ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪಾರ್ಕ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅಣ್ಣ-ತಂಗಿಯನ್ನು ತಡೆದ ಪೊಲೀಸ್‌ ಅಧಿಕಾರಿ: ನೆಟ್ಟಿಗರಿಂದ ತರಾಟೆ

ಯುವತಿಯೊಬ್ಬಳ ಸುರಕ್ಷತೆಯ ಹೆಸರಿನಲ್ಲಿ ಅತಿಯಾದ ಕಾಳಜಿ‌ ತೋರಿದ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ವಿವಾದಕ್ಕೆ ಕಾರಣವಾಗಿದ್ದಾರೆ. ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ತನ್ನ ಅಣ್ಣನೊಂದಿಗೆ ದೇವಸ್ಥಾನದ ಪಾರ್ಕ್‌ಗೆ ಬಂದಿದ್ದ ಯುವತಿಯನ್ನು ತಡೆದು ಸಲಹೆ ನೀಡಿದ ಆರೋಪದ ಮೇಲೆ ಮಹಿಳಾ ಅಧಿಕಾರಿಯನ್ನು ವಿವಾದ ಭುಗಿಲೇಳುತ್ತಿದ್ದಂತೆ ವರ್ಗಾವಣೆ ಮಾಡಲಾಗಿದೆ.

ಅಣ್ಣ-ತಂಗಿಯನ್ನು ತಡೆದು ವಿವಾದಕ್ಕೆ ಸಿಲುಕಿದ ಕಾನ್ಸ್‌ಟೇಬಲ್

ಅಣ್ಣ-ತಂಗಿಯನ್ನು ತಡೆದ ಕಾನ್ಸ್‌ಟೇಬಲ್ -

Profile
Pushpa Kumari Dec 16, 2025 3:33 PM

ಲಖನೌ, ಡಿ. 16: ಪ್ರೀತಿ ಪ್ರೇಮ ಎಂದು ಪಾಲಕರ ಕಣ್ಣು ತಪ್ಪಿಸಿ ‌ಪಾರ್ಕ್, ಪ್ರವಾಸಿ ತಾಣ ಓಡಾಡುವ ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಈಗಾಗಲೇ ಹಲವು ಕಡೆ ಪೊಲೀಸ್ ಇಲಾಖೆಗೆ ದೂರು ಕೂಡ ಹೋಗಿದೆ. ಹೀಗಾಗಿ ಮಹಿಳೆಯರ ಸಹಾಯಕ್ಕಾಗಿ ಉತ್ತರ ಪ್ರದೇಶದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಹಿಳಾ ಪೊಲೀಸ್ ವಿಶೇಷ ಪಡೆಯನ್ನು ರಚಿಸಲಾಗಿದೆ. ಈ ಮಧ್ಯೆ ಯುವತಿಯೊಬ್ಬಳ ಸುರಕ್ಷತೆಯ ಹೆಸರಿನಲ್ಲಿ ಅತಿಯಾದ ಕಾಳಜಿ‌ ತೋರಿದ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ವಿವಾದಕ್ಕೆ ಗುರಿಯಾಗಿದ್ದಾರೆ. ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ತನ್ನ ಅಣ್ಣನೊಂದಿಗೆ ದೇವಸ್ಥಾನದ ಪಾರ್ಕ್‌ಗೆ ಬಂದಿದ್ದ ಯುವತಿಯನ್ನು ತಡೆದು ಸಲಹೆ ನೀಡಿದ ಆರೋಪದ ಮೇಲೆ ಮಹಿಳಾ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಸದ್ಯ ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ (Viral Video) ನಿಜವಾದ ಸಂಬಂಧಕ್ಕೆ ಬೆಲೆಯೇ ಇಲ್ಲವೇ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿಹರಿದಾಡುತ್ತಿದ್ದಂತೆ ಪೊಲೀಸ್ ಇಲಾಖೆಯ ಈ ಕ್ರಮವನ್ನು ಜನರು ಟೀಕಿಸಿದ್ದಾರೆ. ಉತ್ತರ ಪ್ರದೇಶದ ಮೌ ಜಿಲ್ಲೆಯ ದೇವಾಲಯವೊಂದರ ಉದ್ಯಾನವನಕ್ಕೆ ಯುವತಿ ಮತ್ತು ಆಕೆಯ ಸಹೋದರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಹಿಳಾ ಠಾಣಾಧಿಕಾರಿ ಅವರಿಬ್ಬರನ್ನು ತಡೆದು ಪಾಲಕರಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಹೋಗಬೇಡಿ ಎಂದು ಸಲಹೆ ನೀಡಿದರು. ಅಲ್ಲದೆ ತಂದೆ ಕರೆ ಮಾಡುವಂತೆ ತಿಳಿಸಿದರು.

