ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

VHT 2025-26: ಉತ್ತರ ಪ್ರದೇಶ ವಿರುದ್ಧ 82 ರನ್‌ ಸಿಡಿಸಿದ ಆರ್‌ಸಿಬಿ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ!

ಅನುಭವಿ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಪ್ರಸ್ತುತ ನಡೆಯುತ್ತಿರುವ 2025-26 ವಿಜಯ್ ಹಝಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸೋಮವಾರ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೃಣಾಲ್‌ ಪಾಂಡ್ಯ ಬೌಲಿಂಗ್‌ನಲ್ಲಿ ವಿಫಲರಾದರು.ಆದರೆ, ಬ್ಯಾಟಿಂಗ್‌ನಲ್ಲಿ 77 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 10 ಬೌಂಡರಿಗಳೊಂದಿಗೆ 82 ರನ್‌ಗಳನ್ನು ಬಾರಿಸಿದ್ದಾರೆ.

ಉತ್ತರ ಪ್ರದೇಶ ವಿರುದ್ಧ 82 ರನ್‌ ಚಚ್ಚಿದ ಆರ್‌ಸಿಬಿ ಆಲ್‌ರೌಂಡರ್‌!

ಉತ್ತರ ಪ್ರದೇಶ ಎದುರು ಕೃಣಾಲ್‌ ಪಾಂಡ್ಯ ಅರ್ಧಶತಕ ಬಾರಿಸಿದ್ದಾರೆ. -

Profile
Ramesh Kote Dec 29, 2025 8:30 PM

ನವದೆಹಲಿ: ಅನುಭವಿ ಆಲ್‌ರೌಂಡರ್ ಕೃಣಾಲ್ ಪಾಂಡ್ಯ (Krunal Pandya) 2025-26ರ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ (Vijay Hazare Trophy 2025-26) ಆಡುತ್ತಿದ್ದಾರೆ. ಅವರು ಬರೋಡ (Baroda) ತಂಡದ ನಾಯಕರಾಗಿದ್ದಾರೆ. ಆ ಮೂಲಕ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನವನ್ನು ತೋರುತ್ತಿದ್ದಾರೆ. ಅಸ್ಸಾಂ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ವಿಫಲರಾಗಿದ್ದರು. ಆದಾಗ್ಯೂ, ಬಂಗಾಳ ವಿರುದ್ಧದ ಎರಡನೇ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಅವರು 57 ರನ್ ಗಳಿಸಿದರು ಮತ್ತು 39 ರನ್‌ಗಳಿಗೆ 3 ವಿಕೆಟ್ ಪಡೆದಿದ್ದರು.

ಸೋಮವಾರ ಉತ್ತರ ಪ್ರದೇಶ ವಿರುದ್ಧ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಕೃಣಾಲ್ ಪಾಂಡ್ಯ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಆದಾಗ್ಯೂ, ಅವರು ಮತ್ತೆ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನವನ್ನು ತೋರಿದರು. ಕೃಣಾಲ್ ತಮ್ಮ ಇನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 82 ರನ್ ಗಳಿಸಿದರು. ಪಾಂಡ್ಯ ಐಪಿಎಲ್‌ ಟೂರ್ನಿಯಲ್ಲಿಯೂ ಉತ್ತಮ ಪ್ರದರ್ಶನವನ್ನು ತೋರುತ್ತಿದಾರೆ ಆದರೆ ಅವರಿಗೆ ಭಾರತ ತಂಡಕ್ಕೆ ಮರಳಲು ಸಾಧ್ಯವಾಗಿಲ್ಲ.

KAR vs TN: ಕೆ ಶ್ರೀಜಿತ್‌ ಬ್ಯಾಟಿಂಗ್‌ ಬಲದಿಂದ ತಮಿಳುನಾಡು ವಿರುದ್ಧದ ಗೆದ್ದು ಬೀಗಿದ ಕರ್ನಾಟಕ!

