ಭಕ್ತಿ ಹೆಸರಲ್ಲಿ ಪರಿಸರ ಮಾಲಿನ್ಯ: ಗಂಗೋತ್ರಿ-ಯಮುನೋತ್ರಿ ನದಿಗೆ ಸೀರೆ ಎಸೆದ ಭಕ್ತರು
Viral News: ಭಕ್ತಿಯ ಹೆಸರಿನಲ್ಲಿ ನೀರಿಗೆ ಹಾಲು ಎರೆಯುವುದು, ಹೂವಿನ ಮಾಲೆಗಳನ್ನು ಎಸೆಯುವುದು ಹೀಗೆ ಪರಿಸರ ಮಾಲಿನ್ಯ ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭಕ್ತಿಯ ಹೆಸರಿನಲ್ಲಿ ಯುಮುನಾ ನದಿಯನ್ನು ಕಲುಷಿತ ಮಾಡಿರುವ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಉತ್ತರಾಖಂಡದ ಪವಿತ್ರ ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳ ನದಿಯಲ್ಲಿ ಸೀರೆ, ಬಟ್ಟೆಗಳು ಮತ್ತು ಪೂಜಾ ಸಾಮಗ್ರಿಗಳನ್ನು ಎಸೆದಿರುವ ಈ ವಿಡಿಯೊ ವೈರಲ್ ಆಗಿದೆ.
ಗಂಗೋತ್ರಿ-ಯಮುನೋತ್ರಿ ನದಿಗೆ ಸೀರೆಗಳನ್ನು ಎಸೆದ ಭಕ್ತರು -
ಡೆಹ್ರಾಡೂನ್, ಜೂ. 8: ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ಜನರು ಪರಿಸರವನ್ನೇ ಹಾಳು ಮಾಡುತ್ತಿದ್ದಾರೆ. ಸಂಪ್ರದಾಯವೆಂದು ನದಿಗೆ, ನೀರಿಗೆ ಹಾಲು ಎರೆಯುವುದು, ಹೂವಿನ ಮಾಲೆಗಳನ್ನು ಎಸೆಯುವುದು ಹೀಗೆ ಪರಿಸರ ಮಾಲಿನ್ಯ ಮಾಡುವಂತ ಅನೇಕ ಘಟನೆಗಳು ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಭಕ್ತಿಯ ಹೆಸರಿನಲ್ಲಿ ಯುಮುನಾ ನದಿಯನ್ನು ಕಲುಷಿತ ಮಾಡಿರುವ ದೃಶ್ಯವೊಂದು ನಡೆದಿದೆ. ಉತ್ತರಾಖಂಡದ ಪವಿತ್ರ ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳ ನದಿಯ ನೀರಿನಲ್ಲಿ ಸೀರೆ, ಬಟ್ಟೆಗಳು ಮತ್ತು ಪೂಜಾ ಸಾಮಗ್ರಿಗಳನ್ನು ಎಸೆದಿರುವ ವಿಡಿಯೊ ವೈರಲ್ (Viral News) ಆಗಿದೆ.
ಈ ವಿಡಿಯೊ ನೋಡಿದ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಗಂಗಾ ಮತ್ತು ಯಮುನಾ ಭಾರತದ ಎರಡು ಅತ್ಯಂತ ಪವಿತ್ರ ನದಿಗಳಾಗಿದ್ದು, ಹಿಂದೂ ಪುರಾಣದ ಪ್ರಕಾರ, ಈ ನದಿಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಜನರು ಅವುಗಳನ್ನು ಪೂಜಿಸುತ್ತಾರೆ. ಆದರೆ ಭಕ್ತಿಯ ಹೆಸರಿನಲ್ಲಿ ಜನರು ನದಿಯನ್ನೇ ಹಾಳು ಗೆಡವಿದರೆ ಹೇಗೆ? ವೈರಲ್ ಆದ ವಿಡಿಯೊದಲ್ಲಿ ಉತ್ತರಾಖಂಡದಲ್ಲಿರುವ ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ಪವಿತ್ರ ನೀರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಸೀರೆಗಳು, ಬಟ್ಟೆ ಮತ್ತು ಇತರ ತ್ಯಾಜ್ಯಗಳು ತೇಲುತ್ತಿರುವುದು ಕಂಡು ಬಂದಿದೆ.
ವಿಡಿಯೊ ನೋಡಿ:
ಈ ಬಟ್ಟೆಗಳು ನದಿಯ ಕಲ್ಲು-ಬಂಡೆಗಳಲ್ಲಿ ಸಿಲುಕಿ ನೀರಿನ ಹರಿವಿಗೆ ತಡೆ ಒಡ್ಡುತ್ತವೆ. ಪವಿತ್ರ ನದಿಗಳನ್ನು ದೇವತೆಯೆಂದು ಪೂಜಿಸುವ ಜನರೆ ಅದೇ ನದಿಯನ್ನು ಕಸದ ತೊಟ್ಟಿಯಂತೆ ಮಾಡುತ್ತಿರುವುದು ಯಾಕೆ? ಎಂದು ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಕೂಡ ಧ್ವನಿ ಎತ್ತಿದ್ದು, ತುರ್ತು ಕ್ರಮ ಕೈಗೊಳ್ಳಬೇಕೆಂದು ಕರೆ ನೀಡಿದ್ದಾರೆ. ಇಂತಹ ಪದ್ಧತಿಗಳ ಮೇಲೆ ನಿರ್ಬಂಧಗಳನ್ನು ಹೇರಬೇಕು ಎಂದು ಆಗ್ರಹಿಸಿದ್ದಾರೆ.
ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ನೆಟ್ಟಿಗರೊಬ್ಬರು, "ಇಂತಹ ಕೃತ್ಯ ಎಸಗುವವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ದಂಡ ವಿಧಿಸಬೇಕು" ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼನದಿಗಳನ್ನು ರಕ್ಷಿಸುವ ಮತ್ತು ಅವುಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯʼʼ ಎಂದು ಹೇಳಿದ್ದಾರೆ. ʼʼನದಿಗಳಿಗೆ ಕಸ ಎಸೆಯುವುದು ದೇವರಿಗೆ ಮಾಡುವ ಅಪಚಾರ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕುʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ.