ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿ ಮೆಟ್ರೋ ನೆನೆದು ಜರ್ಮನಿಯಲ್ಲಿರುವ ಭಾರತೀಯ ವಿದ್ಯಾರ್ಥಿನಿಯ ಭಾವುಕ ಪೋಸ್ಟ್

Viral News: ಜರ್ಮನಿಯಲ್ಲಿರುವ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಭಾರತದ ಸೌಲಭ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ಜರ್ಮನಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ತನಗೆ ದೆಹಲಿಯ ಮೆಟ್ರೋ ಸೌಲಭ್ಯದ ಬೆಲೆ ಈಗ ಅರಿವು ಆಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ದೆಹಲಿ ಮೆಟ್ರೋ ಸೌಕರ್ಯ ಬಗ್ಗೆ ವಿದ್ಯಾರ್ಥಿನಿ ಭಾವುಕ

ಜರ್ಮನಿಯಲ್ಲಿ ಭಾರತೀಯ ವಿದ್ಯಾರ್ಥಿನಿ ಮಹಿಕಾ -

Profile
Pushpa Kumari Jun 1, 2026 8:41 PM

​ನವದೆಹಲಿ, ಜೂ. 1: ಭಾರತದಲ್ಲಿನ ಸೌಲಭ್ಯಗಳ ಬಗ್ಗೆ ಫಿದಾ ಆಗಿ ಅನೇಕ ವಿದೇಶಿಗರು ಮೆಚ್ಚುಗೆ ವ್ಯಕ್ತಪಡಿಸುವ ವಿಡಿಯೊಗಳು ವೈರಲ್ (Viral News) ಆಗುತ್ತಿರುತ್ತವೆ. ಇಲ್ಲಿನ ಆನ್‌ಲೈನ್‌ ಆ್ಯಪ್‌, ಸಂಚಾರ ವ್ಯವಸ್ಥೆ, ಮೂಲ ಸೌಕರ್ಯಗಳ ಬಗ್ಗೆ ಹೊಗಳಿದ ಅನೇಕ ಪ್ರವಾಸಿಗರಿದ್ದಾರೆ. ಇದೀಗ ಜರ್ಮನಿಯಲ್ಲಿರುವ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಭಾರತದ ಸೌಲಭ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ. ಜರ್ಮನಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ತನಗೆ ದೆಹಲಿಯ ಮೆಟ್ರೋ ಸೌಲಭ್ಯದ ಬೆಲೆ ಈಗ ಅರಿವು ಆಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಭಾರತದಲ್ಲಿನ ಮೆಟ್ರೋ ಸೇವೆ ಅನೇಕರಿಗೆ ನೆರವಾಗಿದೆ. ಕಡಿಮೆ ಸಮಯದಲ್ಲಿ ತಲುಪುವ ಜತೆಗೆ ಪ್ರಯಾಣ ವೆಚ್ಚವು ಕಡಿಮೆ. ಜರ್ಮನಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ಇದೀಗ ಭಾರತದ ಸಣ್ಣ ಪುಟ್ಟ ವಿಚಾರಗಳು ನೆನಪಿಗೆ ಬರುತ್ತಿದೆ ಎಂದು ಅನುಭವ ಹಂಚಿಕೊಂಡಿದ್ದಾರೆ.

ವಿಡಿಯೊ ನೋಡಿ:

