ಹೃದಯ ವಿದ್ರಾವಕ ಘಟನೆ: ಚಲಿಸುವ ರೈಲಿನಿಂದ ಕೈತಪ್ಪಿ ಬಿದ್ದು 9 ತಿಂಗಳ ಕಂದಮ್ಮನ ದಾರುಣ ಅಂತ್ಯ: 23 ಗಂಟೆಗಳ ಬಳಿಕ ಮೃತದೇಹ ಪತ್ತೆ
Faizullahpur Horror: ಚಲಿಸುವ ರೈಲಿನಿಂದ 9 ತಿಂಗಳ ಕಂದಮ್ಮ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಫೈಜುಲ್ಲಾಪುರ ನಿಲ್ದಾಣದ ಬಳಿ ತಾಯಿ ಮಗುವಿಗೆ ಹಾಲುಣಿಸುತ್ತಿದ್ದಾಗ ಮಗು ಕಿಟಕಿಯಿಂದ ಜಾರಿ ಬಿದ್ದಿದೆ.
ಸಾಂದರ್ಭಿಕ ಚಿತ್ರ -
ಲಖನೌ, ಸೆ. 14: ಚಲಿಸುವ ರೈಲಿನಿಂದ 9 ತಿಂಗಳ ಕಂದಮ್ಮ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಘಟನೆ (Viral News) ನಡೆದಿದೆ. ಉತ್ತರ ಪ್ರದೇಶದ ಫೈಜುಲ್ಲಾಪುರ ನಿಲ್ದಾಣದ ಬಳಿ ತಾಯಿಹಾಲುಣಿಸುತ್ತಿದ್ದಾಗ ಮಗು ಕಿಟಕಿಯಿಂದ ಜಾರಿ ಬಿದ್ದಿದೆ. ಮಗುವಿನ ಮೃತದೇಹವನ್ನು ಸುಮಾರು 23 ಗಂಟೆಗಳ ಕಾರ್ಯಾಚರಣೆ ನಂತರ ಹೊರತೆಗೆಯಲಾಯಿತು.
ದೆಹಲಿಯ ಸೀತಾಪುರಿ ಪ್ರದೇಶದಲ್ಲಿ ವಾಸಿಸುವ ಮೋಹನ್ ಕುಮಾರ್-ಕಾಜಲ್ ದಂಪತಿ ಒಂಬತ್ತು ತಿಂಗಳ ಮಗನೊಂದಿಗೆ ಬಿಹಾರದ ಬೇಗುಸರಾಯ್ ಜಿಲ್ಲೆಯ ಸಲೌನಾ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು. ಕಾಜಲ್ ಮಗುವಿಗೆ ಹಾಲು ಉಣಿಸುತ್ತಿದ್ದಾಗ ಆಕಸ್ಮಿಕವಾಗಿ ನಿದ್ದೆಗೆ ಜಾರಿದರು. ಈ ವೇಳೆ ಮಗು ಕೈ ಜಾರಿ ರೈಲಿನ ಎಮರ್ಜೆನ್ಸಿ ಕಿಟಕಿಯಿಂದಲೇ ಹೊರಗೆ ಬಿದ್ದು ಬಿಟ್ಟಿತು.
ರೈಲಿನಿಂದ ಬಿದ್ದು ಮಗು ಸಾವು:
सीमांचल एक्सप्रेस के स्लीपर कोच की इमरजेंसी खिड़की से गिरा 9 माह का बच्चा, 18 घंटे से दिल्ली-हावड़ा ट्रैक किनारे खोजबीन जारी +++++
— Nikky Choudhary (@saharawatnikky0) September 13, 2026
दिल्ली के पालमगांव निवासी मोहन कुमार अपनी पत्नी काजल व नौ माह के बच्चे के साथ सीमांचल एक्सप्रेस के एस-1 कोच के सीट नंबर 61 में यात्रा कर रहे थे।… pic.twitter.com/MdU5dfCmFV
ಮಗುವಿನ ತಂದೆ ಮೋಹನ್ ಶೌಚಾಲಯಕ್ಕೆ ತೆರಳಿ ಹಿಂತಿರುಗಿದಾಗ ಘಟನೆ ಬೆಳಕಿಗೆ ಬಂದಿದೆ. ಆರಂಭದಲ್ಲಿ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದುಕೋಚ್‌ನಲ್ಲಿ ಹುಡುಕಾಡಿದ್ದಾರೆ. ಬಳಿಕ ಮಗು ರೈಲಿನಿಂದ ಬಿದ್ದಿರುವುದನ್ನು ಅರಿತ ತಕ್ಷಣ ಚೈನ್ ಎಳೆಯಲು ಯತ್ನಿಸಿದ್ದಾರೆ. ಆದರೆ ಅದು ಅರಣ್ಯ ಪ್ರದೇಶವಾಗಿರುವುದರಿಂದ ಜತೆಯಲ್ಲಿದ್ದ ಪ್ರಯಾಣಿಕರು ಹಾಗೂ ಭದ್ರತಾ ಸಿಬ್ಬಂದಿ ಚೈನ್ ಎಳೆಯದಂತೆ ಮನವಿ ಮಾಡಿದ್ದಾರೆ.
ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ; ನುಗ್ಗಿ ದಾಳಿ ಮಾಡಿದ ಒಂಟಿ ಸಲಗ
ಬಳಿಕ ದಂಪತಿ ಪ್ರಯಾಗ್‌ರಾಜ್‌ಗೆ ತೆರಳಿ ಅಲ್ಲಿ ಘಟನೆಯ ಬಗ್ಗೆ ಜಿಆರ್‌ಪಿಗೆ ಮಾಹಿತಿ ನೀಡಿದರು. ಫತೇಪುರ್ ಜಿಆರ್‌ಪಿ ಎಸ್‌ಒ ವಿನೋದ್ ಕುಮಾರ್ ಮತ್ತು ಆರ್‌ಪಿಎಫ್ ಕಂಪನಿ ಕಮಾಂಡರ್ ರಾಜಿಂದರ್ ಕುಮಾರ್ ಅವರ ಜಂಟಿ ತಂಡ ರೈಲ್ವೆ ಹಳಿಗಳಲ್ಲಿ ಹುಡುಕಾಟವನ್ನು ಪ್ರಾರಂಭಿಸಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿತು.
ಘಟನೆ ನಡೆದ ಸುಮಾರು 23 ಗಂಟೆಗಳ ನಂತರ ಫೈಜುಲ್ಲಾಪುರ ನಿಲ್ದಾಣದ ಬಳಿಯ ಪೊದೆಯಲ್ಲಿ ಮಗುವಿನ ಮೃತದೇಹ ಸಿಕ್ಕಿದೆ. ಮಗುವಿನ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಮಗುವಿನ ಮೃತದೇಹ ಸಿಕ್ಕ ನಂತರವೂ ಪೋಷಕರು ತೊಂದರೆಯಲ್ಲಿ ಸಿಲುಕಿದರು. ಅಸಮರ್ಪಕ ದಾಖಲೆ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಮರಣೋತ್ತರ ಪರೀಕ್ಷೆ ತಡವಾಗಿದ್ದು, ಪೋಷಕರು ಇಡೀ ರಾತ್ರಿ ರೈಲ್ವೆ ನಿಲ್ದಾಣದಲ್ಲೇ ಕಳೆಯಬೇಕಾಯಿತು.