ನೇಪಾಳ ಪ್ರವಾಹದ ವೇಳೆ ಕಂಡುಬಂದ ಹೃದಯವಿದ್ರಾವಕ ದೃಶ್ಯ: ಪುಟ್ಟ ತಂಗಿಯನ್ನು ಹೊತ್ತು ಪೋಷಕರನ್ನು ಹುಡುಕುತ್ತ ಹೊರಟ ಬಾಲಕ!
Viral Video: ನೇಪಾಳ ಪ್ರವಾಹದಲ್ಲಿ ಕಂಡು ಬಂದ ಈ ದೃಶ್ಯ ಇಡೀ ಜಗತ್ತನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ. ಪೋಷಕರಿಂದ ಬೇರ್ಪಟ್ಟ ಬಾಲಕನೊಬ್ಬ ತನ್ನ ತಂಗಿಯನ್ನು ಬೆನ್ನಮೇಲೆ ಹೊತ್ತುಕೊಂಡು ತನ್ನವರಿಗಾಗಿ ಹುಡುಕುತ್ತಿರುವ ಕರುಳು ಹಿಂಡುವ ದೃಶ್ಯ ಇದಾಗಿದ್ದು, ನೆಟ್ಟಿಗರು ಈ ಮಕ್ಕಳ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದಾರೆ.
ನೇಪಾಳದಲ್ಲಿ ಪುಟ್ಟ ತಂಗಿಯನ್ನು ಹೊತ್ತು ಪೋಷಕರನ್ನ ಹುಡುಕುತ್ತ ಹೊರಟ ಬಾಲಕ -
ಕಠ್ಮಂಡು, ಆ. 31: ಕೆಲವೊಮ್ಮೆ ಪ್ರಕೃತಿಯಲ್ಲಿ ಸಂಭವಿಸುವ ಅನಿರೀಕ್ಷಿತ ಘಟನೆಗಳು ಮನುಷ್ಯರ ಬದುಕನ್ನೇ ನುಂಗಿ ಬಿಡುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ನೇಪಾಳ ಪ್ರವಾಹದಲ್ಲಿ (Nepal Flood) ಕಂಡುಬಂದ ದೃಶ್ಯವನ್ನು ಇಡೀ ಜಗತ್ತೇ ಹನಿಗಣ್ಣಿನಿಂದ ನೋಡಿದೆ. ನೇಪಾಳದಲ್ಲಿ ನಡೆದ ಹೃದಯ ವಿದ್ರಾವಕ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ. ಪೋಷಕರಿಂದ ಬೇರ್ಪಟ್ಟ ಬಾಲಕನೊಬ್ಬ ತನ್ನ ತಂಗಿಯನ್ನು ಬೆನ್ನಮೇಲೆ ಹೊತ್ತುಕೊಂಡು ತನ್ನವರಿಗಾಗಿ ಹುಡುಕುತ್ತಿರುವ ದೃಶ್ಯ ಇದಾಗಿದ್ದು, ನೆಟ್ಟಿಗರು ಭಾವುಕರಾಗಿದ್ದಾರೆ.
ಪ್ರವಾಹದ ಭೀಕರತೆಗೆ ಪೋಷಕರಿಂದ ಬೇರ್ಪಟ್ಟ ಪುಟ್ಟ ಬಾಲಕನು ತನ್ನ ಪುಟ್ಟ ತಂಗಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ತಂದೆ-ತಾಯಿಯನ್ನು ಹುಡುಕುತ್ತಿರುವ ದೃಶ್ಯ ಎಲ್ಲರ ಕಣ್ಣಂಚಲ್ಲಿ ನೀರು ತರಿಸಿದೆ. ಬಾಲಕನು ತನ್ನ ಅಳುತ್ತಿದ್ದ ತಂಗಿಯನ್ನು ಸಮಾಧಾನ ಪಡಿಸುತ್ತಾ ಧೈರ್ಯ ತುಂಬಿದ್ದಾನೆ.
ವೈರಲ್ ಆದ ವಿಡಿಯೊದಲ್ಲಿ ಬಾಲಕನು ತನ್ನ ಸಹೋದರಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ನೆರೆ ಪೀಡಿತ ಪ್ರದೇಶದ ಮೂಲಕ ಹೋಗುವುದನ್ನು ಕಾಣಬಹುದು. ಆತನ ಮುಖದ ಮೇಲೆ ಗಾಯದ ಗುರುತುಗಳಿದ್ದರೂ, ನೋವಿನಿಂದ ಬಳಲುತ್ತಿದ್ದರೂ ಈ ಕಠಿಣ ಪರಿಸ್ಥಿತಿಯಲ್ಲಿ ತಂಗಿಯನ್ನು ಸುರಕ್ಷಿತವಾಗಿಡಲು ಮತ್ತು ಸಾಂತ್ವನಗೊಳಿಸಲು ಪ್ರಯತ್ನಿಸಿದ್ದಾನೆ.
ವಿಡಿಯೊ ನೋಡಿ:
Heartbreaking Visual from Nepal 💔
— Jeet (@JeetN25) August 30, 2026
Little boy caring his younger sister 🥹 and finding their parents 😭.
Look at the pain and scratches on their faces. 💔💔💔 pic.twitter.com/oREDLzii6g
ಈ ದೃಶ್ಯಗಳನ್ನು ಅನೇಕರು ಹಂಚಿಕೊಂಡಿದ್ದಾರೆ. ಅವರು ಇದನ್ನು "ನೇಪಾಳದ ಹೃದಯ ವಿದ್ರಾವಕ ದೃಶ್ಯ" ಎಂದು ಬಣ್ಣಿಸಿದ್ದಾರೆ. ಮಕ್ಕಳ ಕಣ್ಣುಗಳಲ್ಲಿನ ನೋವು ಎಲ್ಲವನ್ನೂ ಹೇಳುವಂತಿದೆ. ಬಾಲಕನು ತನ್ನ ಸಹೋದರಿಯನ್ನು ಹೆಗಲ ಮೇಲೆ ಬಹಳ ಎಚ್ಚರಿಕೆಯಿಂದ ಹಿಡಿದುಕೊಂಡಿದ್ದಾನೆ ಎಂದು ಹಲವರು ಹೇಳಿದ್ದಾರೆ. ಧೈರ್ಯದಿಂದ ಇರಿ ಮಕ್ಕಳೇ. ನಾವು ನಿಮಗಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ
ಈ ವಿಡಿಯೊ ನೋಡಿ ಸಾವಿರಾರು ನೆಟ್ಟಿಗರು ಕಂಬನಿ ಮಿಡಿದಿದ್ದಾರೆ. ಈ ದೃಶ್ಯವು ''ಗ್ರೇವ್ ಆಫ್ ದಿ ಫೈರ್‌ಫ್ಲೈಸ್ '' ಚಿತ್ರವನ್ನು ನೆನಪಿಸಿದೆ. ಇದು 1988ರ ಜಪಾನೀಸ್ ಆ್ಯನಿಮೇಟೆಡ್ ಚಲನಚಿತ್ರವಾಗಿದ್ದು, ಎರಡನೇ ಮಹಾಯುದ್ಧದ ಸಮಯದಲ್ಲಿ ತಮ್ಮ ಕುಟುಂಬದಿಂದ ಬೇರ್ಪಟ್ಟ ನಂತರ ಸಹೋದರರಾದ ಸೀತಾ ಮತ್ತು ಸೆಟ್ಸುಕೊ ಬದುಕಲು ಕಷ್ಟಪಟ್ಟ ಕಥೆ ಇದರಲ್ಲಿದೆ.