Viral Video: ಬ್ಲಿಂಕ್‌ಇಟ್‌ನಿಂದ ಕೇವಲ 6 ನಿಮಿಷಗಳಲ್ಲಿ ಆರ್ಡರ್ ಪಡೆದ ಅಮೆರಿಕದ ವ್ಯಕ್ತಿಗೆ ಅಚ್ಚರಿ
Blinkit 6-minute delivery: ಅಮೆರಿಕದ ವ್ಯಕ್ತಿಯೊಬ್ಬರು ದೆಹಲಿಯಲ್ಲಿ ಬ್ಲಿಂಕ್‌ಇಟ್‌ನಿಂದ ಆರ್ಡರ್ ಮಾಡಿದ್ದು, ಕೇವಲ 6 ನಿಮಿಷಗಳಲ್ಲಿ ಆ ವಸ್ತು ಕೈ ಸೇರಿದೆ. ಈ ಅವಿಸ್ಮರಣೀಯ ವೇಗದ ಡೆಲಿವರಿಯ ಬಗ್ಗೆ ಅವರು ವಿಡಿಯೊದಲ್ಲಿ ವಿವರಿಸಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬ್ಲಿಂಕ್ಇಟ್ನಲ್ಲಿ ಕೇವಲ 6 ನಿಮಿಷಗಳಲ್ಲಿ ಆರ್ಡರ್ ಪಡೆದ ಅಮೆರಿಕದ ವ್ಯಕ್ತಿ -
ನವದೆಹಲಿ, ಡಿ. 29: ಭಾರತದ ಇ-ಕಾಮರ್ಸ್ ವೇದಿಕೆಯು ವಿದೇಶಿಗರನ್ನು ಬೆರಗುಗೊಳಿಸಿದೆ. ಪ್ರಪಂಚದಾದ್ಯಂತದ ಪ್ರವಾಸಿಗರು ಇಂತಹ ಸೇವೆಗಳ ಅನುಕೂಲತೆಯನ್ನು ಶ್ಲಾಘಿಸಿದ್ದಾರೆ. ಇತ್ತೀಚೆಗೆ ದಕ್ಷಿಣ ದೆಹಲಿಗೆ (Delhi) ಬಂದಿದ್ದ ಅಮೆರಿಕದ ವ್ಯಕ್ತಿಯೊಬ್ಬರು ಕೇವಲ ಆರು ನಿಮಿಷಗಳಲ್ಲಿ ಬ್ಲಿಂಕಿಟ್ ಆರ್ಡರ್ ಪಡೆದ ಅನುಭವವನ್ನು ತಿಳಿಸಿದ್ದಾರೆ. ಇದರ ವಿಡಿಯೊ ವೈರಲ್ (viral video) ಆಗಿದೆ.
ಅಮೆರಿಕ ನಿವಾಸಿ ಚಾರ್ಲಿ ಇವಾನ್ಸ್ ಇತ್ತೀಚೆಗೆ ದೆಹಲಿ ಆಗಮಿಸಿದ್ದರು. ಈ ವೇಳೆ ಬ್ಲಿಂಕ್‌ಇಟ್‌ನಿಂದ 6 ನಿಮಿಷದಲ್ಲಿ ಆರ್ಡರ್ ಪಡೆದುಕೊಂಡ ಅವರು ತಮ್ಮ ಅನುಭವವನ್ನು ಇನ್‌ಸ್ಟಾಗ್ರಾಂ ವಿಡಿಯೊ ಮೂಲಕ ತಿಳಿಸಿದ್ದಾರೆ. ಇವಾನ್ಸ್ ಬ್ಲಿಂಕ್ಇಟ್‌ನಲ್ಲಿ ನೀರಿನ ಬಾಟಲ್ ಮತ್ತು ಸ್ಕ್ರೂಡ್ರೈವರ್ ಆರ್ಡರ್ ಮಾಡಿದ್ದರು. ವೇಗವಾಗಿ ಬರುತ್ತದೆಯೇ ಎಂಬುದನ್ನು ಪರೀಕ್ಷಿಸಲು ಸಮಯವನ್ನು ರೆಕಾರ್ಡ್ ಮಾಡಿದ್ದರು.