ವಿಡಿಯೊ ನೋಡಿ:



ಮಹಿಳಾ ಸುರಕ್ಷತಾ ಜಾಗೃತಿ ಅಭಿಯಾನದ ಭಾಗವಾಗಿ ಮಹಿಳಾ ಠಾಣಾಧಿಕಾರಿ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅವರು, ನೆರೆಯ ಗಾಜಿಪುರ ಜಿಲ್ಲೆಯಿಂದ ಬಂದಿದ್ದ ಒಬ್ಬ ಯುವಕ, ಅಪ್ರಾಪ್ತ ಯುವತಿ ಮತ್ತು ಆಕೆಯ ಸೋದರ ಸಂಬಂಧಿಯನ್ನು ತಡೆದು ಇವರೆಲ್ಲ ಯಾರೆಂದು ಪ್ರಶ್ನೆ ಮಾಡಿದ್ದಾರೆ. ಇವರಿಬ್ಬರ ಸಂಬಂಧದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಧಿಕಾರಿಯು, ಯುವಕ ಆಕೆಯ ಸಹೋದರ ಎಂದು ಹೇಳಿದರೂ ನಂಬಿಲ್ಲ. ನಂತರ ಯುವತಿಯ ತಂದೆಗೆ ಸಿಬಂದಿ ಕರೆ ಮಾಡಿ ಗುರುತನ್ನು ಖಚಿತಪಡಿಸಿಕೊಂಡಿದ್ದಾರೆ.

ಪಾಕ್ ಪ್ರಧಾನಿಯನ್ನು 40 ನಿಮಿಷ ಕಾಯಿಸಿದ ಪುಟಿನ್

ಸಹೋದರ ಮತ್ತು ಸಹೋದರಿ ಎಂದು ಫೋನ್ ಮೂಲಕ ತಿಳಿದ ನಂತರವೂ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿಡಿಯೊದಲ್ಲಿ ಅಧಿಕಾರಿಯು ಯುವತಿಗೆ ಪಾಲಕರ ರಕ್ಷಣೆ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಕಾಣಿಸಿಕೊಳ್ಳಬಾರದು ಕಟ್ಟುನಿಟ್ಟಾಗಿ ಹೇಳುತ್ತಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೆ, ಆಕೆಯ ತಂದೆಗೂ ಫೋನ್ ಮಾಡಿ ತಮ್ಮ ಮಕ್ಕಳನ್ನು ಈ ರೀತಿ ರಕ್ಷಣೆ ಇಲ್ಲದೆ ಹೊರಗೆ ಕಳುಹಿಸಬಾರದೆಂದು ತಿಳಿಸಿದ್ದಾರೆ.

ಸದ್ಯ ಪೊಲೀಸ್ ಸಿಬ್ಬಂದಿ ಈ ವರ್ತನೆಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಮಹಿಳಾ ಅಧಿಕಾರಿಯನ್ನು ಅವರ ಹುದ್ದೆಯಿಂದ ವರ್ಗಾವಣೆ ಮಾಡಲಾಗಿದೆ. ಮೌ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ವರ್ಗಾಯಿಸಿರುವುದನ್ನು ಖಚಿತಪಡಿಸಿದ್ದಾರೆ.

ಸದ್ಯ ಈ ವಿಡಿಯೊ ನೋಡಿದ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಅಣ್ಣ-ತಂಗಿ ಎಂದು ತಿಳಿದ ನಂತರವೂ ಮತ್ತೆ ಪ್ರಶ್ನೆ ಮಾಡಿರುವುದು ತಪ್ಪು ಎಂದು ಬರೆದುಕೊಂಡಿದ್ದಾರೆ. ಕೆಲವರು ಪೊಲೀಸರ ನೈತಿಕ ಕರ್ತವ್ಯವನ್ನು ವಹಿಸಿಕೊಂಡು ಪ್ರತಿಕ್ರಿಯೆ ನೀಡಿದ್ದಾರೆ.