Viral Video: ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ ಇಬ್ಬರಿಗೆ ಪೊಲೀಸರು ವಿಧಿಸಿದ ಶಿಕ್ಷೆ ಹೇಗಿತ್ತು ಗೊತ್ತೆ?
ಪಾಕಿಸ್ತಾನವನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಉತ್ತರ ಪ್ರದೇಶದ ಬರೇಲಿಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಉತ್ತರ ಪ್ರದೇಶ ಪೊಲೀಸರು ʼಪಾಕಿಸ್ತಾನ ಮುರ್ದಾಬಾದ್', ʼಹಿಂದೂಸ್ತಾನ್ ಜಿಂದಾಬಾದ್ʼ ಎಂದು ಘೋಷಣೆ ಕೂಗುವ ಶಿಕ್ಷೆ ನೀಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಲಖನೌ: ಪಾಕಿಸ್ತಾನವನ್ನು (Pakistan) ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಇಬ್ಬರು ವ್ಯಕ್ತಿಗಳಿಗೆ ಪೊಲೀಸರು ʼಹಿಂದೂಸ್ತಾನ್ ಜಿಂದಾಬಾದ್ʼ (Hindustan Zindabad) ಮತ್ತು ʼಭಾರತ್ ಮಾತಾ ಕಿ ಜೈʼ ( Bharat Mata Ki Jai) ಘೋಷಣೆ ಕೂಗುವ ಶಿಕ್ಷೆ ವಿಧಿಸಿರುವ ಘಟನೆ ಉತ್ತರ ಪ್ರದೇಶದ (Uttarpradesh) ಬರೇಲಿಯಲ್ಲಿ (Bareilly) ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಪಾಕ್ ಪರ ಪೋಸ್ಟ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದ ಇಬ್ಬರು ವ್ಯಕ್ತಿಗಳು ಬಳಿಕ 'ಪಾಕಿಸ್ತಾನ ಮುರ್ದಾಬಾದ್', 'ಹಿಂದೂಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಪಾಕಿಸ್ತಾನವನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಉತ್ತರ ಪ್ರದೇಶದ ಬರೇಲಿಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಪೊಲೀಸರು ನೀಡಿರುವ ಈ ಸಿಕ್ಷೆ ಇದೀಗ ಗಮನ ಸೆಳೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
ಈ ವಿಡಿಯೊದಲ್ಲಿ ಇಬ್ಬರು ʼಹಿಂದೂಸ್ತಾನ್ ಜಿಂದಾಬಾದ್ʼ, ʼಭಾರತ್ ಮಾತಾ ಕಿ ಜೈʼ ಎಂದು ಘೋಷಣೆ ಕೂಗುತ್ತಿರುವುದನ್ನು ಕಾಣಬಹುದು. ಈ ಇಬ್ಬರು ಪಾಕಿಸ್ತಾನವನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರಿಂದ ಉತ್ತರ ಪ್ರದೇಶ ಪೊಲೀಸರು ಅವರನ್ನು ಬಂಧಿಸಿ ಘೋಷಣೆ ಕೂಗುವ ಶಿಕ್ಷೆ ವಿಧಿಸಿದ್ದಾರೆ.
ರಾಜ್ಯದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಪೋಸ್ಟ್ ಅನ್ನುಸೈದ್ಪುರ ಲಷ್ಕರಿಗಂಜ್‌ನ ಇರ್ಫಾನ್ ಮತ್ತು ಜಾವೇದ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಕುರಿತು ಬಿತ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಅವರನ್ನು ವಶಕ್ಕೆ ಪಡೆದ ಪೊಲೀಸರು ತಮ್ಮ ಕೃತ್ಯಗಳಿಗೆ ಕ್ಷಮೆಯಾಚಿಸಿ ಭಾರತದ ಪರವಾಗಿ ಘೋಷಣೆ ಕೂಗುವಂತೆ ಶಿಕ್ಷೆ ವಿಧಿಸಿದರು. ಇದರ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
Bareilly: Wajid and Irfan were openly supporting Pakistan and challenging govt while living in India.
— Megh Updates 🚨™ (@MeghUpdates) May 24, 2025
UP Police swung into action, Gave them booster dose. Now they were seen chanting “Bharat Mata Ki Jai!” and “Hindustan Zindabad!” pic.twitter.com/pg4PbnAd5C
ಜಾವೇದ್ ಮತ್ತು ಇರ್ಫಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ನನ್ನ ಪ್ರದೇಶದಲ್ಲಿ ಮಾಹಿತಿದಾರರು ಇರುವಷ್ಟು ಪೊಲೀಸರು ಠಾಣೆಗಳಲ್ಲಿ ಇರುವುದಿಲ್ಲ ಎಂದು ಹೇಳಿದ್ದರೆ, ಇನ್ನೊಂದು ವಿಡಿಯೊದಲ್ಲಿ ಈಗ ಸ್ವಲ್ಪ ಮೌನವಿದೆ, ಆದರೆ ಶಬ್ದ ಬರುತ್ತದೆ. ಬೊಗಳುವ ನಾಯಿಗಳು, ನಾನು ಅವುಗಳ ನಾಲಿಗೆಯನ್ನು ಕತ್ತರಿಸುತ್ತೇನೆ ಎನ್ನುವ ಬೆದರಿಕೆ ಸಂದೇಶದೊಂದಿಗೆ ಈ ಇಬ್ಬರು ಪಾಕಿಸ್ತಾನಕ್ಕೆ ಬೆಂಬಲವನ್ನು ಸೂಚಿಸಿದ್ದರು.
ಇದನ್ನೂ ಓದಿ: Covid 19: ದೇಶದಾದ್ಯಂತ ಕೋವಿಡ್ 19 ಕೇಸ್ ಹೆಚ್ಚಳ; ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ
ಇದನ್ನು ಗಮನಿಸಿದ ಹಿಂದೂ ಸಂಘಟನೆಯ ಹಿಮಾಂಶು ಪಟೇಲ್ ಎಂಬವರು ಪೊಲೀಸರೊಂದಿಗೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಕುರಿತು ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿ, ಇಬ್ಬರನ್ನು ಬಂಧಿಸಿದರು.
ಬಳಿಕ ಆರೋಪಿಗಳು ಪೊಲೀಸರಿಂದ ಏಟು ತಿಂದು ಕುಂಟುತ್ತಾ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಈ ವಿಡಿಯೊವನ್ನು ತಪ್ಪಾಗಿ ಪೋಸ್ಟ್ ಮಾಡಿದ್ದೇವೆ. ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ಬಿಡುಗಡೆ ಮಾಡಿದ ವಿಡಿಯೊದಲ್ಲಿ ಇಬ್ಬರು ಆರೋಪಿಗಳು ಕೇವಲ 32 ಸೆಕೆಂಡುಗಳಲ್ಲಿ ಸುಮಾರು 20 ಬಾರಿ ʼಹಿಂದೂಸ್ತಾನ್ ಜಿಂದಾಬಾದ್ʼ, ʼಪಾಕಿಸ್ತಾನ ಮುರ್ದಾಬಾದ್ʼ ಎಂದು ಘೋಷಣೆ ಕೂಗುವುದನ್ನು ಕಾಣಬಹುದು. ಅವರು ಬದುಕಿರುವವರೆಗೂ ಈ ತಪ್ಪನ್ನು ಎಂದಿಗೂ ಪುನರಾವರ್ತಿಸುವುದಿಲ್ಲ ಎಂದು ಪೊಲೀಸರಿಗೆ ಭರವಸೆ ನೀಡಿದ್ದಾರೆ.