ಕುಡಿದ ಮತ್ತಿನಲ್ಲಿ ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿ ಮಹಿಳೆಯ ಹೈಡ್ರಾಮಾ: ವಿಡಿಯೊ ನೋಡಿ!
Viral Video: ಇಲ್ಲೊಂದು ಮಹಿಳೆ ಮದ್ಯದ ಅಮಲಿನಲ್ಲಿ ರಸ್ತೆ ಮಧ್ಯೆ ಕಾರು ನಿಲ್ಲಿಸಿ ಸಾರ್ವಜನಿಕರಿಗೆ ನಿಂದನೆ ಮಾಡಿದ ಘಟನೆಯೊಂದು ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಮಹಿಳೆಯೂ ಜನನಿಬಿಡ ರಸ್ತೆಯ ಮಧ್ಯದಲ್ಲಿ ತನ್ನ ಕಾರನ್ನು ನಿಲ್ಲಿಸಿ, ಪಕ್ಕದಲ್ಲಿದ್ದವರು ಪದೇ ಪದೇ ವಿನಂತಿಸಿದರೂ ಅದನ್ನು ಸ್ಥಳಾಂತರಿಸಲು ನಿರಾಕರಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ...
ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿ ಮಹಿಳೆಯ ಹೈಡ್ರಾಮಾ -
ಹಿಸಾರ್,ಎ.15: ಮದ್ಯದ ಅಮಲಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಬೇಕಾಬಿಟ್ಟಿಯಾಗಿ ವರ್ತನೆ ತೋರುವ ಅನೇಕ ದೃಶ್ಯಗಳು ವೈರಲ್ (Viral News) ಆಗಿವೆ. ಅದರಲ್ಲೂ ಇಂತಹ ಪ್ರಕರಣದಲ್ಲಿ ಪುರುಷರೇ ಸಿಕ್ಕಿ ಬಿದ್ದವರು ಇದ್ದಾರೆ. ಆದರೆ ಇಲ್ಲೊಂದು ಮಹಿಳೆ ಮದ್ಯದ ಅಮಲಿನಲ್ಲಿ ರಸ್ತೆ ಮಧ್ಯೆ ಕಾರು ನಿಲ್ಲಿಸಿ ಸಾರ್ವಜನಿಕರಿಗೆ ನಿಂದನೆ ಮಾಡಿದ ಘಟನೆಯೊಂದು ನಡೆದಿದೆ. ಮದ್ಯದ ಅಮಲಿ ನಲ್ಲಿದ್ದ ಮಹಿಳೆಯೂ ಜನನಿಬಿಡ ರಸ್ತೆಯ ಮಧ್ಯದಲ್ಲಿ ತನ್ನ ಕಾರನ್ನು ನಿಲ್ಲಿಸಿ, ಪಕ್ಕದಲ್ಲಿದ್ದವರು ಪದೇ ಪದೇ ವಿನಂತಿಸಿದರೂ ಅದನ್ನು ಸ್ಥಳಾಂತರಿಸಲು ನಿರಾಕರಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಹರಿಯಾಣದ ಹಿಸಾರ್‌ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಮಹಿಳೆ ಸ್ಥಳದಲ್ಲಿದ್ದ ಜನರೊಂದಿಗೆ ಆಕ್ರಮಣಕಾರಿಯಾಗಿ ವಾಗ್ವಾದ ನಡೆಸುತ್ತಿರುವುದು ಮತ್ತು ಟ್ರಾಫಿಕ್ ಜಾಮ್ ಅನ್ನು ತೆರವು ಗೊಳಿಸಲು ಪ್ರಯತ್ನಿಸಿದವರನ್ನು ನಿಂದನೆ ಮಾಡುತ್ತಿರುವುದು ಕಂಡು ಬಂದಿದೆ. ಅನೇಕರು ಮಹಿಳೆಯ ನಡವಳಿಕೆ ಬಗ್ಗೆ ಕಿಡಿಕಾರಿದ್ದಾರೆ.
ವಿಡಿಯೋ ನೋಡಿ:
क्या महिलाओं की फिजियोलॉजी वाकई शराब को सपोर्ट नहीं करती, या मन में सदियों से बैठी हुई कुंठा है जो पुरुष-सत्तात्मक समाज में स्वतंत्रता पाने के बाद स्वच्छंद हो जाती है?