ಡೆಲಿವರಿ ಬಾಯ್‌ಗೆ ವಿಶೇಷ ಉಡುಗೊರೆ ನೀಡಿದ ಇಟಲಿಯನ್ ಮಹಿಳೆ; ಹೃದಯವಂತಿಕೆಗೆ ನೆಟ್ಟಿಗರು ಫಿದಾ!
ಸಂಜೆ 5:43ಕ್ಕೆ ವಿಡಿಯೊವನ್ನು ಪ್ರಾರಂಭಿಸಿದ್ದಾಗಿ, ಇವಾನ್ಸ್ ವಿವರಿಸಿದ್ದಾರೆ. ʼʼನಾನು ಬ್ಲಿಂಕ್‌ಇಟ್‌ನಲ್ಲಿ ಆರ್ಡರ್ ಮಾಡಿದ್ದೇನೆ. ಈ ಅಪ್ಲಿಕೇಶನ್ ಸೇವೆ ಎಷ್ಟು ವೇಗವಾಗಿದೆ ಎಂಬುದನ್ನು ನಾನು ನನ್ನ ಅಮೆರಿಕದ ಸ್ನೇಹಿತರಿಗೆ ತೋರಿಸುತ್ತಿದ್ದೇನೆ. ಇದು ಬಹಳ ತ್ವರಿತವಾಗಿದೆ. ಎಷ್ಟು ನಿಮಿಷದಲ್ಲಿ ಬ್ಲಿಂಕ್‌ಇಟ್ ಆರ್ಡರ್ ಬರುತ್ತದೆ ನೋಡೋಣʼʼ ಎಂದು ವಿವರಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
American shocking reaction when he ordered on @letsblinkit and the order arrived within 6 minutes pic.twitter.com/HbqBnXUCtr
— Woke Eminent (@WokePandemic) December 26, 2025
ತಮ್ಮ ಆರ್ಡರ್‌ಗೆ ಕಾಯುತ್ತಿರುವಾಗ, ಡೆಲಿವರಿ ಬಾಯ್‍ಗಳು ಎದುರಿಸುವ ಸವಾಲುಗಳ ಬಗ್ಗೆಯೂ ಅವರು ಚಿಂತಿಸಿದ್ದಾರೆ. ಈ ಬ್ಲಿಂಕ್‌ಇಟ್ ವ್ಯಕ್ತಿಗಳ ಬಗ್ಗೆ ನನಗೆ ಕೆಲವೊಮ್ಮೆ ಏನೇನೋ ಭಾವನೆ ಬರುತ್ತದೆ. ಅವರು ಇಲ್ಲಿಗೆ ಬೇಗನೆ ಬರುತ್ತಾರೆ. ಆದರೆ ಅವರು ಕಟ್ಟಡವನ್ನು ಹೇಗೆ ಕಂಡು ಹಿಡಿಯುತ್ತಾರೆಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಆರ್ಡರ್ ಅವರ ಕೈ ಸೇರಿದೆ. ಇದರಿಂದ ಸಂತುಷ್ಟಗೊಂಡ ಇವಾನ್ಸ್ ಅಂತಿಮ ಸಮಯವನ್ನು ಬಹಿರಂಗಪಡಿಸಿದ್ದಾರೆ. ʼʼನಾನು ಆರ್ಡರ್ ಮಾಡಿದ ವಸ್ತು ಪಡೆದುಕೊಂಡಾಗ 5:49 ಆಗಿತ್ತು. ಅಂದರೆ 6 ನಿಮಿಷ ಎಂದೇ ಪರಿಗಣಿಸಬಹುದು. ನೀರಿನ ಬಾಟಲ್ ಮತ್ತು ಸ್ಕ್ರೂಡ್ರೈವರ್ ಸಮಯಕ್ಕೆ ಸರಿಯಾಗಿ ಕೈ ಸೇರಿದೆ. ಅವರ ಸೇವೆ ಅತ್ಯುತ್ತಮʼʼ ಎಂದು ಕರೆದಿದ್ದಾರೆ. ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ ʼಬ್ಲಿಂಕ್‌ಇಟ್ ದೇವರುʼ ಎಂದು ಉಲ್ಲೇಖಿಸಿದ್ದಾರೆ.
ಈ ವಿಡಿಯೊ ತ್ವರಿತವಾಗಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಭಾರತದ ಮುಂದುವರಿದ ಇ-ಕಾಮರ್ಸ್ ವೇದಿಕೆಯನ್ನು ಹಲವರು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಡೆಲಿವರಿ ಬಾಯ್‍ಗಳ ಮೇಲೆ ಹೇರಲಾದ ಒತ್ತಡದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಕೆಲವೊಮ್ಮೆ ಡೆಲಿವರಿ ವ್ಯಕ್ತಿ ಈಗಾಗಲೇ ಕೆಳಗೆ ನಿಂತಿರುವಂತೆ ಭಾಸವಾಗುತ್ತದೆ. ನಾವು ಆರ್ಡರ್ ನೀಡಿದ ಕ್ಷಣ, ಅವನು ಅದನ್ನು ನಮ್ಮ ಮನೆಗೆ ತಲುಪಿಸಲು ನೇರವಾಗಿ ಬರುತ್ತಾನೆ ಎಂದು ಒಬ್ಬರು ಬರೆದಿದ್ದಾರೆ. ಅವರು ಗಡುವನ್ನು ಪೂರೈಸಲು ಆತುರಪಡಬೇಕಾಗುತ್ತದೆ. ತಡವಾದರೆ, ಕೆಲಸದಿಂದ ತೆಗೆದುಹಾಕಲ್ಪಡಬೇಕಾಗುತ್ತದೆ ಎಂದು ಮತ್ತೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
ಒಬ್ಬ ವ್ಯಕ್ತಿ, ಇದು ನಾವು ಹೆಮ್ಮೆಪಡಬೇಕಾದ ವಿಷಯವಲ್ಲ. ಇದು ಕಾರ್ಮಿಕರ ಮೇಲಿನ ದೌರ್ಜನ್ಯ ಮತ್ತು ಅಪಘಾತಗಳಿಗೆ ಕಾರಣವಾಗುತ್ತದೆ. ನಾನು ವಿತರಣಾ ಸೇವೆಗಳನ್ನು ವಿರೋಧಿಸುವುದಿಲ್ಲ, ನಾನು ಅದನ್ನು ಪ್ರೋತ್ಸಾಹಿಸುತ್ತೇನೆ. ಆದರೆ ಈ 10 ನಿಮಿಷದಲ್ಲಿ ವೇಗವಾಗಿ ತಲುಪುವುದನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ರೈಲಿನಲ್ಲಿ ಡೆಲಿವರಿ ಸೇವೆಯಿಂದ ಪ್ರಭಾವಿತಳಾದ ಆಸ್ಟ್ರೇಲಿಯಾದ ಮಹಿಳೆ
ಒಂದು ತಿಂಗಳ ಹಿಂದೆ, ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಭಾರತದ ವಿತರಣಾ ಸೇವೆಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡ ಅವರು, ರೈಲಿನಲ್ಲಿ ತನಗೆ ಇಷ್ಟವಾದ ಆಹಾರವನ್ನು ಸ್ವೀಕರಿಸುವ ಬಗ್ಗೆ ಮಾತನಾಡಿದ್ದರು. ಈ ವಿಷಯಕ್ಕೆ ಬಂದಾಗ ಭಾರತವು ಕಾಲಕ್ಕಿಂತ ಮುಂದಿದೆ ಎಂದು ಬರೆದಿದ್ದರು.