ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಲಿಕಾನ್‌ ಸಿಟಿ ಈಗ ಫುಲ್‌ ಹಾಟ್‌ : ಬೆಂಗಳೂರಿನ ಮನೆಯೊಳಗೇ ಕರಗಿದ ಕ್ರಯಾನ್ಸ್ ವಿಡಿಯೋ ಹಂಚಿಕೊಂಡ ಮಹಿಳೆ!

Viral Video: ಬೆಂಗಳೂರಿನಲ್ಲಿ ತೀವ್ರ ಬಿಸಿಯ ನಡುವೆ ಶಾಕಿಂಗ್ ಘಟನೆಯೊಂದು ನಡೆದಿದೆ.‌ ಹೌದು ಬೆಂಗಳೂರಿನಂತ ಮನೆಯಲ್ಲಿ ಪ್ಯಾನ್, ಎಸಿ ಸೌಲಭ್ಯ ಇದ್ದರೂ ಮನೆಯೊಳಗೆ ಇಟ್ಟಿದ್ದ ಬಣ್ಣದ ಬಳಪಗಳು ಬಿಸಿಯ ತಾಪಮಾನಕ್ಕೆ ಕರಗಿ ಹೋಗಿವೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಬೆಂಗಳೂರಿನ ಮನೆಯೊಳಗೇ ಕರಗಿದ ಕ್ರಯಾನ್ಸ್ ವಿಡಿಯೋ ಹಂಚಿಕೊಂಡ ಮಹಿಳೆ

ಬಿಸಿಲಿನ ತಾಪಕ್ಕೆ ಮನೆಯೊಳಗೆ ಕರಗಿದ ಕ್ರಯಾನ್ಸ್ -

Profile
Pushpa Kumari Apr 20, 2026 1:14 PM

ಬೆಂಗಳೂರು,ಎ. 20: ಇಂದು ಬಿಸಿಲಿನ ಬೇಗೆಗೆ ಜನ ಸೋತು ಹೋಗಿದ್ದಾರೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಜಾಸ್ತಿಯಾಗಿದ್ದು ಜನರನ್ನು ಆತಂಕಕ್ಕೆ ತಳ್ಳಿದೆ. ಈ ನಡುವೆ ಬೆಂಗಳೂರಿನಲ್ಲಿ ತೀವ್ರ ಬಿಸಿಯ ನಡುವೆ ಶಾಕಿಂಗ್ ಘಟನೆಯೊಂದು ನಡೆದಿದೆ.‌ ಹೌದು ಬೆಂಗಳೂರಿನಂತ ಮನೆಯಲ್ಲಿ ಪ್ಯಾನ್, ಎಸಿ ಸೌಲಭ್ಯ ಇದ್ದರೂ ಮನೆಯೊಳಗೆ ಇಟ್ಟಿದ್ದ ಬಣ್ಣದ ಬಳಪಗಳು ಬಿಸಿಯ ತಾಪಮಾನಕ್ಕೆ ಕರಗಿ ಹೋಗಿವೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.

ಬಿಸಿಲಿನ ತಾಪಮಾನ ಬಗ್ಗೆ ಹವಾಮಾನ ಇಲಾಖೆ ಈಗಾಗಲೇ ಕೆಲವೆಡೆ ಎಚ್ಚರಿಕೆಯನ್ನು ನೀಡಿತ್ತು. ಈ ನಡುವೆ ಬೆಂಗಳೂರಿನ ನಿವಾಸಿಯೊಬ್ಬರು ತಮ್ಮ ಸ್ವಂತ ಮನೆಯೊಳಗಿನ ಆಘಾತಕಾರಿ ಅನುಭವವನ್ನು ಶೇರ್ ಮಾಡಿ ಕೊಂಡಿದ್ದಾರೆ. ಒಳಾಂಗಣದ ಲ್ಲಿಯೂ ತೀವ್ರವಾದ ಶಾಖವು ಮೇಜಿನ ಮೇಲೆ ಇರಿಸಲಾದ ಕ್ರಯೋನ್‌ಗಳು ಭಾಗಶಃ ಕರಗಿ ಹೊಗಿದೆ‌ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ವಿಡಿಯೋ ನೋಡಿ:

ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೂ, ತಮ್ಮ ಮನೆಯೊಳಗೆ ಇಂತಹ ತೀವ್ರವಾದ ಶಾಖದ ಪರಿಸ್ಥಿತಿಗಳನ್ನು ಎಂದಿಗೂ ಅನುಭವಿಸಿಲ್ಲ. ಒಳಗಿನ ಭಾಗದ ಟೇಬಲ್‌ಟಾಪ್ ಆಮ್ಲೆಟ್ ಬೇಯಿಸುವಷ್ಟು ಬಿಸಿಯಾಗಿತ್ತು ಎಂದು ಅವರು ತಮಾಷೆ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಬಳಕೆದಾರ ಗೀತಾ ಶ್ರೀ ನಾಗರಾಜ್ ಎಂಬವರು ಹಂಚಿಕೊಂಡಿದ್ದಾರೆ‌...

Viral Video: ರೀಲ್ಸ್‌ಗಾಗಿ ಮೊಸಳೆಯ ಬಾಲ ಹಿಡಿಯಲು ಯತ್ನಿಸಿದ ಯುವಕ: ಅಪಾಯಕಾರಿ ವಿಡಿಯೊ ವೈರಲ್

ತಮ್ಮ ಮನೆಯ ಮೇಜಿನ ಮೇಲಿದ್ದ ಕ್ರಯಾನ್ಸ್‌ಗಳು ಬಿಸಿಲಿಗೆ ಮೆತ್ತಗಾಗಿ, ಕರಗಿ ಹೋಗಿರುವುದನ್ನು ತೋರಿಸಿದ್ದಾರೆ. ಈ ಪೋಸ್ಟ್ ಆನ್‌ಲೈನ್‌ನಲ್ಲಿ ಹೆಚ್ಚು ವೈರಲ್ ಆಗಿದ್ದು ಬಿಸಿಯಾದ ಅನುಭವ ಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ತಂಪಾದ ವಾತಾವರಣ ಹೆಚ್ಚಿನವರು ಇಷ್ಟ ಪಡುತ್ತಾರೆ‌‌. ಆದರೆ ವೇಗವಾಗಿ ಬೆಳೆಯುತ್ತಿರುವ ನಗರ ಕೇಂದ್ರ, ಕಡಿಮೆಯಾಗುತ್ತಿರುವ ಹಸಿರು ಸ್ಥಳಗಳು ಮತ್ತು ಶಾಖದ ಬಗ್ಗೆ ಅನೇಕರು ಆತಂಕ ವ್ಯಕ್ತ ಪಡಿಸಿದರು. ಬಳಕೆದಾರರೊಬ್ಬರು ಕರಗುವ ಕ್ರಯೋನ್ ಟ್ರೇ ಒಂದು ಚಿಕ್ಕ ಸಮಸ್ಯೆಯಾಗಿ ಕಾಣಿಸಬಹುದು, ಆದರೆ ಈ ಘಟನೆಯು ಮುಂದೆ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.