— 𝙼𝚛 𝚃𝚢𝚊𝚐𝚒 (@mktyaggi) April 13, 2026
शराब पीकर महिला ने पहले तो सड़क पर दूसरी गाड़ियों को ब्लॉक किया और उसके बाद मज़ेदार हंगामा काटा.. 🤪🤔 pic.twitter.com/Hn7tQpBPvE
ರಾತ್ರಿ 11 ಗಂಟೆಯ ಸಮಯಕ್ಕೆ ರಾಜಸ್ಥಾನದಿಂದ ಬಂದ ಮಹಿಳೆ ಸರಿಯಾಗಿ ಕುಡಿದ್ದರು. ಅಮಲಿನಲ್ಲಿ ರಸ್ತೆ ಮಧ್ಯೆಯೇ ಕಾರು ನಿಲ್ಲಿಸಿದ್ದಾರೆ. ಇದರಿಂದ ಅಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಭಾರಿ ಸಂಚಾರ ದಟ್ಟಣೆ ಉಂಟಾಯಿತು. ವಾಹನವನ್ನು ರಸ್ತೆ ಮಧ್ಯ ತೆರೆವು ಗೊಳಿಸಲು ಹೇಳಿದರೂ ಮಹಿಳೆ ಕ್ಯಾರೇ ಮಾಡದೇ ಅಹಂಕಾರದಿಂದ ಮಾತನಾಡಿದ್ದಾರೆ.
ವಿಡಿಯೊದಲ್ಲಿ ಮಹಿಳೆ ಪ್ರೇಕ್ಷಕರೊಂದಿಗೆ ವಾಗ್ವಾದ ನಡೆಸುತ್ತಿರು ವುದನ್ನು ಕಾಣಬಹುದು. ಮಹಿಳೆ ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಗಲಾಟೆಯ ಸಂದರ್ಭಗಳಲ್ಲಿ ಆಕೆ ತನ್ನ ಸಂಬಳ ಮತ್ತು ಉದ್ಯೋಗದ ಬಗ್ಗೆ ಅಹಂಕಾರ ಸ್ವಭಾವದಿಂದ ಮಾತನಾಡಿದ್ದಾರೆ.
Viral Video: ಅಸೆಂಬ್ಲಿಯಲ್ಲೇ ಬಿಟ್ಟಿ ಹಣಕ್ಕಾಗಿ ಮುಗಿಬಿದ್ದ ಪಾಕ್ ಸಂಸದರು; ವಿಡಿಯೋ ನೋಡಿ
ವೀಡಿಯೊದಲ್ಲಿ, ಪೊಲೀಸರು ತನ್ನ ಕಾರನ್ನು ವಶಪಡಿಸಿ ಕೊಂಡರೂ ಸಹ, ಅವಳು ಸುಲಭವಾಗಿ ಇನ್ನೊಂದು ಕಾರನ್ನು ಖರೀದಿಸಬಹುದು ಎಂದು ಆಹಂಕಾರದಿಂದ ಹೇಳುತ್ತಿರುವುದು ಕೇಳಿಬಂದಿದೆ. ಬಳಿಕ ಸಬ್-ಇನ್ಸ್‌ಪೆಕ್ಟರ್ ರಾಜೇಶ್ ಕುಮಾರ್ ಮತ್ತು ಮಹಿಳಾ ಕಾನ್‌ಸ್ಟೆಬಲ್, ಜನಸಂದಣಿ ಮತ್ತು ರಾಜಸ್ಥಾನ ನೋಂದಣಿ ಫಲಕಗಳನ್ನು ಹೊಂದಿರುವ ವಾಹನವನ್ನು ಗಮನಿಸಿ ಮಧ್ಯಪ್ರವೇಶಿಸಿದರು. ತಪಾಸಣೆಯ ವೇಳೆ ಆಕೆ ಮದ್ಯ ಸೇವಿಸಿರುವುದು ದೃಢಪಟ್ಟಿದೆ.
ಸ್ಥಳದಲ್ಲಿ ವಾಹನ ನೋಂದಣಿ ಮತ್ತು ವಿಮಾ ದಾಖಲೆಗಳನ್ನು ತೋರಿಸಲು ಅವರು ವಿಫಲರಾಗಿದ್ದಾರೆ. ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಗಿದ್ದು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು. ತನಿಖೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ಆಕೆ ಕ್ಷಮೆ ಯಾಚಿಸುವ ವೀಡಿಯೊಗಾಗಿ ಕಾತುರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ.