ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೃತಸರ ಯಾತ್ರೆಗೆ ಹೋಗಿ ನಾಪತ್ತೆ; ಬಿಹಾರದಲ್ಲಿದ್ದ ವೃದ್ಧನಿಗೆ ಮನೆ ತಲುಪಲು ನೆರವಾದ ಚಾಟ್‌ಜಿಪಿಟಿ

Viral News: ಅಮೃತಸರ ಯಾತ್ರೆಗೆ ಹೋಗಿದ್ದ ವೇಳೆ ದಾರಿ ತಪ್ಪಿ ಪಂಜಾಬ್ ವ್ಯಕ್ತಿಯೊಬ್ಬರು ಬಿಹಾರಕ್ಕೆ ಹೋಗಿದ್ದು, ಚಾಟ್ ಜಿಪಿಟಿ ಸಹಾಯದಿಂದ ಈಗ ಅವರು ಸುರಕ್ಷಿತವಾಗಿ ತಮ್ಮೂರು ಸೇರಿದ್ದಾರೆ. ಬಿಹಾರದ ಗಯಾಜಿಯಲ್ಲಿ ಹಸಿವಿನಿಂದ ಕಂಗೆಟ್ಟು ಅಲೆಯುತ್ತಿದ್ದ ಅವರನ್ನು ಅಪರಿಚಿತರೊಬ್ಬರು ಊರಿಗೆ ಮರಳಲು ಸಹಾಯ ಮಾಡಿದ್ದರು.

ನಾಪತ್ತೆಯಾದ ವೃದ್ಧನನ್ನು ಹುಡುಕಿಕೊಟ್ಟ ಚಾಟ್ ಜಿಪಿಟಿ

ಸಂಗ್ರಹ ಚಿತ್ರ -

ಪಂಜಾಬ್: ಅಮೃತಸರ ಯಾತ್ರೆ (Amritsar pilgrimage) ವೇಳೆ ದಾರಿ ತಪ್ಪಿ ಬಿಹಾರ (Bihar) ತಲುಪಿದ ಪಂಜಾಬ್ (Punjab) ವ್ಯಕ್ತಿಯೊಬ್ಬರು ತಮ್ಮೂರಿಗೆ ಮರಳಲು ಚಾಟ್ ಜಿಪಿಟಿ (Chat GPT) ಸಹಾಯ ಮಾಡಿದೆ. ಅಪರಿಚಿತ ವ್ಯಕ್ತಿಯೊಬ್ಬರು ಅವರನ್ನು ಕುಟುಂಬದೊಂದಿಗೆ ಸೇರಿಸುವಲ್ಲಿ ಸಹಕರಿಸಿದರು. ಮರೆವು ಸಮಸ್ಯೆಗಳಿದ್ದ ಲೂಧಿಯಾನದ (Ludhiana) ಫತೇಹ್‌ಗಢ್ ಗುಜ್ರಾನ್ ಗ್ರಾಮದ ಚಮನ್ ಲಾಲ್ ಎಂಬವರು ಅಮೃತಸರ ಯಾತ್ರೆಗೆ ಹೋಗಿದ್ದರು. ಈ ವೇಳೆ ಅವರು ದಾರಿ ತಪ್ಪಿ ಬಿಹಾರಕ್ಕೆ ತೆರಳಿದ್ದಾರೆ. ಅಲ್ಲಿ ಹಸಿವಿನಿಂದ ಕಂಗೆಟ್ಟು ಅಲೆಯುತ್ತಿದ್ದ ಅವರನ್ನು ಕಂಡ ನೀರಜ್ ಎಂಬವರು ಅವರನ್ನು ಕುಟುಂಬ ಸೇರಿಸಲು ಚಾಟ್ ಜಿಪಿಟಿ (Viral News) ಸಹಾಯ ಪಡೆದರು.

ಪಂಜಾಬ್ ಸರ್ಕಾರದ 'ಮುಖ್ಯಮಂತ್ರಿ ಯಾತ್ರಾ ಯೋಜನೆ'ಯಡಿ ಚಮನ್ ಲಾಲ್ ಎಂಬವರು ಅಮೃತಸರದ ಸುವರ್ಣ ದೇವಾಲಯಕ್ಕೆ ಭೇಟಿ ನೀಡಲು ಸೆಪ್ಟೆಂಬರ್ 11 ರಂದು ಪಂಜಾಬ್ ನಿಂದ ಪ್ರಯಾಣಿಸಿದ್ದರು. ಆದರೆ ಯಾತ್ರೆ ವೇಳೆ ಅವರು ತಮ್ಮ ಗುಂಪಿನ ಇತರ ಸದಸ್ಯರಿಂದ ಬೇರ್ಪಟ್ಟಿದ್ದು, ಅಂತಿಮವಾಗಿ ಅಮೃತಸರ ರೈಲು ನಿಲ್ದಾಣವನ್ನು ತಲುಪಿದರು. ಅಲ್ಲಿ ಅವರು ತಪ್ಪಾಗಿ ಬಿಹಾರಕ್ಕೆ ಹೋಗುವ ರೈಲನ್ನು ಹತ್ತಿ ಗಯಾಜಿಗೆ ಬಂದಿದ್ದರು.

