ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಸ್ತೆ ಮಧ್ಯೆ ಬಸ್ ನಿಲ್ಲಿಸಿ 'ಸೇವ್ ಪುರಿ' ಖರೀದಿಸಿದ ಚಾಲಕ; ಟ್ರಾಫಿಕ್ ಜಾಮ್‌ನಿಂದ ಪರದಾಡಿದ ಪ್ರಯಾಣಿಕರು!

Viral Video: ಬಸ್ ಚಾಲಕನೊಬ್ಬ ರಸ್ತೆ ಮಧ್ಯೆಯೆ ಬಸ್ ನಿಲ್ಲಿಸಿ ಸೆವ್ ಪುರಿ ಖರೀದಿಸಿದ ಘಟನೆಯೊಂದು ನಡೆದಿದೆ. ಚಾಲಕನ. ಬೇಜವ್ದಾರಿ ವರ್ತನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಕೇಳಿ ಬಂದಿದೆ. ಈ ಘಟನೆಯಿಂದಾಗಿ ಭಾರಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದು ಪ್ರಯಾಣಿಕರು ಮತ್ತು ವಾಹನ ಸವಾರರು ಪರದಾಡುವಂತಾಯಿತು‌.

ಸೇವ್ ಪುರಿ ಖರೀದಿಸಲು ರಸ್ತೆ ಮಧ್ಯೆ ಬಸ್ ನಿಲ್ಲಿಸಿದ ಚಾಲಕ: ನೆಟ್ಟಿಗರು ಕಿಡಿ

ಸೇವ್ ಪುರಿ ಖರೀದಿಸಲು ರಸ್ತೆ ಮಧ್ಯೆ ಬಸ್ ನಿಲ್ಲಿಸಿದ ಚಾಲಕ -

Profile
Pushpa Kumari Jul 13, 2026 3:39 PM

ಮುಂಬೈ,ಜು.13: ಇತ್ತೀಚೆಗೆ ಸಾರಿಗೆ ಇಲಾಖೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುವ ಅನೇಕ ಘಟನೆಗಳು ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಬಸ್ ಚಾಲಕನೊಬ್ಬ ರಸ್ತೆ ಮಧ್ಯೆಯೆ ಬಸ್ ನಿಲ್ಲಿಸಿ ಸೆವ್ ಪುರಿ ಖರೀದಿಸಿದ ಘಟನೆಯೊಂದು ನಡೆದಿದೆ. ಚಾಲಕನ. ಬೇಜವ್ದಾರಿ ವರ್ತನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ (Viral News) ಆಕ್ರೋಶ ಕೇಳಿ ಬಂದಿದೆ. ಈ ಘಟನೆಯಿಂದಾಗಿ ಭಾರಿ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದ್ದು ಪ್ರಯಾಣಿಕರು ಮತ್ತು ವಾಹನ ಸವಾರರು ಪರದಾಡುವಂತಾಯಿತು‌.

ಬಸ್ ಚಾಲಕನೊಬ್ಬ ಸೇವ್ ಪುರಿ ಖರೀದಿಸಲು ಜನನಿಬಿಡ ರಸ್ತೆಯಲ್ಲೇ ಹಲವಾರು ನಿಮಿಷಗಳ ಕಾಲ ಬಸ್ ನಿಲ್ಲಿಸಿದ್ದಾನೆ. ಈ ಘಟನೆ ಮುಂಬೈನ ಮುಲುಂಡ್‌ನ ಎಂ.ಜಿ. ರಸ್ತೆಯಲ್ಲಿ ನಡೆದಿದೆ. ದೀರ್ಘಕಾಲದ ನಿಲುಗಡೆಯಿಂದಾಗಿ ಪ್ರದೇಶದಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ಬಸ್‌ಗಳು ಸೇರಿದಂತೆ ಹಲವಾರು ವಾಹನಗಳು ನಿಂತ ಬಸ್‌ನ ಹಿಂದೆ ಸಿಲುಕಿಕೊಂಡಿರುವುದನ್ನು ಕಾಣಬಹುದು.

