ಸಾವಿರಾರು ವರ್ಷ ಕಳೆದರೂ ಅಚ್ಚಳಿಯದ ವಿಶ್ವಗುರು ಬಸವಣ್ಣ
ಬಸವ ಜಯಂತಿಯು 12ನೇ ಶತಮಾನದ ಸಮಾಜ ಸುಧಾರಕ, ದಾರ್ಶನಿಕ ಮತ್ತು ವಚನಕಾರ ಬಸವಣ್ಣ ನವರ ಜನ್ಮದಿನದ ಆಚರಣೆಯಾಗಿದೆ. ಇದನ್ನು ಪ್ರಮುಖವಾಗಿ ಕರ್ನಾಟಕ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ವೈಶಾಖ ಮಾಸದ 3ನೇ ದಿನದಂದು (ಅಕ್ಷಯ ತೃತೀಯ) ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು ವಿಶೇಷ ಪ್ರಾರ್ಥನೆಗಳು, ಬಸವಣ್ಣನವರ ಭಾವಚಿತ್ರ ಮೆರವಣಿಗಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
-
ವ್ಯಕ್ತಿ ವಿಶೇಷ
ಈಶ್ವರ ಎಸ್ .ಸಿ. ರಾಣೇಬೇನ್ನೂರ
ಇಂದು ಬಸವ ಜಯಂತಿ
2026ರ ಬಸವ ಜಯಂತಿಯು ಏ.20ರ ಸೋಮವಾರದಂದು ಆಚರಿಸಲಾಗುತ್ತದೆ. ಇದು ವಿಶ್ವಗುರು ಬಸವಣ್ಣನವರ 893ನೇ ಜನ್ಮದಿನೋತ್ಸವವಾಗಿದ್ದು ಕರ್ನಾಟಕದಲ್ಲಿ ಈ ದಿನದಂದು ರಾಜ್ಯಾದ್ಯಂತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಗೆಗಳ ಮತ್ತು ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗಿರುತ್ತದೆ.
ಬಸವ ಜಯಂತಿಯು 12ನೇ ಶತಮಾನದ ಸಮಾಜ ಸುಧಾರಕ, ದಾರ್ಶನಿಕ ಮತ್ತು ವಚನಕಾರ ಬಸವಣ್ಣನವರ ಜನ್ಮದಿನದ ಆಚರಣೆಯಾಗಿದೆ. ಇದನ್ನು ಪ್ರಮುಖವಾಗಿ ಕರ್ನಾಟಕ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ವೈಶಾಖ ಮಾಸದ 3ನೇ ದಿನದಂದು (ಅಕ್ಷಯ ತೃತೀಯ) ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು ವಿಶೇಷ ಪ್ರಾರ್ಥನೆಗಳು, ಬಸವಣ್ಣನವರ ಭಾವಚಿತ್ರ ಮೆರವಣಿಗಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಆಚರಣೆಯ ಮಹತ್ವ: ಬಸವಣ್ಣನವರು ಸಾಮಾಜಿಕ ಸಮಾನತೆ ಮತ್ತು ಲಿಂಗಾಧಾರಿತ ತಾರತಮ್ಯದ ವಿರುದ್ಧ ಹೋರಾಡಿದ ಮಹಾನ್ ಚೇತನ ಇವರ ಜನ್ಮದಿನವು ಇವರ ವಿಚಾರಗಳನ್ನು ಸ್ಮರಿಸುವ ದಿನವಾಗಿದೆ. ದಿನಾಂಕ ಇದು ಸಾಮಾನ್ಯವಾಗಿ ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಕ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಬರುತ್ತದೆ 2026 ರಲ್ಲಿ ಈ ಹಬ್ಬವು ಎಪ್ರಿಲ್ 20 ರಂದು ಆಚರಣೆಸಲ್ಪಡುತ್ತದೆ.
ಇದನ್ನೂ ಓದಿ: Hariram A Column: ಕ್ಷೇತ್ರ ಮರುವಿಂಗಡನೆ ಮಾರಕವೇ ?
