ಆಸ್ಟ್ರೇಲಿಯಾದಲ್ಲಿ ಯಶಸ್ಸುಗಳಿಸಿದ ಭಾರತೀಯ: ಪಿಜ್ಜಾ ಡೆಲಿವರಿ ಬಾಯ್‌ನಿಂದ ಮಾಲೀಕನಾಗಿ ಬೆಳೆದ ಯಶಸ್ಸಿನ ಪಯಣ!
Viral News: ಹನ್ನೊಂದು ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಭಾರತೀಯ ವ್ಯಕ್ತಿಯೊಬ್ಬರು ಕೆಲಸ ಸಿಗದೇ ಪರದಾಡಿದ ಅನುಭವ ಶೇರ್ ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲೇ ಶಿಕ್ಷಣ ಮುಗಿಸಿದ ಅವರಿಗೆ ಸೂಕ್ತವಾದ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ ಪಿಜ್ಜಾ ಶಾಪ್ ವೊಂದರಲ್ಲಿ ಡೆಲಿವರಿ ಸಿಬ್ಬಂದಿಯಾಗಿ ಕೆಲಸ ವಹಿಸಿಕೊಂಡಿದ್ದರು. ಈಗ ಸ್ವಂತ ಉದ್ಯಮ ನಡೆಸಿ ಮಾಲೀಕನಾಗಿ ಬೆಳೆದಿರುವ ಸುದ್ದಿ ಭಾರೀ ವೈರಲ್ ಆಗುತ್ತಿದೆ.
ಇಂಟರ್ ನೆಟ್ ಚಿತ್ರ -
ನವದೆಹಲಿ,ಸೆ. 21: ಯಾವುದೇ ಉದ್ಯಮದಲ್ಲಿ ಯಶಸ್ಸು ಪಡೆಯಬೇಕಾದರೆ ಹೆಚ್ಚಿನ ಶ್ರಮ ಕೂಡ ಅಗತ್ಯವಾಗಿರುತ್ತದೆ. ಇದೀಗ ಸುಮಾರು ಹನ್ನೊಂದು ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಭಾರತೀಯ ವ್ಯಕ್ತಿಯೊಬ್ಬರು ಕೆಲಸ ಸಿಗದೇ ಪರದಾಡಿದ ಅನುಭವ ಶೇರ್ (Viral News) ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲೇ ಶಿಕ್ಷಣ ಮುಗಿಸಿದ ಅವರಿಗೆ ಸೂಕ್ತವಾದ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ ಪಿಜ್ಜಾ ಶಾಪ್ ವೊಂದರಲ್ಲಿ ಡೆಲಿವರಿ ಸಿಬ್ಬಂದಿಯಾಗಿ ಕೆಲಸ ವಹಿಸಿಕೊಂಡಿದ್ದರು. ಈಗ ಸ್ವಂತ ಉದ್ಯಮ ನಡೆಸಿ ಮಾಲೀಕನಾಗಿ ಬೆಳೆದಿರುವ ಸುದ್ದಿ ಭಾರೀ ವೈರಲ್ ಆಗುತ್ತಿದೆ.
ಆಸ್ಟ್ರೇಲಿಯಾದಲ್ಲಿ ಪಿಜ್ಜಾ ಡೆಲಿವರಿ ಕೆಲಸದಿಂದ ಸ್ವಂತ ಉದ್ಯಮವನ್ನು ಕಟ್ಟುವವರೆಗೆ ಒಬ್ಬ ಭಾರತೀಯ ವ್ಯಕ್ತಿ ಸಾಗಿದ ಪಯಣವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನೀವೂ ತಮಗೆ ಸ್ಪೂರ್ತಿ ಎಂದು ಹೆಚ್ಚಿನ ಜನರು ಕಾಮೆಂಟ್ ಮಾಡಿದ್ದಾರೆ.
ಸುಮಾರು 3 ವರ್ಷಗಳ ಕಾಲ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ ಅವರು ಪಾರ್ಟ್ನರ್ಸ್ ಶೀಪ್ ಮೂಲಕ ಅದೇ ಪಿಜ್ಜಾ ಫ್ರಾಂಚೈಸಿಯನ್ನು ನಡೆಸಿಕೊಂಡು ಹೋಗಿದ್ದಾರೆ.ನಂತರ ತಮ್ಮ ಉದ್ಯಮ ವನ್ನು ಬೆಳೆಸಿ, ಒಟ್ಟು 3 ಪಿಜ್ಜಾ ಡೆಲಿವರಿ ಔಟ್‌ಲೆಟ್‌ಗಳ ಮಾಲೀಕರಾದರು. ಇದು ವಿದೇಶಕ್ಕೆ ತೆರಳಿದ ನಂತರ ಅವರು ಎಷ್ಟು ಪ್ರಗತಿ ಸಾಧಿಸಿದ್ದಾರೆ ಎಂಬುದನ್ನು ಎತ್ತಿ ತೋರಿಸಿದೆ. ಉದ್ಯಮಿ ವಿನೀತ್ ಕೆ. ಅವರು ಈ ಕಥೆಯನ್ನು ಶೇರ್ ಮಾಡಿದ್ದಾರೆ
ಕೋವಿಡ್-19 ಸಮಯದಲ್ಲಿ ಭಾರತಕ್ಕೆ ಮರಳಿ ಮದುವೆಯಾದ ಅವರು, ಪ್ರಸ್ತುತ ಇಬ್ಬರು ಮಕ್ಕ ಳೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಅಲ್ಲಿ ಸ್ವಂತ ಮನೆ ಹಾಗೂ BMW ಕಾರ್ ಖರೀದಿಸಿದ್ದು ತಮ್ಮ ಪೋಷಕರನ್ನೂ ಆಸ್ಟ್ರೇಲಿಯಾಕ್ಕೆ ಕರೆಸಿಕೊಂಡಿದ್ದಾರೆ. "ಆರಂಭದ ದಿನಗಳಲ್ಲಿ ಅವರು ಹಗಲಿರುಳು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಆದರೆ ಇಂದು ಯಶಸ್ಸು ಅವರದಾಗಿದೆ ಇದು ಹೆಮ್ಮೆಯ ವಿಷಯ" ಎಂದು ಶೇರ್ ಮಾಡಿದ ವ್ಯಕ್ತಿ ಬರೆದುಕೊಂಡಿದ್ದಾರೆ.
Viral Video: ಈ ಟ್ಯಾಕ್ಸಿಯಲ್ಲಿದೆ ಮಿನಿ ಮಾರ್ಟ್; ನೀವು ಪ್ರಯಾಣ ಮಾಡ್ತಾ ಉಚಿತ ಶಾಪಿಂಗ್ ಕೂಡ ಮಾಡಬಹುದು
ಬಳಕೆದಾರರೊಬ್ಬರು ಅಭಿನಂದನೆಗಳು. ಅದ್ಭುತ ಕಥೆ, ಕಠಿಣ ಪರಿಶ್ರಮಕ್ಕೆ ಸಾಟಿಯಿಲ್ಲ ಎಂದು ಬರೆದಿದ್ದಾರೆ. ಮತ್ತೊಬ್ಬರು ಭಾರತದಲ್ಲಿ ಸಿಗುವ ವೇತನಕ್ಕಿಂತ ವಿದೇಶಗಳಲ್ಲಿ ಸಿಗುವ ಶ್ರಮದ ಫಲ ಹೆಚ್ಚು ಎಂದು ಪ್ರತಿಕ್ರಿಯೆ ನೀಡಿದ್ದಾರೆ.