ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಸಿಲ ಬೇಗೆಗೆ ಪ್ರಜ್ಞೆ ತಪ್ಪಿ ಬಿದ್ದ ಬಾವಲಿ: ಪ್ರಾಣ ಉಳಿಸಿ ಮಾನವೀಯತೆ ಮೆರೆದ ವಕೀಲ!

Viral Video: ಬುಂದೇಲ್‌ಖಂಡ್‌ನ ಹಮೀರಪುರ ಜಿಲ್ಲೆಯಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ತೀವ್ರ ಶಾಖದ ನಡುವೆ ಮರದಲ್ಲಿ ನೇತಾಡುತ್ತಿದ್ದ ಬಾವಲಿಯೊಂದು ಪ್ರಜ್ಞೆ ತಪ್ಪಿ ಬಿದ್ದಿದೆ. ಇದನ್ನು ಗಮನಿಸಿದ ವಕೀಲರೊಬ್ಬರು ಅದರ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ...

ಬಿಸಿಲ ದಾಹಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಬಾವಲಿ: ಹೃದಯಸ್ಪರ್ಶಿ ವಿಡಿಯೊ!

ಬಿಸಿಲ ದಾಹಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಬಾವಲಿ -

Profile
Pushpa Kumari May 23, 2026 4:29 PM

ಹಮೀರಪುರ, ಮೇ 23: ಬಿಸಿಲಿನ ತಾಪಮಾನ ದಾಖಲೆ ಮಟ್ಟಕ್ಕೆ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಲೇ ಇದೆ. ಬಿಸಿಲ ಧಗೆಯಿಂದ, ಮನುಷ್ಯರು ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳೂ ನೀರಿಗಾಗಿ ಪರದಾಡುವಂತಾಗಿದೆ. ಪ್ರಾಣಿಗಳೂ ಕೂಡ ದಾಹ ತಡೆದುಕೊಳ್ಳಲಾಗಿದೆ ತಂಪಿರುವ ನೀರಿನ ಜಾಗವನ್ನು ಹುಡುಕುತ್ತಾ ಸಾಗುತ್ತಿವೆ‌. ಇದಕ್ಕೆ ಸಾಕ್ಷಿ ಎಂಬಂತೆ ಬುಂದೇಲ್‌ಖಂಡ್‌ನ ಹಮೀರಪುರ ಜಿಲ್ಲೆಯಲ್ಲಿ (Viral Video) ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ತೀವ್ರ ಶಾಖದ ನಡುವೆ ಮರದಲ್ಲಿ ನೇತಾಡುತ್ತಿದ್ದ ಬಾವಲಿಯೊಂದು ಪ್ರಜ್ಞೆ ತಪ್ಪಿ ಬಿದ್ದಿದೆ. ಇದನ್ನು ಗಮನಿಸಿದ ವಕೀಲರೊಬ್ಬರು ಅದರ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಈ ಹೃದಯ ಸ್ಪರ್ಶಿ ಘಟನೆ ನಡೆದಿದ್ದು ಬಾವಲಿಯೊಂದು ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದೆ. ಇದನ್ನು ನ್ಯಾಯಲಯದ ಆವರಣದೊಳಗೆ ಇದ್ದ ವಕೀಲರೊಬ್ಬರು ಗಮನಿಸಿದ್ದಾರೆ. ಕೂಡಲೇ ಅವರು ನೆರವಿಗೆ ಮುಂದಾಗಿದ್ದು ನೀರನ್ನು ಚುಮುಕಿಸುವ ಮೂಲಕ ಪ್ರಾಣ ಉಳಿಸಿದ್ದಾರೆ. ಸದ್ಯ ಈ ಮಾನವೀಯತೆ ಮೆರೆದ ದೃಶ್ಯವು ಭಾರೀ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚುಗೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ವಿಡಿಯೋ ನೋಡಿ:



ಸುಡುವ ಬಿಸಿಲು ಮತ್ತು ಬಿಸಿ ಗಾಳಿಯು ಮನುಷ್ಯರನ್ನು ಮಾತ್ರವಲ್ಲದೆ ಪ್ರಾಣಿಗಳು ಮತ್ತು ಪಕ್ಷಿಗಳ ಮೇಲೂ ತೀವ್ರ ಪರಿಣಾಮ ಬೀರಿದೆ. ಇದಕ್ಕೆ ಪರಿಣಾಮವಾಗಿ ಮರದಿಂದ ತಲೆಕೆಳಗಾಗಿ ನೇತಾಡುತ್ತಿದ್ದ ಬಾವಲಿ ತೀವ್ರ ಶಾಖಕ್ಕೆ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದಿದೆ. ತೀವ್ರ ದಣಿದಿದ್ದ ಬಾವಲಿಯ ಮೇಲೆ ನೀರಿನ ಬಾಟಲಿಯಿಂದ ನೀರನ್ನು ನೆಲದ ಮೇಲೆ ಹಾಕಿ ಸುತ್ತಲೂ ಚಿಮುಕಿಸಿದ್ದಾರೆ. ಬಾವಲಿಯೂ ಈ ಸಂದರ್ಭದಲ್ಲಿ ಅಲುಗಾಡಲು ಆರಂಭಿಸಿದೆ.

Viral Video: ಬೆರಳಿನ ತುದಿಯಲ್ಲೇ ಉರಿದ ಗ್ಯಾಸ್ ಸ್ಟೌವ್: ಇದು ಪವಾಡವಲ್ಲ ವಿಜ್ಞಾನ! ಹೇಗೆ ಗೊತ್ತಾ?

ಬಾಯಾರಿಕೆ ಮತ್ತು ಶಾಖದಿಂದ ದಣಿದ ಬಾವಲಿ ನೀರನ್ನು ನೆಕ್ಕಲು ಪ್ರಾರಂಭಿಸಿದ್ದು ಅಲ್ಲಿದ್ದ ಎಲ್ಲರನ್ನು ಅಚ್ಚರಿಗೊಳಿಸಿತು. ಸ್ವಲ್ಪ ಸಮಯದ ನಂತರ, ಬಾವಲಿ ಮತ್ತೆ ಚಲಿಸಲು ಪ್ರಾರಂಭಿಸಿತು. ಈ ಇಡೀ ಘಟನೆಯ ದೃಶ್ಯಾವಳಿಯನ್ನು ಅಲ್ಲಿದ್ದವರು ಸೆರೆ ಹಿಡಿದ್ದಿದ್ದು ಭಾರೀ ವೈರಲ್ ಆಗಿದೆ. ನೆಟ್ಟಿಗರು ವಕೀಲರ ಸಮಯಪ್ರಜ್ಞೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ‌.