ಅಂದಹಾಗೆ ಭಾರತ ತಂಡವು ಈಗಾಗಲೇ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್‌ರಂತಹ ಸ್ಪಿನ್ ಆಲ್‌ರೌಂಡರ್‌ಗಳನ್ನು ಹೊಂದಿದೆ. ಇದರ ಪರಿಣಾಮ ಕೃಣಾಲ್‌ಗೆ ಎಂದಿಗೂ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಕೃಣಾಲ್ ತಮ್ಮ ವೃತ್ತಿಜೀವನದಲ್ಲಿ ಭಾರತ ಪರ ಐದು ಏಕದಿನ ಮತ್ತು 19 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಪಂದ್ಯಗಳಲ್ಲಿ ಪಾಂಡ್ಯ 130 ರನ್ ಗಳಿಸಿದ್ದಾರೆ ಮತ್ತು ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20ಐ ಪಂದ್ಯಗಳಲ್ಲಿಅವರು 124 ರನ್ ಗಳಿಸಿದ್ದಾರೆ ಮತ್ತು 15 ವಿಕೆಟ್‌ಗಳನ್ನು ಪಡೆದಿದ್ದಾರೆ.

Vijay Hazare Trophy 2025-26:‌ 101 ಎಸೆತಗಳಲ್ಲಿ 160 ರನ್‌ ಸಿಡಿಸಿದ ಧ್ರುವ್‌ ಜುರೆಲ್!

ಕೃನಾಲ್ ಪಾಂಡ್ಯ ಐಪಿಎಲ್ ವೃತ್ತಿಜೀವನ

34ನೇ ವಯಸ್ಸಿನ ಕೃಣಾಲ್ ಪಾಂಡ್ಯ 2016ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಅವರು 142 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 132.4ರ ಸ್ಟ್ರೈಕ್ ರೇಟ್‌ನಲ್ಲಿ 1,756 ರನ್ ಗಳಿಸಿದ್ದಾರೆ. ಅವರು ಐಪಿಎಲ್‌ ಟೂರ್ನಿಯಲ್ಲಿ 93 ವಿಕೆಟ್‌ಗಳನ್ನು ಹೊಂದಿದ್ದಾರೆ. ಪಾಂಡ್ಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. ಈ ಹಿಂದೆ ಅವರು ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜಯಂಟಸ್‌ ತಂಡಗಳನ್ನು ಕೂಡ ಸಹ ಪ್ರತಿನಿಧಿಸಿದ್ದಾರೆ.

ಉತ್ತರ ಪ್ರದೇಶ ವಿರುದ್ಧ ಸೋತ ಬರೋಡ

ಇನ್ನು ಈ ಪಂದ್ಯದಲ್ಲಿ ಕೃಣಾಲ್‌ ಪಾಂಡ್ಯ ಅವರ ಅರ್ಧಶತಕದ ಹೊರತಾಗಿಯೂ ಬರೋಡ ತಂಡ, ಉತ್ತರ ಪ್ರದೇಶ ಎದುರು 54 ರನ್‌ಗಳಿಂದ ಸೋಲು ಅನುಭವಿಸಿತು. ಮೊದಲು ಬ್ಯಾಟ್‌ ಮಾಡಿದ್ದ ಉತ್ತರ ಪ್ರದೇಶ, ಧ್ರುವ್‌ ಜುರೆಲ್‌ (160*) ಅವರ ಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 369 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಬರೋಡ ತಂಡಕ್ಕೆ 370 ರನ್‌ಗಳ ಗುರಿಯನ್ನು ನೀಡಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಬರೋಡ, ಶಾಶ್ವತ್‌ ರಾವತ್‌ ಹಾಗೂ ಕೃಣಾಲ್‌ ಪಾಂಡ್ಯ ಅವರ ಅರ್ಧಶತಕಗಳ ಹೊರತಾಗಿಯೂ 315 ರನ್‌ಗಳಿಗೆ ಸೀಮಿತವಾಯಿತು.