್ಲಿದ್ದ ಅಪಾರ ಪ್ರಮಾಣದ ಕಸವನ್ನು ವಿಲೇವಾರಿ ಮಾಡಿದೆ. "ನಿಮಗೆಲ್ಲರಿಗೂ ತಿಳಿದಿರುವಂತೆ, ನಾನು ವಿವಿಧ ರಾಜ್ಯಗಳಿಗೆ ಪ್ರಯಾಣಿಸಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವನ್ನು ಕೈಗೊಂಡಿದ್ದೆ. ಯಮುನಾ ನದಿಯನ್ನು ಸ್ವಚ್ಛಗೊಳಿಸಲು ದೆಹಲಿಗೆ ಬರಬೇಕೆಂದು ನಾನು ತುಂಬಾ ಬಯಸಿದ್ದೆ. ನನ್ನ ವೀಡಿಯೊ ಫಿಲಿಪ್ ಮೋರಿಸ್ ಅವರನ್ನು ತಲುಪಿ ಅವರು ಬೆಂಬಲ ನೀಡಿದ್ದಾರೆ.
ಇದು ದೆಹಲಿಯಲ್ಲಿ ನಮ್ಮ ಮೊದಲ ಸ್ವಚ್ಛತಾ ಕಾರ್ಯಕ್ರಮ. ಎಲ್ಲರ ಸಹಕಾರದಿಂದ 585 ಕೆಜಿ ತ್ಯಾಜ್ಯವನ್ನು ಸಂಗ್ರಹಿಸಿದ್ದೇವೆ. ಸ್ಥಳೀಯರು ಸಹಾಯ ಮಾಡಲು ಕೈಜೋಡಿಸಿದ್ದ ಇಡೀ ನದಿ ದಡವನ್ನು ಸ್ವಚ್ಛಗೊಳಿಸಲಾಯಿತು ಎಂದು ತಿಳಿಸಿದ್ದಾರೆ. ಈ ಪರಿಸರ ಕಾಳಜಿಗೆ ನೆಟ್ಟಿಗರು ಮೆಚ್ಚುಗೆ ನೀಡಿದ್ದು ಬಳಕೆದಾರರೊಬ್ಬರು ಬಹಳಷ್ಟು ಅರ್ಥಪೂರ್ಣ ಕೆಲಸ ಎಂದು ಕಾಮೆಂಟ್ ಮಾಡಿದ್ದಾರೆ.