Operation Sindoor: ಆಪರೇಷನ್ ಸಿಂದೂರ್ ದಿನವೇ ಹುಟ್ಟಿದ ಮಗುವಿಗೆ ಸಿಂದೂರಿ ಎಂದು ಹೆಸರು!
ಪಹಲ್ಗಾಮ್‍ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಪ್ರತಿಕ್ರಿಯೆಯಾಗಿ ಮೇ7 ರಂದು ಭಾರತೀಯ ಸೇನೆ ನಡೆಸಿದ್ದ ‘ಆಪರೇಷನ್ ಸಿಂದೂರ’(Operation Sindoor) ಕಾರ್ಯಾಚರಣೆಯ ವೇಳೆ ಬಿಹಾರದ ದಂಪತಿಗೆ ಹೆಣ್ಣು ಮಗುವೊಂದು ಜನಿಸಿತ್ತಂತೆ. ಅವರ ಕುಟುಂಬಕ್ಕೆ ಈ ದಿನ ಬಹಳ ಮಹತ್ವದು ಅನಿಸಿದ ಕಾರಣಕ್ಕೆ ಆ ಹೆಣ್ಣು ಮಗುವಿಗೆ 'ಸಿಂದೂರಿ' ಎಂದು ಹೆಸರಿಟ್ಟಿದ್ದಾರೆ.


ಪಟ್ನಾ: ಈ ಹಿಂದೆ ಸುನಾಮಿ ಬಂದಾಗ ಹೆಚ್ಚಿನ ಜನರು ಆ ಸಂದರ್ಭದಲ್ಲಿ ಹುಟ್ಟಿದ ತಮ್ಮ ಮಕ್ಕಳಿಗೆ ಸುನಾಮಿ ಎಂದು ಹೆಸರಿಟ್ಟಿದ್ದರು. ಅದೇ ರೀತಿ ಇತ್ತೀಚೆಗೆ ಪಹಲ್ಗಾಮ್‍ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೈನಿಕರು ‘ಆಪರೇಷನ್ ಸಿಂದೂರ’(Operation Sindoor) ಕಾರ್ಯಾಚರಣೆಯನ್ನು ನಡೆಸಿದ್ದರು. ಈ ವೇಳೆ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಸ್ಥಳಗಳಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿ ಅನೇಕ ಉಗ್ರರನ್ನು ಕೊಂದು ಹಾಕಿತ್ತು. ಆ ವೇಳೆ ಬಿಹಾರದ ದಂಪತಿಗೆ ಹೆಣ್ಣು ಮಗುವೊಂದು ಜನಿಸಿತ್ತಂತೆ. ಅವರ ಕುಟುಂಬಕ್ಕೆ ಈ ದಿನ ಬಹಳ ಮಹತ್ವದ್ದು ಎಂದೆನಿಸಿದ ಕಾರಣ ತಮ್ಮ ನವಜಾತ ಹೆಣ್ಣು ಮಗುವಿಗೆ 'ಸಿಂದೂರಿ' ಎಂದು ನಾಮಕರಣ ಮಾಡಿದ್ದಾರೆ.
ಬಿಹಾರದ ಕಟಿಹಾರ್ ಜಿಲ್ಲೆಯ ಬಾಲ್ತಿ ಮಹೇಶ್ಪುರ ಗ್ರಾಮದ ನಿವಾಸಿಗಳಾದ ಸಂತೋಷ್ ಮಂಡಲ್ ಮತ್ತು ರಾಖಿ ಕುಮಾರಿ ದಂಪತಿಯ ಮಗಳು ಆಪರೇಷನ್ ಸಿಂದೂರ ನಡೆಸಿದ ವೇಳೆ ಜನಿಸಿದ್ದಳಂತೆ. ಇದು ಉಗ್ರರ ವಿರುದ್ಧ ಭಾರತ ಗೆಲುವು ಸಾಧಿಸಿದ ದಿನವಾಗಿದೆ. ಹಾಗಾಗಿ ದಂಪತಿ ನವಜಾತ ಶಿಶುವಿಗೆ ಸಿಂದೂರಿ ಎಂದು ನಾಮಕರಣ ಮಾಡಿ ತಮ್ಮ ದೇಶಪ್ರೇಮವನ್ನು ಸಾರಿದ್ದಾರೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ(ಮೇ 7) ಬೆಳಿಗ್ಗೆ 2 ಗಂಟೆಯ ಸುಮಾರಿಗೆ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿದ್ದರು. ಈ ಮೂಲಕ 26 ನಾಗರಿಕರ ಸಾವಿಗೆ ಕಾರಣವಾದ ಪಾಕಿಸ್ತಾನದ ಭಯೋತ್ಪಾದಕರಿಗೆ ಭಾರತದ ಸಶಸ್ತ್ರ ಪಡೆಗಳು ತಕ್ಕ ಪಾಠ ಕಲಿಸಿತ್ತು.
ಈ ಸುದ್ದಿಯನ್ನೂ ಓದಿ:Viral Video: ಅಜ್ಜಿಯ ಆಸೆ ಈಡೇರಿಸಲು ವಧುವನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ಮೊಮ್ಮಗ; ವಿಡಿಯೊ ನೋಡಿ
ಪಹಲ್ಗಾಮ್ ದಾಳಿಯಲ್ಲಿ ಉಗ್ರರು ಭಾರತೀಯ ಮಹಿಳೆಯರ ಪತಿಯನ್ನು ಮಾತ್ರ ಗುಂಡಿಟ್ಟು ಕೊಂದಿದ್ದಾರೆ. ಹಿಂದೂ ಮಹಿಳೆಯರ ಪತಿಯನ್ನು ಕೊಂದ ಉಗ್ರರ ಸಂಹಾರಕ್ಕಾಗಿ ನಡೆಸಿದ ಪ್ರತಿದಾಳಿಗೆ ಆಪರೇಷನ್ ಸಿಂದೂರ್ ಎಂಬ ಹೆಸರು ಇಡಲಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಮಯದಲ್ಲಿ, ಹಲವಾರು ಮಹಿಳೆಯರು, ಭಾರತೀಯ ನೌಕಾಪಡೆಯ ಅಧಿಕಾರಿ ಸೇರಿದಂತೆ ತಮ್ಮ ಗಂಡಂದಿರನ್ನು ತಮ್ಮ ಮುಂದೆಯೇ ಕೊಲ್ಲುವುದನ್ನು ಕಣ್ಣಾರೆ ಕಂಡು ಅಸಹಾಯಕರಾಗಿ ಗೋಳಾಡಿದ್ದರು. ಇದು ಭಾರತೀಯರಲ್ಲಿ ರೋಷ ಉಕ್ಕಿ ಹರಿಯುವಂತೆ ಮಾಡಿತ್ತು.