ಹೃದಯಾಘಾತವಾದರೂ ಪ್ರಾಣದ ಹಂಗು ತೊರೆದು 40 ಪ್ರಯಾಣಿಕರ ಜೀವ ಉಳಿಸಿದ ಬಸ್ ಚಾಲಕ!
Viral Video: ಕಾಕಿನಾಡದಿಂದ ವಿಶಾಖಪಟ್ಟಣಕ್ಕೆ 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅನ್ನು ಚಾಲನೆ ಮಾಡುವಾಗ ಚಾಲಕನಿಗೆ ಹೃದಯಾಘಾತವಾಗುತ್ತದೆ. ಚಾಲನೆ ಮಾಡುವಾಗಲೇ ಅವರಿಗೆ ತೀವ್ರವಾದ ಎದೆನೋವು ಕಾಣಿಸಿಕೊಂಡರೂ ತಮ್ಮ ಪ್ರಾಣಕ್ಕಿಂತ ಪ್ರಯಾಣಿಕರ ಸುರಕ್ಷತೆಯೇ ಮುಖ್ಯವೆಂದು ಭಾವಿಸಿದ್ದಾರೆ. ಕೂಡಲೇ ಬಸ್ಸಿನ ಮೇಲೆ ಹಿಡಿತ ಸಾಧಿಸಿ,ರಸ್ತೆಯ ಬದಿಗೆ ಅತ್ಯಂತ ಸುರಕ್ಷಿತವಾಗಿ ನಿಲ್ಲಿಸಿದ್ದಾರೆ.ಆದರೆ ಬಸ್ ನಿಂತ ತಕ್ಷಣವೇ ಅವರು ಸ್ಟಿರಿಂಗ್ ಮೇಲೆಯೇ ಕುಸಿದು ಬಿದ್ದಿದ್ದಾರೆ.
ಇಂಟರ್ ನೆಟ್ ಚಿತ್ರ -
ಕಾಕಿನಾಡ,ಅ. 10: ಜೀವಹೋಗುವ ಸಮಯದಲ್ಲೂ ಚಾಲಕರೊಬ್ಬರು ಕರ್ತವ್ಯ ಮರೆಯದೆ ಪ್ರಯಾಣಿಕ ಜೀವ ಉಳಿಸಿದ ಘಟನೆಯೊಂದು (Viral News) ನಡೆದಿದೆ. ಕಾಕಿನಾಡದಿಂದ ವಿಶಾಖಪಟ್ಟಣಕ್ಕೆ 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅನ್ನು ಚಾಲನೆ ಮಾಡುವಾಗ ಚಾಲಕನಿಗೆ ಹೃದಯಾಘಾತವಾಗುತ್ತದೆ. ಚಾಲನೆ ಮಾಡುವಾಗಲೇ ಅವರಿಗೆ ತೀವ್ರವಾದ ಎದೆನೋವು ಕಾಣಿಸಿಕೊಂಡರೂ ತಮ್ಮ ಪ್ರಾಣಕ್ಕಿಂತ ಪ್ರಯಾಣಿಕರ ಸುರಕ್ಷತೆಯೇ ಮುಖ್ಯವೆಂದು ಭಾವಿಸಿದ್ದಾರೆ. ಕೂಡಲೇ ಬಸ್ಸಿನ ಮೇಲೆ ಹಿಡಿತ ಸಾಧಿಸಿ,ರಸ್ತೆಯ ಬದಿಗೆ ಅತ್ಯಂತ ಸುರಕ್ಷಿತವಾಗಿ ನಿಲ್ಲಿಸಿದ್ದಾರೆ. ಆದರೆ ಬಸ್ ನಿಂತ ತಕ್ಷಣವೇ ಅವರು ಸ್ಟೇರಿಂಗ್ ಮೇಲೆಯೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದುರೂ ವೈದ್ಯರು ಅವರು ಮೃಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸಾವಿನ ಸಮಯದಲ್ಲೂ ತನನ್ನು ನಂಬಿದ್ದ ಪ್ರಯಾಣಿಕರ ಜೀವ ಉಳಿಸಬೇಕೆಂದು ಪಣತೊಟ್ಟ ಚಾಲಕನಿಗೆ ಎಲ್ಲರೂ ಕೃತಜ್ಞತೆ ಸಲ್ಲಿಕೆ ಮಾಡುತ್ತಿದ್ದಾರೆ.
40 మంది ప్రాణాలు కాపాడి, ప్రాణం విడిచిన ఆర్టీసీ డ్రైవర్ కాకినాడ నుండి వైజాగ్ వెళ్తున్న ఆర్టీసీ బస్సును నడుపుతూ గుండెపోటుకు గురైన డ్రైవర్ శివ ప్రాణం పోయే పరిస్థితిలోనూ నొప్పిని లెక్కచేయకుండా స్టీరింగ్ గట్టిగా పట్టుకొని, బస్సును సురక్షితంగా పక్కకు ఆపి తుదిశ్వాస విడిచిన శివ https://t.co/trdPBRUpJS
— Telugu Scribe (@TeluguScribe) October 9, 2026
ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ (APSRTC) ಚಾಲಕ ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅನ್ನು ಚಾಲನೆ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತೀರ ನೋವಿನಲ್ಲಿದ್ದರೂ 34 ವರ್ಷದ ಜೆಟ್ಟಿ ಶಿವ ಅವರು ಕಾಕಿನಾಡ-ವಿಶಾಖಪಟ್ಟಣ ಮಾರ್ಗದ ಟುನಿ ಬಳಿ ಬಸ್ಸಿನ ಮೇಲೆ ಹಿಡಿತ ಸಾಧಿಸಿ, ರಸ್ತೆಯ ಬದಿಗೆ ಅತ್ಯಂತ ಸುರಕ್ಷಿತವಾಗಿ ನಿಲ್ಲಿಸಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್‌ನಲ್ಲಿದ್ದ ಸುಮಾರು 40 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾಲಕ ಜೆಟ್ಟಿ ಶಿವ ಅವರ ಅಕಾಲಿಕ ನಿಧನಕ್ಕೆ ಎಪಿಎಸ್‌ಆರ್‌ಟಿಸಿ ಅಧ್ಯಕ್ಷ ಕೋನಕಲ್ಲ ನಾರಾಯಣ ಸಂತಾಪ ಸೂಚಿಸಿದ್ದಾರೆ. ಈ ಸಂದರ್ಭದಲ್ಲೂ ಧೈರ್ಯ, ಬದ್ಧತೆ ಮತ್ತು ಜವಾಬ್ದಾರಿಯು ಇಡೀ ಸಾರಿಗೆ ಸಂಸ್ಥೆಗೆ ಹೆಮ್ಮೆಯ ವಿಷಯ, ಮೃತರ ಕುಟುಂಬಕ್ಕೆ ಸಂಸ್ಥೆಯ ನಿಯಮಗಳ ಪ್ರಕಾರ ಎಲ್ಲಾ ರೀತಿಯ ಸರ್ಕಾರಿ ನೆರವು ನೀಡುವುದಾಗಿ ತಿಳಿಸಿದ್ದಾರೆ.