ಆಚರಣೆಗಳು: ಜನರು ಬಸವೇಶ್ವರರ ಬೋಧನೆಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಇಷ್ಟಲಿಂಗ ಪೂಜೆಯನ್ನು ಮಾಡುತ್ತಾರೆ. ಬಸವ ಜಯಂತಿಯ ಅಂಗವಾಗಿ ಅನೇಕ ಸಂಘಟನೆಗಳು ಜಾಗೃತಿ ಯಾಗಿರಲಿ ಮತ್ತು ಸಾಂಸ್ಕೃತಿಕ ಕಾರ್ಯಾಕ್ರಮಗಳನ್ನು ಆಯೋಜಿಸುತ್ತವೆ. ಈ ದಿನವು ಲಿಂಗಾಯತ ಸಮುದಾಯಕ್ಕೆ ಅತ್ಯಂತ ಪವಿತ್ರವಾದ ಹಬ್ಬವಾಗಿದೆ. ಅವರು ಬಸವಣ್ಣನವರನ್ನು ತಮ್ಮ ಆಧ್ಯಾತ್ಮಿಕ ಗುರುವೆಂದು ಪರಿಗಣಿಸುತ್ತಾರೆ.
ಅನುಭವ ಮಂಟಪವನ್ನು ಸ್ಥಾಪಿಸಿದ ಮತ್ತು ವಚನ ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ, ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಭೋದಿಸಿ ಆ ಮಹಾನ್ ವ್ಯಕ್ತಿಯನ್ನು ಇಂದು ಎಲ್ಲರೂ ಸ್ಮರಿಸುತ್ತಾರೆ.
ಬಸವ ಜಯಂತಿಯ ಇತಿಹಾಸ: ಬಸವಣ್ಣನವರು ಸುಮಾರು 1131ರಿಂದ 1134ರಲ್ಲಿ ಕರ್ನಾಟಕ ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ (ಕೆಲವು ಮೂಲಗಳ ಪ್ರಕಾರ ಇಂಗಳೇಶ್ವರ) ಮಾದರಸ ಮತ್ತು ಮಾದಲಾಂಬಿಕ ದಂಪತಿಗಳಿಗೆ ಜನಿಸಿದರು. ಸಾಮಾಜಿಕ ಕ್ರಾಂತಿ 12ನೇ ಶತಮಾನದಲ್ಲಿ ಜಾತಿ ಪದ್ಧತಿ, ಅಸ್ಪಶ್ಯತೆ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ ಬಸವಣ್ಣನವರು, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು.
ಅನುಭವ ಮಂಟಪ: ಕಲ್ಯಾಣ ಚಾಲುಕ್ಯರ ಆಡಳಿತದಲ್ಲಿ ಪ್ರಧಾನಿಯಾಗಿದ್ದ ಬಸವಣ್ಣನವರು ‘ಅನುಭವ ಮಂಟಪ’ ಎಂಬ ಮೊದಲ ಸಂಸದೀಯ ವ್ಯವಸ್ಥೆಯನ್ನು ಸ್ಥಾಪಿಸಿದರು, ಇಲ್ಲಿ ಶಿವಶರಣರು, ಸಂತರು, ಮತ್ತು ದಾರ್ಶನಿಕರು ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳನ್ನು ಮುಕ್ತವಾಗಿ ಚರ್ಚಿಸುತ್ತಿದ್ದರು,
ವಚನ ಸಾಹಿತ್ಯ ಸರಳ ಕನ್ನಡ ಭಾಷೆಯಲ್ಲಿ ‘ವಚನ’ಗಳ ಮೂಲಕ ತತ್ವಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸಿದರು, ‘ಕಾಯಕವೇ ಕೈಲಸ’ (ಕೆಲಸವೇ ದೇವರೆಂದು ಪೂಜಿಸು) ಎಂಬ ಸಂದೇಶ ವನ್ನು ನೀಡಿದರು. ಲಿಂಗಾಯತ ಸಂಪ್ರದಾಯಕ ಸ್ಥಾಪಕರಾದ ಅವರು ಇಷ್ಟಲಿಂಗ ಪೂಜೆಯ ಮೂಲಕ ದೇವರೆಲ್ಲರಿಗೂ ಸಮಾನ ಎಂಬ ತತ್ವವನ್ನು ಪ್ರತಿಪಾದಿಸಿದರು.