ಜರ್ಮನಿಗೆ ಹೋದ ನಂತರ ತನಗೆ ದೆಹಲಿ ಮೆಟ್ರೋ ಎಷ್ಟು ನೆನಪಾಗುತ್ತಿದೆ ಎಂಬುದನ್ನು ತಿಳಿಸಿರುವ ಆಕೆ, ʼʼಇಲ್ಲಿ ಭೇಟಿಯಾಗಿರುವ ಪ್ರತಿಯೊಬ್ಬರಿಗೂ ದೆಹಲಿ ಮೆಟ್ರೋದ ಬಗ್ಗೆ ಗುಣಗಾನ ಮಾಡುತ್ತೇನೆ. ದಿನಕ್ಕೆ ಒಂದು ಬಾರಿಯಾದರೂ ಮೆಟ್ರೋದ ಬಗ್ಗೆ ಮಾತನಾಡುತ್ತಲೇ ಇರುತ್ತೇನೆ. ಅದರ ಅನಧಿಕೃತ ರಾಯಭಾರಿ ಇಂದು ನಾನಾಗಿದ್ದೇನೆ" ಎಂದು ಅವರು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ತನ್ನ ಸ್ನಾತಕೋತ್ತರ ಅಧ್ಯಯನಕ್ಕಾಗಿ ದೆಹಲಿಯಿಂದ ಜರ್ಮನಿಗೆ ಸ್ಥಳಾಂತರಗೊಂಡ ಮಹಿಕಾ ಅಲ್ಲಿನ ಹೊಸ ಜೀವನಕ್ಕೆ ಹೊಂದಿಕೊಳ್ಳುತ್ತಿರುವ ಬಗ್ಗೆ ಮಾತನಾಡಿದ್ದಾರೆ.​ ʼʼಜರ್ಮನಿಗೆ ಹೋದ ನಂತರ ನನ್ನ ಜೀವನ ಸಂಪೂರ್ಣವಾಗಿ ಬದಲಾಗಿದೆ. ಅಲ್ಲಿ ಬದಲಾಗುವ ಹವಾಮಾನ, ಡೆಲಿವರಿ ಆ್ಯಪ್‌ಗಳಿಲ್ಲದೆ ಪಡುವ ಪಾಡು, ಸ್ವತಃ ಅಡುಗೆ ಮಾಡಿಕೊಳ್ಳುವುದು ಬಹಳ ಕಷ್ಟ. ಜರ್ಮನಿಯಲ್ಲಿ ಕೆಲವೊಂದು ವಿಚಾರಗಳು ಹಿತ ಅನಿಸಿದರೂ ದೆಹಲಿಯ ಕೆಲವು ಸೌಲಭ್ಯ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆʼʼ ಎಂದು ತಿಳಿಸಿರುವ ಅವರು, ಈ ಪಟ್ಟಿಯಲ್ಲಿ ದೆಹಲಿ ಮೆಟ್ರೋ ಮೊದಲ ಸ್ಥಾನದಲ್ಲಿದೆ ಎಂದಿದ್ದಾರೆ.

ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!

ಜರ್ಮನಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಸುರಕ್ಷಿತವಾಗಿದೆ ಎಂದು ಅವರು ಒಪ್ಪಿಕೊಂಡರೂ, ದೆಹಲಿಯಾದ್ಯಂತ ಮೆಟ್ರೋದಲ್ಲಿ ಪ್ರಯಾಣಿಸಿದ ಅನುಭವಕ್ಕೆ ಇದನ್ನು ಇನ್ನೂ ಹೋಲಿಸಲಾಗದು ಎಂದು ತಮಾಷೆ ಮಾಡಿದ್ದಾರೆ. ವಿದ್ಯಾರ್ಥಿನಿ ಈ ವಿಡಿಯೊವನ್ನು ದೆಹಲಿ ಮೆಟ್ರೋ ಎಂದು ಬಣ್ಣಿಸಿ ಇದನ್ನು ವಿಶ್ವದ ಅತ್ಯುತ್ತಮ ಸಾರಿಗೆ ವ್ಯವಸ್ಥೆ ಎಂದೂ ಕರೆದಿದ್ದಾರೆ.

ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದು, ನೆಟ್ಟಿಗರೊಬ್ಬರು, ʼʼನಿಜಕ್ಕೂ ಭಾರತೀಯ ಮೆಟ್ರೋ ಸಹಕಾರಿʼʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼದೆಹಲಿ ಮೆಟ್ರೋ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆʼʼ ಎಂದು ಬರೆದಿದ್ದಾರೆ.