2027ರ ಒಳಗೆ ಅಮೆರಿಕ ನಾಶ, ಟ್ರಂಪ್ ಕೊನೆಯ ಅಧ್ಯಕ್ಷ: ಅಘಾತಕಾರಿ ಭವಿಷ್ಯ ನುಡಿದ ಜ್ಯೋತಿಷಿ
Viral Video: ಮಧ್ಯ ಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಹಾಗೂ ಯುದ್ದ ಸಂಭವಿಸಲಿದೆ ಎಂದು ಅನೇಕ ಜ್ಯೋತಿಷ್ಯರು ಈ ಹಿಂದೆ ಭವಿಷ್ಯ ನುಡಿದಿದ್ದರು. ಇದೀಗ ಡೊನಾಲ್ಡ್ ಟ್ರಂಪ್, ಭಾರತ, ಬಿಹಾರ, ಬಂಗಾಳ ಮತ್ತು ಯುನೈಟೆಡ್ ಸ್ಟೇಟ್ಸ್ನ ಭವಿಷ್ಯದ ಬಗ್ಗೆ ಜ್ಯೋತಿಷಿ ರೀನಾ ಶರ್ಮಾ ಈ ಹಿಂದೆ ನೀಡಿರುವ ಭವಿಷ್ಯ ವಾಣಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಜ್ಯೋತಿಷಿ ರೀನಾ ಶರ್ಮಾ -
ನವದೆಹಲಿ,ಮೇ 13: 2026ರಲ್ಲಿ ಯುರೋಪ್ ಮತ್ತು ಮಧ್ಯ ಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಹಾಗೂ ಯುದ್ದ ಸಂಭವಿಸಲಿದೆ ಎಂದು ಅನೇಕ ಜ್ಯೋತಿಷ್ಯರು ಈ ಹಿಂದೆ ಭವಿಷ್ಯ ನುಡಿದಿದ್ದರು. ಇದೀಗ ಡೊನಾಲ್ಡ್ ಟ್ರಂಪ್, ಭಾರತ, ಬಿಹಾರ, ಬಂಗಾಳ ಮತ್ತು ಯುನೈ ಟೆಡ್ ಸ್ಟೇಟ್ಸ್ನ ಭವಿಷ್ಯದ ಬಗ್ಗೆ ಜ್ಯೋತಿಷಿ ರೀನಾ ಶರ್ಮಾ (Astrologer Reena Sharma) ಈ ಹಿಂದೆ ನೀಡಿರುವ ಭವಿಷ್ಯ ವಾಣಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಆಚಾರ್ಯ ರೀನಾ ಶರ್ಮಾ ಅಕ್ಟೋಬರ್ 6, 2025 ರಂದು ಈ ಭವಿಷ್ಯವನ್ನು ನುಡಿದಿದ್ದರು. ರೀನಾ ಶರ್ಮಾ ಅವರ ಪ್ರಕಾರ, ಅಮೆರಿಕವು ಇನ್ನು ಮುಂದೆ "ಯುನೈಟೆಡ್ ಸ್ಟೇಟ್ಸ್" ಆಗಿ ಉಳಿ ಯುವುದಿಲ್ಲ. ಡೊನಾಲ್ಡ್ ಟ್ರಂಪ್ ಅಮೆರಿಕದ ಕೊನೆಯ ಅಧ್ಯಕ್ಷರಾಗುತ್ತಾರೆ ಎಂದು ಭವಿಷ್ಯ ನುಡಿದ್ದಿದ್ದರು.ಸೋವಿಯತ್ ಒಕ್ಕೂಟದಂತೆ ದೇಶವು ವಿಭಜನೆಯಾಗಬಹುದು ಎಂದು ಭೀತಿ ಹುಟ್ಟಿಸುವ ಭವಿಷ್ಯ ನುಡಿದಿದ್ದರು.
ವಿಡಿಯೋ ನೋಡಿ:
ಜುಲೈ 2027 ರ ಒಳಗೆ ಅಮೆರಿಕದ 2 ರಿಂದ 3 ರಾಜ್ಯಗಳು ಒಕ್ಕೂಟದಿಂದ ಬೇರ್ಪಡಲಿದೆ. ಸೋವಿ ಯತ್ ಒಕ್ಕೂಟ ಹೇಗೆ ವಿಘಟನೆಯಾಯಿತೋ, ಅಮೆರಿಕಕ್ಕೂ ಅದೇ ಸಮಯ ಬಂದಿದೆ ಎಂದಿದ್ದಾರೆ. ಅದೇ ರೀತಿ 2027 ರ ಮೊದಲು ಭಾರತವು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ವಾಗುತ್ತದೆ. ಜುಲೈ 2027ರ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಕಾಯಂ ಸದಸ್ಯತ್ವವನ್ನು ವೀಟೋ ಅಧಿಕಾರದೊಂದಿಗೆ ಪಡೆಯಲಿದೆ ಎಂದಿ
ದ್ದಾರೆ.
ಅದೇ ರೀತಿ ಪಶ್ಚಿಮ ಬಂಗಾಳದಲ್ಲಿ ದೊಡ್ಡ ರಾಜಕೀಯ ಬದಲಾವಣೆಯನ್ನು ಅವರು ಮೊದಲೇ ಸೂಚಿಸಿದ್ದರು. ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನ ಅಂತ್ಯವಾಗಲಿದ್ದು ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಅವರು ಹೇಳಿದ್ದರು. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತಮ್ಮ ಪೂರ್ಣಾ ವಧಿಯನ್ನು ಪೂರ್ಣಗೊಳಿಸುವುದಿಲ್ಲ ಮತ್ತು ಮುಂದಿನ ಚುನಾವಣೆಗೆ ಮುನ್ನ ರಾಜೀನಾಮೆ ನೀಡಲಿದ್ದಾರೆ ಎಂದು ರೀನಾ ಶರ್ಮಾ ಹೇಳಿದ್ದಾರೆ.
ಈ ವಿಡಿಯೊ ಆನ್ಲೈನ್ನಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಭವಿಷ್ಯವಾಣಿಗಳನ್ನು ಆಸಕ್ತಿದಾಯಕವೆಂದು ಕರೆದರೆ ಇನ್ನು ಕೆಲವರು ಇದನ್ನು ತಿರಸ್ಕರಿಸಿದರು. ನೆಟ್ಟಿಗರೊಬ್ಬರು ಬಂಗಾಳದ ವಿಷಯದಲ್ಲಿ ಇವರ ಭವಿಷ್ಯ ನಿಜವಾಗಿದೆ, ಆದ್ದರಿಂದ ಅಮೆರಿಕದ ವಿಷಯದಲ್ಲೂ ಏನಾದರೂ ಸಂಭವಿಸಬಹುದು ಎಂದು ಹೇಳಿದ್ದಾರೆ.