ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಸ್ತೆಯಲ್ಲೇ ಪಟಾಕಿ ಸಿಡಿಸಿ ಪತ್ನಿಯ ಬರ್ತ್‌ಡೇ ಆಚರಿಸಿದ ಉದ್ಯಮಿ: ಸಾರ್ವಜನಿಕ ಸ್ಥಳವನ್ನು ಬಳಸಲು ಅಧಿಕಾರ ಕೊಟ್ಟಿದ್ಯಾರು? ಎಂದ ನೆಟ್ಟಿಗರು

Viral Video: ಗುವಾಹಟಿಯಲ್ಲಿ ನಡೆದ ಈ ಘಟನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇಲ್ಲಿನ ಉದ್ಯಮಿ ಯೊಬ್ಬರು ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಯಾವುದೇ ಐಷಾರಾಮಿ ಹೋಟೆಲ್‌ನಲ್ಲಿ ಆಚರಿಸುವ ಬದಲು ಸಾರ್ವಜನಿಕರು ಸಂಚಾರ ಮಾಡುವ ಫ್ಲೈಓವರ್ ಮೇಲೆ ಆಚರಣೆ ಮಾಡಿದ್ದಾರೆ. ಈ ವಿಡಿಯೊ ನೋಡಿದ ಅನೇಕರು ಹಣ ಇದ್ದವರೇ ಇಂತಹ ವರ್ತನೆ ತೋರುವುದು ಎಂದು ಕಿಡಿಕಾರಿದ್ದಾರೆ..

ಫ್ಲೈ ಓವರ್‌ನಲ್ಲಿ ಪಟಾಕಿ ಸಿಡಿಸಿ ಪತ್ನಿಯ ಹುಟ್ಟುಹಬ್ಬ ಆಚರಿಸಿದ ಉದ್ಯಮಿ

ಗುವಾಹಟಿಯ ಫ್ಲೈ ಓವರ್‌ ಒಂದರಲ್ಲಿ ಪತ್ನಿಯ ಹುಟ್ಟುಹಬ್ಬ ಆಚರಿಸಿದ ಉದ್ಯಮಿ -

Profile
Pushpa Kumari Jun 24, 2026 7:34 PM

ದಿಸ್‌ಪುರ, ಜೂ. 24: ಇತ್ತೀಚೆಗೆ ಸಾರ್ವಜನಿಕ ಆಸ್ತಿಯನ್ನು ಸ್ವಂತ ಆಸ್ತಿಯಂತೆ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ಕಸ ಹಾಕುವುದು, ಸಾರ್ವಜನಿಕ ಸ್ಥಳದಲ್ಲಿ ಅಶಿಸ್ತಿನಿಂದ ವರ್ತಿಸುವುದು ಹೀಗೆ ಮನಬಂದಂತೆ ವರ್ತಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅಸ್ಸಾಂನ ಗುವಾಹಟಿಯಲ್ಲಿ ನಡೆದ ಈ ಘಟನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇಲ್ಲಿನ ಉದ್ಯಮಿಯೊಬ್ಬರು ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಯಾವುದೇ ಐಷಾರಾಮಿ ಹೋಟೆಲ್‌ನಲ್ಲಿ ಆಚರಿಸುವ ಬದಲು ಸಾರ್ವಜನಿಕ ಬಳಕೆಯ ಫ್ಲೈಓವರ್ ಮೇಲೆ ಮಾಡಿದ್ದಾರೆ. ಈ ವಿಡಿಯೊ (Viral News) ನೋಡಿದ ಅನೇಕರು ಹಣ ಇದ್ದವರೇ ಇಂತಹ ವರ್ತನೆ ತೋರುವುದು ಎಂದು ಕಿಡಿಕಾರಿದ್ದಾರೆ.