ಅಂದು ಹಚ್ಚಿದ ಜ್ಯೋತಿ ಇಂದಿಗೂ ದಾರಿದೀಪ
ಬಸವಣ್ಣ, ಕರುನಾಡು ಕಂಡ ಮಹಾನ್ ಸಮಾಜ ಸುಧಾರಕ 12ನೇ ಶತಮಾನದಲ್ಲಿ ತನ್ನ ವಚನ ಮೂಲಕವೇ ಜ್ಞಾನದೀವಿಗೆ ಹಚ್ಚಿದ ವಿಶ್ವಗುರು, ಬಸವಣ್ಣನವರ ಮಾತು ಇಂದಿಗೂ ಪ್ರಸ್ತುತ ಇವರ ಒಂದೊಂದು ಮಾತು ಜೀವನಕ್ಕೆ ಪಾಠ ಬಸವಣ್ಣನವರ ತತ್ವ, ಆದರ್ಶ ಮಾತುಗಳನ್ನು ಪಾಲಿಸಿ ಜೀವನ ನಡೆಸಿದರೆ ಬದುಕು ನಂದನವನ ಸಮಾಜ ಖುಷಿ ತೋಟ ನುಡಿದರೆ ಮುತ್ತಿನ ಹಾರದಂತಿರ ಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದುಹುದೇನ ಬೇಕು, ಮಡಿಯೊಳಗೊಂದಾಗಿ ನಡೆಯದಿರ್ದೊಡೆ ಹಿಡಿದಿರ್ದಲಿಂಗ ಘಟ ಸರ್ಪವಾಗುವುದು ಕೂಡಲ ಸಂಗಮದೇವಾ’. ‘ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ, ದೇಹವೇ ದೇಗುಲ ಶಿರವೇ ಹೊನ್ನ ಕಳಶವಯ್ಯ ಕೂಡಲ ಸಂಗಮ ದೇವಾ ಕೇಳಯ್ಯ ಸ್ಥಾವರಕ್ಕಳಿವುಂಟು ಜಂಗಮ ಮಕ್ಕಳಿವಿಲ್ಲ’.
ಹೀಗೆ ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬೆಳಕು ತಂದವರು ಬಸವಣ್ಣನವರು ‘ಮೇಲು ಕೀಳು’ ಎಂಬ ಬೇಧ ಬಹಳಷ್ಟು ತೀವ್ರವಾಗಿದ್ದು ಕಾಲದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕವೇ ಸಮಾಜ ತಿದ್ದುವ ಕೆಲಸ ಮಾಡಿದರು ಕ್ರಾಂತಿಯ ಬೀಜ ಬಿತ್ತಿದರು ‘ಸಮಾನತೆ’ ಸಹಬಾಳ್ವೆಯ’ ಕನಸು ಕಂಡಿದ್ದರು ಬಸವಣ್ಣನವರು.
ಇದೇ ಕಾರಣಕ್ಕೆ ಅನುಭವ ಮಂಟಪವನ್ನು ಕಟ್ಟಿದರು ಈ ಮೂಲಕ ಎಲ್ಲ ವರ್ಗದವರು ಜೊತೆ ಯಾಗಿ ಸಾಗುವ ಅಂಧಶ್ರದ್ಧೆಗಳನ್ನು ಕಿತ್ತೊಗೆಯುವ ‘ಮೇಲು ಕೀಳು’ ಎಂಬ ಭಾವನೆಯನ್ನು ಹೊಗ ಲಾಡಿಸುವ ಪ್ರಯತ್ನವನ್ನು ಮಾಡಿದರು ನಮ್ಮ ಬಸವಣ್ಣನವರು. ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ.......ಇವನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ ಕೂಡಲ ಸಂಗಮದೇವಾ ನಿಮ್ಮ ಮಹಾ ಮನೆಯ ಮಗನೆಂದೆನಿಸಯ್ಯ ಈ ವನಚನಗಳ ಸಾಲೇ ಸಾಕು ಬಸವಣ್ಣನವರು ಅದೆಂಥಾ ಮಹೋನ್ನತ ಸಮಾಜ ಸುಧಾರಣೆಯ ಕನಸಿನೊಂದಿಗೆ ಹೆಜ್ಜೆ ಇಡುತ್ತಿದ್ದರೆಂದು.