Chikkamagaluru Murder: ಕುಡಿದ ಮತ್ತಿನಲ್ಲಿ ತಂದೆಯನ್ನೇ ಕೊಚ್ಚಿ ಕೊಂದ ಮಗ

ಗಯಾಜಿ ರೈಲು ನಿಲ್ದಾಣದಲ್ಲಿ ಸ್ಥಳೀಯರಾದ ನೀರಜ್ ಎಂಬವರು ಆತಂಕದಲ್ಲಿರುವ ಚಮನ್ ಲಾಲ್ ಅವರನ್ನು ಗಮನಿಸಿ ವಿಚಾರಣೆ ನಡೆಸಿದರು. ತೀವ್ರ ಹಸಿವಿನಿಂದ ಬಳಲುತ್ತಿದ್ದ ಅವರು ತಮ್ಮ ಪೂರ್ಣ ವಿಳಾಸವನ್ನು ಹೇಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಅವರಿಗೆ ತಮ್ಮ ಊರಿನ ಹೆಸರು ಫತೇಹ್‌ಗಢ್ ಗುಜ್ರಾನ್ ಎಂದು ಮಾತ್ರ ನೆನಪಿತ್ತು. ಉಳಿದಂತೆ ಯಾವುದು ಕೂಡ ಗೊತ್ತಿರಲಿಲ್ಲ. ನೀರಜ್ ಅವರನ್ನು ತಮ್ಮ ಮನೆಗೆ ಕರೆದೊಯ್ದು, ಊಟ ನೀಡಿದ ನೀರಜ್ ಬಳಿಕ ಅವರ ಸಂಬಂಧಿಕರನ್ನು ಪತ್ತೆಹಚ್ಚುವ ಪ್ರಯತ್ನ ಮಾಡಿದರು. ಇದಕ್ಕಾಗಿ ಸುಮಾರು ನಾಲ್ಕು ದಿನಗಳ ಕಾಲ ತಮ್ಮ ಮನೆಯಲ್ಲೇ ಅವರನ್ನು ಉಳಿಸಿಕೊಂಡರು.

ಲಾಲ್ ಅವರು ಪಂಜಾಬಿ ಭಾಷೆ ಮಾತನಾಡುವುದನ್ನು ಗಮನಿಸಿದ ನೀರಜ್ ಸುಮಾರು ಮೂರು ದಿನಗಳ ಕಾಲ ಚಾಟ್ ಜಿಪಿಟಿ ಬಳಸಿ ಅವರ ಊರಿನ ಹುಡುಕಾಟವನ್ನು ಪ್ರಾರಂಭಿಸಿದರು. ಅಂತಿಮವಾಗಿ ಲೂಧಿಯಾನ ಜಿಲ್ಲೆಯ ಮಚ್ಚಿವಾರಾ ಸಾಹಿಬ್ ಬಳಿಯಿರುವ ಫತೇಹ್‌ಗಢ್ ಗುಜ್ರಾನ್ ಎಂಬ ಗ್ರಾಮವಿದೆ ಎಂದು ತಿಳಿದ ನೀರಜ್ ಅವರನ್ನು ಒಬ್ಬಂಟಿಯಾಗಿ ಕಳುಹಿಸಬಾರದೆಂದು ನಿರ್ಧರಿಸಿ ತಾವು ಕೂಡ ಅವರೊಂದಿಗೆ ಗಯಾಜಿಯಿಂದ ಪಂಜಾಬ್‌ಗೆ ತೆರಳಿದರು.

ಲೂಧಿಯಾನದಲ್ಲಿ ಮಚ್ಚಿವಾರಾ ಪ್ರದೇಶಕ್ಕೆ ಬಂದ ನೀರಜ್ ಅವರು ಚಮನ್ ಲಾಲ್ ಅವರ ಭಾವಚಿತ್ರವನ್ನು ತೋರಿಸಿ ಗ್ರಾಮದ ಜನರನ್ನು ವಿಚಾರಿಸಲು ಪ್ರಾರಂಭಿಸಿದರು. ಕೊನೆಗೆ ಮಾಸ್ಟರ್ ಕೃಷ್ಣನ್ ಲಾಲ್ ಅವರು ಚಮನ್ ಲಾಲ್ ಅವರನ್ನು ಗುರುತಿಸಿದರು. ಅವರ ಸಹಾಯದಿಂದ ಲಾಲ್ ಅವರ ಕುಟುಂಬವನ್ನು ನೀರಜ್ ಸಂಪರ್ಕಿಸಿದರು. ಚಮನ್ ಲಾಲ್ ಅವರ ಮೊಮ್ಮಗ ಸುಖ್‌ಚೈನ್ ಸಿಂಗ್ ಅಜ್ಜನನ್ನು ಗುರುತಿಸಿದರು. ಅಂತಿಮವಾಗಿ ಚಮನ್ ಲಾಲ್ ಅವರು ಕುಟುಂಬ ಸೇರಿದರು. ಇದಕ್ಕಾಗಿ ಶ್ರಮಿಸಿದ ನೀರಜ್ ಅವರಿಗೆ ಅವರ ಕುಟುಂಬ ಧನ್ಯವಾದವನ್ನು ಸಲ್ಲಿಸಿ ಪ್ರೀತಿಯಿಂದ ಬೀಳ್ಕೊಟ್ಟಿತು.

ಕೋಲ್ಕತಾದಲ್ಲಿ ಟಿಎಂಸಿ, ಸಿಪಿಐಎಂ ಕಚೇರಿ, ಮಾಜಿ ಶಾಸಕನ ಮನೆ ಧ್ವಂಸ: ಬಿಜೆಪಿ ವಿರುದ್ಧ ದಾಳಿ ಆರೋಪ

ಅಮೃತಸರದಲ್ಲಿ ಚಮನ್ ಲಾಲ್ ಅವರಿಗಾಗಿ ಅವರ ಕುಟುಂಬವು ವ್ಯಾಪಕವಾಗಿ ಹುಡುಕಾಟ ನಡೆಸಿತ್ತು. ಈ ಬಗ್ಗೆ ಪೊಲೀಸರಿಗೂ ದೂರು ನೀಡಲಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಚಿತ್ರಗಳನ್ನು ಹಂಚಿಕೊಂಡಿದ್ದರು.