ವಿಡಿಯೋ ನೋಡಿ:



ಬಸ್ ಜನನಿಬಿಡ ರಸ್ತೆಯ ಮಧ್ಯದಲ್ಲಿ ನಿಂತಿರುವುದು ಕಂಡು ಬಂದಿದೆ.‌ ಎಕ್ಸ್‌ನಲ್ಲಿ ಹಂಚಿ ಕೊಂಡಿರುವ ಕ್ಲಿಪ್‌ನಲ್ಲಿ, ಚಾಲಕ ಇದ್ದಕ್ಕಿದ್ದಂತೆ ರಸ್ತೆಯ ಮಧ್ಯದಲ್ಲೇ ಬಸ್ ಅನ್ನು ನಿಲ್ಲಿಸಿದ್ದಾನೆ. ಬಸ್ ಕಂಡಕ್ಟರ್ ಕೆಳಗಿಳಿದು ಹೋಗಿ ಸೇವ್‌ ಪುರಿ ತಂದು ಚಾಲಕನಿಗೆ ನೀಡಿದ್ದಾನೆ. ಆ ಕ್ಷಣವನ್ನು ಅಲ್ಲಿದ್ದ ವ್ಯಕ್ತಿಯೊಬ್ಬ ರೆಕಾರ್ಡ್ ಮಾಡುತ್ತಿದ್ದು ಚಾಲಕ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ಸಾರ್ವಜನಿಕರ ಮೇಲೆಯೇ ರೇಗಾಡಿದ್ದಾನೆ.

Viral Video: ಫ್ರಾನ್ಸ್‌ನಲ್ಲಿ ಮಹಿಳೆಯರ ಸುರಕ್ಷತೆ ಆದ್ಯತೆ; ಮುಂಜಾನೆ 4:30ಕ್ಕೆ ಒಬ್ಬಂಟಿಯಾಗಿ ಬೀದಿಯಲ್ಲಿ ಓಡಾಡಿದ ಭಾರತೀಯ ಮಹಿಳೆ

ಬಸ್‌ ಸ್ಥಗಿತ ಮಾಡಿರುವುದರಿಂದ ರಸ್ತೆಯಲ್ಲಿ ಬೃಹತ್ ಸಂಚಾರ ದಟ್ಟಣೆಯನ್ನು ಸಹ ವೀಡಿಯೊ ಸೆರೆಹಿಡಿದಿದೆ. ಸಾರ್ವಜನಿಕರು ಈ ಅಡಚಣೆಯ ಬಗ್ಗೆ ಚಾಲಕನನ್ನು ಪ್ರಶ್ನಿಸಿದಾಗ, ಕ್ಷಮೆ ಕೇಳುವ ಬದಲು ಅಲ್ಲಿದ್ದವರನ್ನು ನಿಂದಿಸಿದ್ದಾನೆ. ಸುಮಾರು 20 ನಿಮಿಷಗಳ ಕಾಲ ಇಡೀ ರಸ್ತೆ ಬ್ಲಾಕ್ ಆಗಿತ್ತು. ಈ ಘಟನೆಯು ಶೀಘ್ರದಲ್ಲೇ ಬೃಹನ್‌ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಅಧಿಕಾರಿಗಳ ಗಮನಕ್ಕೆ ಬಂದಿದ್ದು ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಚಾಲಕನ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ ಎಂದು ಬೆಸ್ಟ್ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಈ ಘಟನೆಯು ಟೀಕೆಗೆ ಗುರಿಯಾಗಿದ್ದು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಚಾಲಕನ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ. ಬಳಕೆದಾರರೊಬ್ಬರು ಚಾಲಕರ ಈ ವರ್ತನೆ ನಿಲ್ಲಿಸಬೇಕು ದಯವಿಟ್ಟು ವೀಡಿಯೊ ಪುರಾವೆಗಳ ಮೇಲೆ ಕ್ರಮ ಕೈಗೊಳ್ಳಿ ಅಂದರು. ಮತ್ತೊಬ್ಬರು ಭಾರತದಲ್ಲಿ ನಾಗರಿಕ ಪ್ರಜ್ಞೆ ಇಲ್ಲ ಅನ್ನೋದಕ್ಕೆ ಈ ವಿಡಿಯೊ ಸಾಕ್ಷಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ..