ನಡು ರಸ್ತೆಯಲ್ಲಿ ಗೆಳೆಯನನ್ನು ಥಳಿಸಿ, ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ; ಸರ್ಕಾರದ ವಿರುದ್ಧ ಜನರ ಆಕ್ರೋಶ
Viral News: ಯುವಕ- ಯುವತಿ ಜೋಡಿಗೆ ಪುಂಡರ ಗುಂಪೊಂದು ಅಡ್ಡಗಟ್ಟಿ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯೊಂದು ವರದಿಯಾಗಿದೆ. ಬಿಹಾರದ ಜಮುಯಿಯಲ್ಲಿ ಈ ಆಘತಕಾರಿ ನಡೆದಿದೆ. ಸ್ಥಳೀಯ ಯುವಕರ ಗುಂಪೊಂದು ರೌಡಿಗಳಂತೆ ವರ್ತಿಸಿ ದೌರ್ಜನ್ಯ ಎಸಗಿದ್ದಾರೆ.
ಬಿಹಾರದಲ್ಲಿ ಯುವಜೋಡಿಗೆ ಕಿರುಕುಳ ನೀಡಿದ ಪುಂಡರು -
ಬಿಹಾರ,ಸೆ.21: ಯುವಕ- ಯುವತಿ ಜೋಡಿಗೆ ಪುಂಡರ ಗುಂಪೊಂದು ಅಡ್ಡಗಡಿ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯೊಂದು ವರದಿಯಾಗಿದೆ. ಬಿಹಾರದ ಜಮುಯಿಯಲ್ಲಿ ಈ ಆಘತಕಾರಿ ನಡೆದಿದೆ. ಸ್ಥಳೀಯ ಯುವಕರ ಗುಂಪೊಂದು ರೌಡಿಗಳಂತೆ ವರ್ತಿಸಿ ದೌರ್ಜನ್ಯ ಎಸಗಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ (Viral News) ಬೆನ್ನಲ್ಲೇ ಪೊಲೀಸರು ತನಿಖೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸ್ಥಳೀಯ ಯುವಕರ ಗುಂಪೊಂದು ಜೋಡಿಯನ್ನು ಸುತ್ತುವರಿದು ನೀಡುತ್ತಿದೆ. ಮೊದಲಿಗೆ ಯುವಕನ ಶರ್ಟ್ ಕಾಲರ್ ಹಿಡಿದು ಯುವತಿಯನ್ನು ಪ್ರತ್ಯೇಕಿಸಿದ್ದಾರೆ. ಯುವತಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಮುಖಕ್ಕೆ ಬಟ್ಟೆ ಹಾಕಿಕೊಖಡಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಹಿಂದಿನಿಂದ ಹಿಡಿದು ಅಸಭ್ಯವಾಗಿ ವರ್ತನೆ ತೋರಿದ್ದಾನೆ
ವಿಡಿಯೋ ನೋಡಿ:
Another video linked to the Jamui incident has surfaced. Look at this crowd surrounding the couple—who gave these people the right to decide whether they are a couple, best friends, or simply two people who know each other? Since when did strangers get the authority to police… pic.twitter.com/NknDvpsjBl
— Pinkie (@PinkiePragya) September 21, 2026
ಯುವತಿ ಕೈಮುಗಿದು ವಿನಂತಿಸಿದರೂ ಕಿರುಕುಳ ನೀಡಿದ್ದಾರೆ. ನಂತರ ಯುವಕನು ದುಷ್ಕರ್ಮಿಗಳ ಕೈಯಿಂದ ಬಿಡಿಸಿಕೊಂಡು ಯುವತಿಯ ಬಂದಿದ್ದು ಇಬ್ಬರೂ ತಮ್ಮ ದ್ವಿಚಕ್ರ ವಾಹನದ ಬಳಿ ಓಡಿ ತಪ್ಪಿಸಿಕೊಂಡಿದ್ದಾರೆ. ಆದರೆ, ಕಿಡಿಗೇಡಿಗಳು ಬೈಕ್ ಏರುತ್ತಿದ್ದ ಯುವತಿಯ ಕೈ ಹಿಡಿದು ಎಳೆಯಲು ಮುಂದಾಗಿದ್ದಾರೆ.
ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಬಿಹಾರದ ಜಮುಯಿಯಲ್ಲಿ ಮೂವರನ್ನು ಬಂಧಿಸಲಾಗಿದೆ. ಬಳಕೆದಾರರು ಬಿಹಾರ ಪೊಲೀಸರನ್ನು ಟ್ಯಾಗ್ ಮಾಡಿ, ಈ ವಿಡಿಯೋದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಕೆಲವೇ ಗಂಟೆಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಪೊಲೀಸರು ಸಂತ್ರಸ್ತೆಯನ್ನು ಸಂಪರ್ಕಿಸಿಪರಿಶೀಲನೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಕೈಮುಗಿದು ಬೇಡಿಕೊಂಡರೂ ಗೂಂಡಾಗಳು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇಂತಹ ನಡವಳಿಕೆಗೆ ತೋರಿದ ಪುಂಡರಿಗೆ ಕಠಿಣ ಶಿಕ್ಷೆ ನೀಡಲು ನೆಟ್ಟಿಗರು ಆಗ್ರಹಿಸಿದ್ದಾರೆ.