ಎನರ್ಜಿ ಡ್ರಿಂಕ್ ಕ್ಯಾನ್‌ನಲ್ಲಿ ಸತ್ತ ಇಲಿ ಪತ್ತೆ: ವಿಡಿಯೊ ನೋಡಿ ಕಿಡಿಕಾರಿದ ನೆಟ್ಟಿಗರು!
Viral Video; ಎನರ್ಜಿ ಡ್ರಿಂಕ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿದ್ದು ಮಹಿಳೆಯೊಬ್ಬರಿಗೆ ಮರೆಯಲಾಗದ ಅನುಭವ ವಾಗಿದೆ.. ಪಾನೀಯದೊಳಗೆ ಇಲಿಯೊಂದು ತೆಲುತ್ತಿರುವುದು ಕಂಡು ಮಹಿಳೆ ದಂಗಾಗಿ ಹೋಗಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದ್ದಂತೆ ಆಹಾರ ಸುರಕ್ಷತೆ ಹಾಗೂ ಕಳಪೆ ಆಹಾರದ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ...
ಎನರ್ಜಿ ಡ್ರಿಂಕ್ ಕ್ಯಾನ್ ನಲ್ಲಿ ಸತ್ತ ಇಲಿ ಪತ್ತೆ -
ಕಳಪೆ ಆಹಾರ, ಕಡಿಮೆ ಗುಣಮಟ್ಟದ ಆಹಾರಗಳನ್ನು ಮಾರಾಟ ಮಾಡುವ ಅನೇಕ ದೃಶ್ಯಗಳು ಇತ್ತೀಚೆಗೆ ವೈರಲ್ (Viral News) ಆಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಎನರ್ಜಿ ಡ್ರಿಂಕ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿದ್ದು ಮಹಿಳೆಯೊಬ್ಬರಿಗೆ ಮರೆಯಲಾಗದ ಅನುಭವವಾಗಿದೆ.. ಪಾನೀಯದೊಳಗೆ ಇಲಿಯೊಂದು ತೆಲುತ್ತಿರುವುದು ಕಂಡು ಮಹಿಳೆ ದಂಗಾಗಿ ಹೋಗಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದ್ದಂತೆ ಆಹಾರ ಸುರಕ್ಷತೆ ಹಾಗೂ ಕಳಪೆ ಆಹಾರದ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಮಹಿಳೆಯೂ 'ಅಲಾನಿ' ಸಂಸ್ಥೆಯ ಎನರ್ಜಿ ಡ್ರಿಂಕ್ ಖರೀದಿ ಮಾಡಿ ಕುಡಿಯುತ್ತಿದ್ದರು. ಮತ್ತೊಂದು ಸಿಪ್ ಆಕೆ ಕುಡಿ ಯುತ್ತಿದ್ದಂತೆ ಆಕೆಯ ಬಾಯಿಗೆ ಯಾವುದೋ ಗಟ್ಟಿಯಾದ ವಸ್ತುವೊಂದು ಸಿಕ್ಕಿದಂತಾಗಿದೆ. ಇದನ್ನು ಕಂಡು ಆಕೆ ಐಸ್ ಕ್ಯೂಬ್ ಇರಬಹುದು ಎಂದು ಪರಿಶೀಲನೆ ಮಾಡಿದಾಗ ಸತ್ತ ಇಲಿಯೊಂದು ತೇಲುತ್ತಿರುವುದು ಕಂಡು ಬಂದಿದೆ.
ವಿಡಿಯೋ ನೋಡಿ:
This woman is going viral after drinking half her can of Alani energy drink only to feel something thud against her lips before discovering an entire mouse at the bottom of the can.
— Right Angle News Network (@Rightanglenews) May 14, 2026
I’m done drinking from cans. pic.twitter.com/bFfWwjC7R0
ಈ ಘಟನೆಯೂ ಈಗ ಪ್ರಮುಖ ಚರ್ಚಾಸ್ಪದ ವಿಚಾರವಾಗಿದ್ದು ಜನರು ಇದು ನಿಜವೋ ಅಥವಾ ಸುಳ್ಳೋ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕ್ಯಾನ್ ನಲ್ಲಿ ತಯಾರಿಸಿದ ಪಾನೀಯಗಳು ನಿಜವಾಗಿಯೂ ಸುರಕ್ಷಿತವೇ ಎಂದು ಚರ್ಚಿಸುತ್ತಿದ್ದಾರೆ. ಪಾನೀಯ ಅರ್ಧ ಕುಡಿದ ನಂತರ ಅಲಾನಿ ಎನರ್ಜಿ ಡ್ರಿಂಕ್ ಕ್ಯಾನ್‌ನಲ್ಲಿ ಸಂಪೂರ್ಣ ಇಲಿಯನ್ನು ಕಂಡುಕೊಂಡೆ ಎಂದು ಮಹಿಳೆಯೂ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.
Viral News: ಶೇಕಡಾ 49 ಅಂಕ ಪಡೆದ SSLC ವಿದ್ಯಾರ್ಥಿಯ ಫೋಟೊ ಶೇರ್ ಮಾಡಿದ ವ್ಯಕ್ತಿಯ ವಿರುದ್ಧ ನೆಟ್ಟಿಗರ ಆಕ್ರೋಶ
ಆಕೆ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದು ಕ್ಯಾನ್ ನ ರಂಧ್ರ ದೊಳಗೆ ಇಲಿ ಇರುವುದನ್ನು ಖಚಿತಪಡಿಸಿದ್ದಾರೆ. ಇನ್ನು ಮುಂದೆ ನಾನು ಕ್ಯಾನ್‌ನಲ್ಲಿರುವ ಯಾವುದೇ ಪಾನೀಯಗಳನ್ನು ಕುಡಿಯುವುದಿಲ್ಲ ಎಂದು ಆಕೆ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಆಘಾತ ಮತ್ತು ತಮಾಷೆಯ ಪ್ರತಿಕ್ರಿಯೆ ಗಳನ್ನು ನೀಡುತ್ತಿದ್ದಾರೆ. ಬಳಕೆದಾರರೊಬ್ಬರು ಇದು ನಿಜವಾಗಿದ್ದರೆ ಆಕೆ ಕಂಪನಿಯ ಮೇಲೆ ಮೊಕದ್ದಮೆ ಹೂಡಲಿದ್ದಾಳೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಕಂಪನಿಯವರು ಎಕ್ಸ್ಟ್ರಾ ಪ್ರೋಟಿನ್ ಆ್ಯಡ್ ಮಾಡಿದ್ದಾರೆ ಎಂದು ಬರೆದಿದ್ದಾರೆ. ಹಲವು ನೆಟ್ಟಿಗರು ಈ ವಿಡಿಯೋದ ಸತ್ಯಾಸತ್ಯತೆಯನ್ನು ಪ್ರಶ್ನೆ ಮಾಡಿದ್ದಾರೆ.