ಕಾಯಕವೇ ಕೈಲಾಸ ಎಂಬ ಧ್ಯೇಯ ವಾಕ್ಯವನ್ನು ಎಲ್ಲರ ಎದೆಯಲ್ಲಿ ಬಿತ್ತಿದ ಕರುನಾಡಿನ ಮಣ್ಣಿನಲ್ಲಿ ಜನಿಸಿದ ಹೆಮ್ಮೆಯ ವಿಶ್ವಗುರು ಬಸವಣ್ಣನವರ ಜಯಂತಿ ಇಂದು ಹೀಗಾಗಿ, ಎಲ್ಲರೂ ಬಸವಣ್ಣನವರಿಗೆ ನಮಿಸುತ್ತಿದ್ದಾರೆ.
ಬಸವಣ್ಣನವರ ವಚನಗಳು ಸಾಮಾಜಿಕ ಸಮಾನತೆ, ಕಾಯಕ, ಮಹತ್ವ ಮತ್ತು ಭಕ್ತಿಯ ಸಾರವನ್ನು ಎತ್ತಿ ಹಿಡಿಯುತ್ತದೆ ‘ಕಳ್ಳಬೇಡ ಮುನಿಯಬೇಡ’ ‘ಉಳ್ಳವರು ಶಿವಾಲಯ ಮಾಡುವರು’ ‘ನಾನೊಬ್ಬನೆ ಉಳಿದೇನು’ ಮತ್ತು ‘ಕಾಯಕವೇ ಕೈಲಾಸ’ ಎಂಬಿತ್ಯಾದಿ ವಚನಗಳು ಜನಪ್ರಿಯವಾಗಿವೆ. ಇವು ಸರಳ ಕನ್ನಡದಲ್ಲಿ ದಾರ್ಶನಿಕ ಸತ್ಯಗಳನ್ನು ಬೋದಿಸುತ್ತವೆ.
ಸತ್ಯ ಮತ್ತು ಪ್ರಾಮಾಣಿಕತೆ ಕಳ್ಳಬೇಡ, ಕೊಲಬೇಡ, ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗಶುದ್ಧಿ ಇದೆ ನಮ್ಮ ಕೂಡಲಸಂಗಮದೇವರ ನೊಲಿಸುವ ಪರಿ" ಇದರ ಅರ್ಥ: ನೈತಿಕ ಜೀವನದ ಅಡಿಪಾಯ.
ಹೀಗಾಗಿ ಎಲ್ಲರೂ ಅವರವರ ಮನೆ ಮತ್ತು ಶಾಲಾ/ ಕಾಲೇಜು ಹಾಗೂ ಇತರೆ ಸ್ಥಳದಲ್ಲಿ . ರಾಜಕೀಯ, ಸಮಾಜಕಿಯವಾಗಿ, ಎಲ್ಲರೂ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. “ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಸಲಾಕೆ ಯಂತಿರಬೇಕು" ಇಡೀ ವಿಶ್ವವೇ ಬಸವ ಜಯಂತಿಯನ್ನು ಆಚರಿಸೋಣ ನಮ್ಮ ನಾಡು ಕಂಡ ಅಪ್ರತಿಮ ಕಾಯಕಯೋಗಿ ಬಸವಣ್ಣನವರ ಜಯಂತ್ಯೋತ್ಸವ ನಾಡಿಗೆ ಸುಖವನ್ನು ತರಲಿ ದೇಶ ದಲ್ಲಿ ನೆಮ್ಮದಿ ಮನೆ ಮಾಡಲಿ ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು.