ದಳಪತಿ ವಿಜಯ್ ಫ್ಯಾನ್ಸ್ ಅತಿರೇಕದ ವರ್ತನೆ; ಗಣೇಶನ ರೂಪದಲ್ಲಿ ನಟನನ್ನು ನೋಡಿ ನೆಟ್ಟಿಗರು ಕಿಡಿ: ತಮಿಳುನಾಡಿನಲ್ಲಿ ಜೋರಾಯ್ತು ರಾಜಕೀಯ ಚರ್ಚೆ
Vijay-Themed Ganesh Idols: ಗಣೇಶ ಚತುರ್ಥಿ ಪ್ರಯುಕ್ತ ತಮಿಳುನಾಡನಲ್ಲಿ ಮುಖ್ಯಮಂತ್ರಿ ಹಾಗೂ ನಟ ವಿಜಯ ರೂಪ ಹೋಲುವ ಗಣೇಶ ವಿಗ್ರಹಗಳು ತಯಾರಿಸಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ತಕ್ಷಣ ವಿಗ್ರಹಗಳನ್ನು ತೆರವುಗೊಳಿಸಬೇಕು ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಮಂಗಳವಾರ ಒತ್ತಾಯಿಸಿದ್ದಾರೆ.
ತಮಿಳುನಾಡಿನಲ್ಲಿ ಕಂಡುಬಂದ ವಿಜಯ್ ಹೋಲುವ ಗಣಪತಿ ವಿಗ್ರಹ -
ಚೆನ್ನೈ, ಸೆ. 15: ಗಣೇಶ ಹಬ್ಬ ಬಂದರೆ ಸಾಕು, ಭಕ್ತರು ಹಾಗೂ ಕಲಾವಿದರು ವಿಭಿನ್ನ ಆಕಾರಗಳಲ್ಲಿ ಮತ್ತು ವಿಶಿಷ್ಟ ಶೈಲಿಗಳಲ್ಲಿ ಗಣಪತಿ ಮೂರ್ತಿಗಳನ್ನು ತಯಾರಿಸುವುದು ಸಮಾನ್ಯ. ಕ್ರಿಕೆಟರ್‌ಗಳು, ಸಿನಿಮಾ ಪಾತ್ರಗಳು ಹಾಗೂ ಜನಪ್ರಿಯ ವ್ಯಕ್ತಿಗಳ ರೂಪದಲ್ಲಿ ಗಣೇಶನನ್ನು ಕೂರಿಸುವುದು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಆದರೆ ಈ ಬಾರಿ ತಮಿಳುನಾಡಿನಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ದಳಪತಿ ವಿಜಯ್ (Vijay) ಅವರ ರೂಪದಲ್ಲಿ ತಯಾರಿಸಲಾದ ಗಣೇಶ ಮೂರ್ತಿಗಳು ದೊಡ್ಡ ರಾಜಕೀಯ ರಂಪಾಟಕ್ಕೇ ದಾರಿ ಮಾಡಿಕೊಟ್ಟಿವೆ (Vijay-Themed Ganesh Idols). 'ವಿಜಯ್ ಥೀಮ್' ಗಣಪತಿ ಮೂರ್ತಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಧಾರ್ಮಿಕ ಹಬ್ಬವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ವಿಪಕ್ಷ ಡಿಎಂಕೆಯ ಆಕ್ರೋಶಕ್ಕೆ ಕಾರಣವಾಗಿದೆ.
ಗಣೇಶ ಚತುರ್ಥಿ ಉತ್ಸವದ ಅಂಗವಾಗಿ ತಮಿಳುನಾಡಿನ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಚೆನ್ನೈ, ಮಧುರೈ ಮತ್ತು ಕೊಯಮತ್ತೂರಿನಲ್ಲಿ ನಟ ವಿಜಯ ಅವರ ʼGOATʼ ಸಿನಿಮಾ ಹಾಗೂ ಅವರ ನೂತನ ರಾಜಕೀಯ ಪಕ್ಷದ ಶೈಲಿಯನ್ನು ಹೋಲುವ ಗಣೇಶನ ಮೂರ್ತಿಗಳನ್ನು ತಯಾರಿಸಲಾಗಿತ್ತು. ಕೆಲವೆಡೆ ಗಣೇಶನ ಮೂರ್ತಿಗೆ ವಿಜಯ್ ಅವರಂತೆ ಗ್ಲಾಸ್ ಹಾಕಿ, ರಾಜಕೀಯ ಪಕ್ಷದ ಬಾವುಟ ಹಾಗೂ ಚಿಹ್ನೆಗಳೊಂದಿಗೆ ಅಲಂಕರಸಲಾಗಿತ್ತು. ವಿಜಯ್ ಅವರ ಅಭಿಮಾನಿಗಳು ಹಾಗೂ ಟಿವಿಕೆ ಕಾರ್ಯಕರ್ತರು ಈ ಮೂರ್ತಿಗಳನ್ನು ಸಾರ್ವಜನಿಕ ಪಂಡಾಲ್‌ಗಳಲ್ಲಿ ಕೂರಿಸಿ ಸಂಭ್ರಮಿಸಿದ್ದರು. ಆದರೆ ಇದು ರಾಜ್ಯದಲ್ಲಿ ತೀವ್ರ ವಾಗ್ದಾಳಿಗೆ ದಾರಿ ಮಾಡಿಕೊಟ್ಟಿದೆ.
ರಾಜಕೀಯ ಗೊಂದಲ ಮೂಡಿಸಿದ ದಳಪತಿ ವಿಜಯ್ ಹೋಲುವ ಗಣೇಶನ ಮೂರ್ತಿ:
TVK High Command has instructed not to keep CM Vijay themed Lord Ganesha in RK Nagar, Chennai.
— Vijayagopal Muralidharan (@DharanVija47684) September 15, 2026
Decision has been taken yesterday.
In this specific location for almost past 8 years local Vijay supporters keep Vijay themed Lord Ganesha. However this year, they were adviced not to… pic.twitter.com/y7kCqD9VQE
ಟಿವಿಕೆ ಮತ್ತು ಡಿಎಂಕೆ ನಾಯಕರ ಸಮರ
ಧಾರ್ಮಿಕ ಹಬ್ಬ ಗಣೇಶ ಚತುರ್ಥಿಯನ್ನು ನಟನೊಬ್ಬನ ರಾಜಕೀಯ ಪ್ರಚಾರಕ್ಕಾಗಿ ಬಳಸುವುದು ಹಿಂದೂ ಧರ್ಮ ಮತ್ತು ದೇವರ ಅಪಚಾರ ಎಂದು ಧಾರ್ಮಿಕ ಸಂಘಟನೆಗಳು ಹಾಗೂ ಆಡಳಿತಾರೂಢ ಡಿಎಂಕೆ ನಾಯಕರು ಕಿಡಿಕಾರಿದ್ದಾರೆ. ಲಕ್ಷಾಂತರ ಭಕ್ತರು ಪೂಜಿಸಲ್ಪಡುವ ದೈವಿಕ ರೂಪವನ್ನು ಈ ರೀತಿಯಲ್ಲಿ ಪರಿವರ್ತಿಸುವುದು ಧಾರ್ಮಿಕ ಭಾವನೆಗಳಿಗೆ ದಕ್ಕೆಯನ್ನುಂಟು ಮಾಡುತ್ತದೆ. ರಾಜಕೀಯ ಜಾಹೀರಾತಿಗಾಗಿ ಆಧ್ಯಾತ್ಮಿಕ ಭಾವನೆಗಳನ್ನು ಅಲ್ಲಗಳೆಯುವುದು ಸರಿಯಲ್ಲ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಹೇಳಿದರು.
ಟಿವಿಕೆ ಮುಖಂಡನ ವಿರುದ್ಧ ಕೇಳಿಬಂತು ಲೈಂಗಿಕ ಕಿರುಕುಳ ಆರೋಪ
ತಮಿಳುನಾಡು ಪೊಲೀಸರು ಮತ್ತು ಸ್ಥಳೀಯ ಮುನ್ಸಿಪಲ್ ಅಧಿಕಾರಿಗಳು ರಾಜಕೀಯ ಶೈಲಿಯಲ್ಲಿದ್ದ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಅಡಚಣೆ ಉಂಟುಮಾಡುವಂತಹ ವಿಜಯ್ ಥೀಮ್‌ನ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅನುಮತಿ ನಿರಾಕರಿಸಿದ್ದಾರೆ. ಕೆಲವೆಡೆ ಇಂತಹ ಮೂರ್ತಿಗಳನ್ನು ವಶಕ್ಕೆ ಪಡೆದ ಘಟನೆಗಳೂ ನಡೆದಿವೆ.
ವಿಜಯ್ ಅವರ ಬೆಳವಣಿಗೆಯನ್ನು ಸಹಿಸದ ಡಿಎಂಕೆ ಪಂಡಾಲ್‌ಗಳಲ್ಲಿ ಇಂತಹ ಮೂರ್ತಿಗಳನ್ನು ಕೂರಿಸದಂತೆ ಪೊಲೀಸರ ಮೂಲಕ ತಡೆ ಒಡ್ಡುತ್ತಿದೆ ಎಂದು ಟಿವಿಕೆ ನಾಯಕರು ಆರೋಪಿಸಿದ್ದಾರೆ. ʼʼನಟನ ಮೇಲಿನ ಅಭಿಮಾನದಿಂದ ಅಭಿಮಾನಿಗಳು ಮೂರ್ತಿಗಳನ್ನು ತಯಾರಿಸಿದ್ದಾರೆ. ಇದರಲ್ಲಿ ಯಾವುದೇ ತಪ್ಪು ಇಲ್ಲ. ವಿಜಯ್ ಅವರ ರಾಜಕೀಯ ಬೆಳವಣಿಗೆಯನ್ನು ನೋಡಿ ಡಿಎಂಕೆ ಬೆಚ್ಚಿ ಬಿದ್ದಿದೆ. ಅದಕ್ಕಾಗಿಯೇ ಗಣೇಶೋತ್ಸವಕ್ಕೂ ತಡೆ ಒಡ್ಡುತ್ತಿದೆʼʼ ಎಂದು ಟಿವಿಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಶಾಸಕರಿಗೆ 35 ಕೋಟಿ ರುಪಾಯಿ ನೀಡುವ ಆಮಿಷ: ಡಿಎಂಕೆ ನಾಯಕನ ವಿರುದ್ಧ ಆಡಳಿತರೂಢ ಟಿವಿಕೆ ಆರೋಪ
ಪ್ರತಿಮೆಗಳನ್ನು ತೆರವುಗೊಳಿಸುವಂತೆ ಕಾರ್ಮಿಕರಿಗೆ ಸೂಚನೆ ನೀಡಲಾಗಿದೆ ಎಂದು ಟಿವಿಕೆ ಮೂಲಗಳು ತಿಳಿಸಿವೆ. ಸ್ಥಳೀಯ ಅಭಿಮಾನಿಗಳು ಕಳೆದ ಎಂಟು ವರ್ಷಗಳಿಂದ ಇಂತಹ ಮೂರ್ತಿಗಳನ್ನು ತಯಾರಿಸಿ ಸ್ಥಾಪಿಸುತ್ತಿದ್ದಾರೆ ಎಂದು ವರದಿಯಾಗಿದೆ.
ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.