ಗುವಾಹಟಿ ಉದ್ಯಮಿ ಗೌತಮ್ ಬರುವಾ ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಫ್ಲೈಓವರ್ ಮೇಲೆ ಆಚರಿಸಿದ್ದಾನೆ. ರಸ್ತೆಯ ಒಂದು ಭಾಗದಲ್ಲಿ ಬಲೂನು ಕಟ್ಟಿ ಅಲಂಕಾರ ಮಾಡಲಾಗಿತ್ತು. ಈ ವೇಳೆ ವಾಹನಗಳಿಗೆ ತೆರಳಲು ಸಾಧ್ಯವಾಗದೆ ಸೇತುವೆಯ ಮೇಲೆ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ. ಸದ್ಯ ಈ ಘಟನೆ ಸುರಕ್ಷತೆ ಮತ್ತು ನಾಗರಿಕ ಜವಾಬ್ದಾರಿಯ ಬಗ್ಗೆ ಕಳವಳ ಹುಟ್ಟುಹಾಕಿದೆ.

ವಿಡಿಯೊ ನೋಡಿ:



ಜೂನ್ 22ರ ಮುಂಜಾನೆ ಈ ಘಟನೆ ನಡೆದಿದ್ದು ಇದರ ವಿಡಿಯೊಗಳು ಬಹಳಷ್ಟು ವೈರಲ್ ಆಗುತ್ತಿವೆ. ಪ್ರಮುಖ ಸಂಚಾರ ಪಥವಾಗಿರುವ ಸೇತುವೆಯನ್ನೇ ಪಾರ್ಟಿ ಸ್ಥಳವಾಗಿ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ರಸ್ತೆಯ ಮೇಲೆಯೇ ರೆಡ್ ಕಾರ್ಪೆಟ್ ಹಾಸಿರುವುದು ವಿಡಿಯೊದಲಿ ಕಂಡು ಬಂದಿದೆ​. ಸೇತುವೆಯನ್ನು ಬಲೂನ್‌ಗಳ ಸಿಂಗರಿಸಿ ಪಟಾಕಿ ಸಿಡಿಸಲಾಗಿದೆ. ವಾಹನಗಳನ್ನು ರಸ್ತೆಯ ಮೇಲೆಯೇ ಸಾಲಾಗಿ ನಿಲ್ಲಿಸಿದ್ದರಿಂದ, ವಾಹನ ಸಂಚಾರಕ್ಕೆ ಭಾರಿ ತೊಂದರೆ ಉಂಟಾಯಿತು.

ಮೊದಲ ಬಾರಿ ಬೆಂಗಳೂರಿಗೆ ಬಂದ ಹಳ್ಳಿ ಯುವಕರನ್ನು ದೋಚಿದ ಆಟೋ ಚಾಲಕ

ʼʼ​ಗುವಾಹಟಿಯ ಉದ್ಯಮಿ ಗೌತಮ್ ಬರುವಾ, ಪತ್ನಿಯ ಹುಟ್ಟುಹಬ್ಬಕ್ಕೆ ಫ್ಲೈಓವರ್ ಅನ್ನು ಖಾಸಗಿ ಸ್ಥಳವನ್ನಾಗಿ ಪರಿವರ್ತಿಸಿದ್ದಾನೆ. ರೆಡ್ ಕಾರ್ಪೆಟ್ ಹಾಕಿ ಪಟಾಕಿ ಸಿಡಿಸಿ ಆಚರಣೆ ಮಾಡಿದ್ದಾನೆʼʼ ಎಂದು ಬರೆದು ಈ ವಿಡಿಯೊ ಶೇರ್ ಮಾಡಲಾಗಿದೆ. ಉದ್ಯಮಿಯ ಕೃತ್ಯವನ್ನು ಖಂಡಿಸಿದ ನೆಟ್ಟಿಗರೊಬ್ಬರು, ʼʼಈತನಿಗೆ ಒಂದು ಕೋಟಿ ರುಪಾಯಿ ದಂಡ ವಿಧಿಸಿ. ಸಾರ್ವಜನಿಕ ಆಸ್ತಿಯನ್ನು ತಮ್ಮದೇ ಆಸ್ತಿ ಎಂದುಕೊಂಡಿದ್ದಾನೆʼʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಇತರರಿಗೆ ತೊಂದರೆಯಾಗುತ್ತದೆ ಎನ್ನುವ ಕನಿಷ್ಠ ಜ್ಞಾನವು ಇವರಿಗಿಲ್ಲʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.