ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಈ ಪ್ರಸಿದ್ಧ ದೇವಸ್ಥಾನದಲ್ಲಿ ಭಕ್ತರಿಗೆ ನಾಣ್ಯಗಳೇ ಪ್ರಸಾದ: ವಿಡಿಯೋ ನೋಡಿ!

Viral Video: ತಮಿಳುನಾಡಿನ ಈ ದೇವಾಲಯದಲ್ಲಿ ಮಾತ್ರ ಹಣವನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ದರ್ಶನಕ್ಕಾಗಿ ಸಾಲಿನಲ್ಲಿ ಹಲವಾರು ಜನರು ನಿಂತಿರುವ ದೃಶ್ಯ ಕಂಡು ಬಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಶ್ರೀ ವರಮ್ ತರುಮ್ ಮಾಳಿಗೈಪರೈ ಕರುಪ್ಪಸಾಮಿ ದೇವಾಲಯದಲ್ಲಿ ನಡೆದ ಉತ್ಸವದ ಸಂದರ್ಭದಲ್ಲಿ ಈ ಆಚರಣೆ ನಡೆದಿದೆ..

ಈ ದೇವಾಲಯದಲ್ಲಿ ನಾಣ್ಯಗಳೇ ದೇವರಿಗೆ ಪ್ರಸಾದ

ತಮಿಳುನಾಡಿನ ಈ ದೇವಾಲಯದಲ್ಲಿ ನಾಣ್ಯಗಳೇ ದೇವರಿಗೆ ಪ್ರಸಾದ -

Profile
Pushpa Kumari May 13, 2026 9:50 PM

ಚೆನ್ನೈ, ಮೇ 13: ಸಾಮಾನ್ಯವಾಗಿ ದೇವಸ್ಥಾನ ಅಂದಾಗ ಭಕ್ತರು ಕಾಣಿಕೆ ಹಾಕಿ ದೇವರ ಆಶೀರ್ವಾದ ಪಡೆಯುತ್ತಾರೆ. ಆದರೆ ತಮಿಳುನಾಡಿನ ಈ ದೇವಾಲಯದಲ್ಲಿ ಮಾತ್ರ ಹಣವನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ದರ್ಶನಕ್ಕಾಗಿ ಸಾಲಿನಲ್ಲಿ ಹಲವಾರು ಜನರು ನಿಂತಿರುವ ದೃಶ್ಯ (Viral News) ಕಂಡು ಬಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಶ್ರೀ ವರಮ್ ತರುಮ್ ಮಾಳಿಗೈಪರೈ ಕರುಪ್ಪಸಾಮಿ ದೇವಾಲಯ ದಲ್ಲಿ ನಡೆದ ಉತ್ಸವದ ಸಂದರ್ಭದಲ್ಲಿ ಈ ಆಚರಣೆ ನಡೆದಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಅರ್ಚಕರೊಬ್ಬರು ಬಾಯಿ ಯಲ್ಲಿ ಸಿಗರೇಟ್ ಇಟ್ಟುಕೊಂಡು ಸಾಲಿನಲ್ಲಿ ಇರುವ ಭಕ್ತರರಿಗೆ ನಾಣ್ಯವನ್ನು ವಿತರಣೆ ಮಾಡಿದ್ದಾರೆ. ಮಾಹಿತಿಯ ಪ್ರಕಾರ ಇಲ್ಲಿ ಭಕ್ತರಿಗೆ ನಾಣ್ಯವನ್ನು ಪ್ರಸಾದವಾಗಿ ನೀಡಲಾಗುತ್ತದೆ. ಇದನ್ನು 'ಪಿಡಿ ಕಾಸು' ಎಂದು ಕರೆಯಲಾಗುತ್ತದೆ.

ವಿಡಿಯೋ ನೋಡಿ:



ಈ ನಾಣ್ಯವನ್ನು ಮನೆಯಲ್ಲಿ ಇಟ್ಟರೆ ಆರ್ಥಿಕವಾಗಿ ಅಭಿವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಕೆಲವು ಭಕ್ತರು ಕರುಪ್ಪ ಸ್ವಾಮಿಯ ದೇವಾಲಯಗಳಲ್ಲಿ ಪದ್ಧತಿಗಳ ಭಾಗವಾಗಿ ಸಾಂಪ್ರದಾಯಿಕ ವಾಗಿ ಹಳ್ಳಿಗಾಡಿನ ಸಿಗಾರ್ ಮತ್ತು ಮದ್ಯವನ್ನು ಆರ್ಪಿಸುತ್ತಾರೆ.

Viral Video: ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ

ಸದ್ಯ ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ತ್ವರಿತವಾಗಿ ವೈರಲ್ ಆಗಿದ್ದು 719,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾವಿರಾರು ಲೈಕ್‌ಗಳನ್ನು ಗಳಿಸಿದೆ. ಆದರೆ ದೇವಸ್ಥಾನದ ಬಳಿಯೇ ಅರ್ಚಕರು ಸಿಗರೇಟ್ ಸೇದಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುವಂತೆ ಅರ್ಚಕರು ಧೂಮಪಾನ ಮಾಡುವುದು ಸರಿಯಲ್ಲ. ಇಂತಹ ಆಚರಣೆಗಳನ್ನು ನಿಲ್ಲಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಆದರೆ ಈ ದೂರುಗಳನ್ನು ಸ್ಥಳೀಯ ಭಕ್ತರು ತಳ್ಳಿಹಾಕಿದ್ದಾರೆ. ಈ ದೈವಕ್ಕೆ ನಾಟಿ ಚುಟ್ಟಾ ಮತ್ತು ಮದ್ಯವನ್ನು ಅರ್ಪಿಸುವುದು ಸಂಪ್ರದಾಯದ ಭಾಗ ಎಂದಿದ್ದಾರೆ. ಒಬ್ಬ ಬಳಕೆದಾರರು ಈ ದೃಶ್ಯಗಳನ್ನು ಟೀಕಿಸುತ್ತಾ, ಬಾಯಿಯಲ್ಲಿ ಸಿಗರೇಟ್ ಇದೆಂಥ ಆಚರಣೆ ಎಂದು ಬರೆದಿದ್ದಾರೆ..