ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಹುಲಿಯನ್ನು ರಕ್ಷಿಸಿದ ಆನೆ! ಏನಿದು ವೈರಲ್‌ ವಿಡಿಯೋದ ಅಸಲಿಯತ್ತು?

Viral Video: ತೀವ್ರ ಪ್ರವಾಹದ ನಡುವೆ ಆನೆಯೊಂದು ಹುಲಿಯನ್ನು ರಕ್ಷಣೆ ಮಾಡಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಪ್ರವಾಹದಿಂದ ಕೊಚ್ಚಿ ಹೋಗುತ್ತಿದ್ದ ಹುಲಿಯನ್ನು ರಕ್ಷಿಸಲು ದೈತ್ಯ ಆಕಾರದ ಆನೆಯು ಪ್ರವಾಹದಲ್ಲಿಯೂ ನೀರಿಗೆ ಇಳಿಯುವುದನ್ನು ತೋರಿಸಲಾಗಿದೆ. ಆನೇಕರು ಈ ವಿಡಿಯೊ ನೋಡಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ...

ಇಂಡೋನೇಷ್ಯಾದ ಪ್ರವಾಹದಲ್ಲಿ ಹುಲಿಯನ್ನು ರಕ್ಷಿಸಿದ ಆನೆ! ವಿಡಿಯೊ ನೋಡಿ

ಇಂಡೋನೇಷ್ಯಾದ ಪ್ರವಾಹದಲ್ಲಿ ಹುಲಿಯನ್ನು ರಕ್ಷಿಸಿದ ಆನೆ -

Profile
Pushpa Kumari Jul 10, 2026 3:38 PM

ಇಂಡೋನೇಷ್ಯಾ,ಜು.10: ಆನೆ ಮತ್ತು ಹುಲಿ ಒಟ್ಟಿಗೆ ಇರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇದು ನಂಬಲು ಅಸಾಧ್ಯ. ಆದರೆ ಇದೀಗ ತೀವ್ರ ಪ್ರವಾಹದ ನಡುವೆ ಆನೆಯೊಂದು ಹುಲಿಯನ್ನು ರಕ್ಷಣೆ ಮಾಡಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ. ಪ್ರವಾಹದಿಂದ ಕೊಚ್ಚಿ ಹೋಗುತ್ತಿದ್ದ ಹುಲಿಯನ್ನು ರಕ್ಷಿಸಲು ದೈತ್ಯ ಆಕಾರದ ಆನೆಯು ಪ್ರವಾಹದಲ್ಲಿಯೂ ನೀರಿಗೆ ಇಳಿಯುವುದನ್ನು ತೋರಿಸಲಾಗಿದೆ. ಆನೇಕರು ಈ ವಿಡಿಯೊ ನೋಡಿ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

ಇಂಡೋನೇಷ್ಯಾದ ಪ್ರವಾಹದಲ್ಲಿ ಹುಲಿಯನ್ನು ಆನೆ ರಕ್ಷಣೆ ಮಾಡಿದೆ ಎನ್ನಲಾಗಿದೆ. ಸುಮಾತ್ರಾ ದಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ಸಮಯದಲ್ಲಿ ಅಪರೂಪದ ಮತ್ತು ಹೃದಯಸ್ಪರ್ಶಿ ಘಟನೆಯೊಂದನ್ನು ಸೆರೆಹಿಡಿಯಲಾಗಿದೆ. ಪ್ರವಾಹಕ್ಕೆ ಸಿಲುಕಿ ಅಪಾಯದಲ್ಲಿದ್ದ ಹುಲಿಯನ್ನು ಆನೆಯೊಂದು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಬರೆದು ಈ ವಿಡಿಯೊ ಹಂಚಿ ಕೊಳ್ಳಲಾಗಿದೆ. ಈ ಅಪರೂಪದ ಕ್ಷಣ ನೋಡಿ ನೆಟ್ಟಿಗರು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ವಿಡಿಯೋ ನೋಡಿ:



ಆದರೆ ಈ ವಿಡಿಯೋದಲ್ಲಿರುವ ಅಸಲಿ ಸತ್ಯ ಈಗ ಹೊರಬಿದ್ದಿದ್ದು ಇದನ್ನು AI ತಂತ್ರಜ್ಞಾನ ಬಳಸಿ ರಚಿಸಲಾಗಿದೆ ಎಂದು ತಿಳಿದು ಬಂದಿದೆ. ಈ ವೀಡಿಯೊ ಮೊದಲ ಬಾರಿಗೆ ನವೆಂಬರ್ 2025 ರಲ್ಲಿ ಭಾರೀ ವೈರಲ್ ಆಗಿದ್ದು ಇದೀಗ ಭಾರಿ ಮುಂಗಾರು ಮಳೆಯ ಸಂದರ್ಭವನ್ನು ಬಳಸಿಕೊಂಡು, ಇದೇ ಹಳೆಯ ವಿಡಿಯೋವನ್ನು ಮತ್ತೊಮ್ಮೆ ಸುಳ್ಳು ಸುದ್ದಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Viral Video: ಪೊಲೀಸ್ ಠಾಣೆಯಲ್ಲೇ ಕಾನ್ಸ್‌ಟೇಬಲ್‌ಗಳ ರೊಮ್ಯಾನ್ಸ್‌; ತನ್ನ ಪಾಡಿಗೆ ಕೂತಿದ್ದ ಪೇದೆಯನ್ನು ತಬ್ಬಿ ಮುತ್ತಿಕ್ಕಿದ ಲೇಡಿ ಪೊಲೀಸ್

ಇಂಡೋನೇಷ್ಯಾದಲ್ಲಿ ಪ್ರವಾಹದ ನೀರಿನಿಂದ ಸುಮಾತ್ರನ್ ಆನೆಯು ಹುಲಿಯನ್ನು ರಕ್ಷಿಸಿದೆ ಎಂಬುದಕ್ಕೆ ಯಾವುದೇ ಸಾಕ್ಷಗಳಿಲ್ಲ. ಈ ಕ್ಲಿಪ್ ಅನ್ನು ಡಿಜಿಟಲ್ ರೂಪದಲ್ಲಿ ರಚಿಸಲಾಗಿದೆ ಎಂದು ಸ್ಪಷ್ಟನೆ ಸಿಕ್ಕಿದೆ.. ಆದರೆ ಈ ವಿಡಿಯೊ ಲಕ್ಷಾಂತರ ವೀವ್ಸ್ ಗಳಿಸಿದ್ದು ಈ ವಿಡಿಯೊ ನಿಜವೆಂದು ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಬಳಕೆದಾರರೊಬ್ಬರು ವನ್ಯ ಜೀವಿಗಳಿಗೆ ಸಂಬಂಧಿಸಿದ ಇಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೊದಲು ನೈಜತೆಯನ್ನು ಪರಿಶೀಲನೆ ಮಾಡಬೇಕು ಎಂದರು. ಮತ್ತೊಬ್ಬರು ಇದನ್ನು ಫೇಕ್ ವಿಡಿಯೊ ಎಂದು ನಂಬಲು ಅಸಾಧ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ.