ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ಯೋಧ ಯಾವತ್ತಿದ್ದರೂ ಯೋಧನೇ; ಚಾರ್ಜ್‌ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್‌ ಕಾರ್‌ ತಳ್ಳಿದ ಸೈನಿಕ

Indian soldier helps a woman: ನರೇಂದ್ರ ಎನ್ನುವ ಯೋಧರೊಬ್ಬರು ತಮ್ಮ ಕಾರನ್ನು ಚಾರ್ಜಿಂಗ್ ಸ್ಟೇಷನ್‌ ತನಕ ತಳ್ಳಿದ್ದಲ್ಲದೆ, ಸುರಕ್ಷಿತವಾಗಿ ಪ್ರಯಾಣವನ್ನು ಮುಂದುವರಿಸಬಹುದೆಂದು ಖಚಿತವಾಗುವವರೆಗೂ ಅಲ್ಲಿಯೇ ಇದ್ದರು ಎಂದು ಕಂಟೆಂಟ್ ಕ್ರಿಯೇಟರ್ ದೀಪಿಕಾ ಶರ್ಮಾ ವಿವರಿಸಿದ್ದಾರೆ. ಸದ್ಯ ಭಾರತೀಯ ಸೈನಿಕರ ಈ ಅಂತಃಕರಣ ನೆಟ್ಟಿಗರ ಮನ ಗೆದ್ದಿದೆ.

ಮಹಿಳೆಗೆ ಭಾರತೀಯ ಯೋಧ ಸಹಾಯ ಮಾಡಿದ್ದು ಹೇಗೆ ಗೊತ್ತಾ?

ಕಂಟೆಂಟ್‌ ಕ್ರಿಯೇಟರ್‌ ದೀಪಿಕಾ ಶರ್ಮಾ -

Priyanka P
Priyanka P Jul 18, 2026 9:56 PM

ನವದೆಹಲಿ, ಜು. 18: ರಸ್ತೆಬದಿಯಲ್ಲಿ ಕಾರ್‌ನ (EV) ಚಾರ್ಜ್‌ ಖಾಲಿಯಾದ ಮಹಿಳೆಯೊಬ್ಬರ ಸಹಾಯಕ್ಕೆ ಧಾವಿಸಿದ ಭಾರತೀಯ ಯೋಧರೊಬ್ಬರ (Indian Army Soldier) ಮಾನವೀಯ ಕಾರ್ಯವು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ. ಕಟಂಟ್‌ ಕ್ರಿಯೇಟರ್‌ ದೀಪಿಕಾ ಶರ್ಮಾ ತಾವು ನಡು ರಸ್ತೆಯಲ್ಲಿ ತಾವು ಸಂಕಷ್ಟು ಎದುರಿಸುತ್ತಿರುವುದನ್ನು ಗಮನಿಸಿ ಯೋಧ ನರೇಂದ್ರ ಹೇಗೆ ತಮ್ಮ ನೆರವಿಗೆ ಧಾವಿಸಿದರು ಎನ್ನುವುದನ್ನು ವಿಡಿಯೊ ಮಾಡಿ ವಿವರಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ಯೋಧ ಯಾವತ್ತಿದ್ದರೂ ಯೋಧನೆ. ಆತ ಗಡಿಯಲ್ಲೇ ಇರಬೇಕೆಂದಿಲ್ಲ. ಮಾನವೀಯತೆ ಆತನಲ್ಲಿ ಸದಾ ಜಾಗೃತವಾಗಿರುತ್ತದೆ ಎಂದು ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ದೀಪಿಕಾ ಶರ್ಮಾ ತಮ್ಮ ಜೀವನದಲ್ಲಾದ ಈ ವಿಶೇಷ ಘಟನೆಯ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಯೋಧ ನರೇಂದ್ರ ಯೋಧ ತಮ್ಮ ಕಾರನ್ನು ಚಾರ್ಜಿಂಗ್ ಸ್ಟೇಷನ್‌ಗೆ ತಳ್ಳಿದ್ದಲ್ಲದೆ, ಸುರಕ್ಷಿತವಾಗಿ ಪ್ರಯಾಣವನ್ನು ಮುಂದುವರಿಸಬಹುದೆಂದು ಖಚಿತವಾಗುವವರೆಗೂ ಅಲ್ಲಿಯೇ ಇದ್ದರು ಎಂದು ವಿವರಿಸಿದ್ದಾರೆ.

ಇವಿ ಕಾರನ್ನು ಸುಮಾರು ಶೇ. 60ರಷ್ಟು ಚಾರ್ಜ್ ಮಾಡಿಯೇ ದಿನವನ್ನು ಪ್ರಾರಂಭಿಸಿದ್ದಾಗಿ ದೀಪಿಕಾ ಶರ್ಮಾ ಹೇಳಿದ್ದಾರೆ. ಆದರೆ, ಅನಿರೀಕ್ಷಿತ ಪ್ರಯಾನ ಎದುರಾಗಿದ್ದರಿಂದ ಚಾರ್ಜ್‌ ಬೇಗನೆ ಖಾಲಿಯಾಯಿತು ಎಂದಿದ್ದಾರೆ. “ಬೆಳಗ್ಗೆ ನಾನು ಶೇ. 60ರಷ್ಟು ಚಾರ್ಜ್‌ನೊಂದಿಗೆ ಮನೆಯಿಂದ ಹೊರಟೆ. ಹಿಂತಿರುಗುವಾಗ ನಾನು ತಪ್ಪು ಲೆಕ್ಕಾಚಾರ ಮಾಡಿದೆ. ನಾನು ಕಾರಿನ ಎಸಿ ಆಫ್ ಮಾಡಿದರೂ ಚಾರ್ಜ್‌ ಖಾಲಿಯಾಯಿತು” ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ಯಾರೂ ಸಹಾಯ ಮಾಡದಿದ್ದಾಗ ರೈಲ್ವೆ ನಿಲ್ದಾಣದಲ್ಲಿ ಯುವತಿಗೆ ನೆರವಾದ ಯೋಧ

ಚಾರ್ಜ್ ಮಟ್ಟವು ಶೇಕಡಾ 10ಕ್ಕೆ ಇಳಿದಾಗ ದೀಪಿಕಾ ಹತ್ತಿರದ ಚಾರ್ಜಿಂಗ್ ಸ್ಟೇಷನ್ ಹುಡುಕಲು ಪ್ರಾರಂಭಿಸಿದರು. ಆಕೆಯ ಪ್ರಯತ್ನಗಳ ಹೊರತಾಗಿಯೂ, ಬ್ಯಾಟರಿ ಕೇವಲ ಶೇಕಡಾ 2ಕ್ಕೆ ಇಳಿದು ಅಂತಿಮವಾಗಿ ಶೂನ್ಯವನ್ನು ತಲುಪಿದಾಗ ಕಾರ್‌ ಸಂಪೂರ್ಣವಾಗಿ ನಿಶ್ಚಲವಾಯಿತು.

ಮುಂದೆ ಏನು ಮಾಡಬೇಕೆಂದು ತಿಳಿಯದೆ ದೀಪಿಕಾ ಹತ್ತಿರದ ಇವಿ ಚಾರ್ಜಿಂಗ್ ಸ್ಟೇಷನ್‌ ಎಲ್ಲಿದೆ ಎಂದು ಅಲ್ಲೇ ಇದ್ದ ಯೋಧ ನರೇಂದ್ರ ಅವರನ್ನು ಕೇಳಿದರು. “ಮಾರ್ಗದರ್ಶನ ನೀಡುವ ಬದಲು, ನರೇಂದ್ರ ತಕ್ಷಣವೇ ಸಹಾಯ ಮಾಡಲು ಮುಂದಾದರು. ಅವರು ಕಾರನ್ನು ತಳ್ಳಿದರು. ಇವಿ ನಿಲ್ದಾಣದವರೆಗೆ ಕಾರನ್ನು ತಳ್ಳಿಕೊಂಡೇ ಬಂದರುʼʼ ಎಂದು ದೀಪಿಕಾ ತಿಳಿಸಿದ್ದಾರೆ. ಸುಡುವ ಬಿಸಿಲಿದ್ದರೂ ಯೋಧ ಸ್ವಇಚ್ಛೆಯಿಂದ ಸಹಾಯ ಮಾಡಿದ್ದಾರೆ ಎಂದು ವಿವರಿಸಿದ್ದಾರೆ.

“ಇಂದಿನ ಜಗತ್ತಿನಲ್ಲಿ, ಯಾರೂ ಸಹಾಯ ಮಾಡಲು ಬರುವುದಿಲ್ಲ. ಆದರೆ, ಇವರನ್ನು ನೋಡಿ. ಚಾರ್ಜ್‌ ಖಾಲಿ. ಇದು ಸ್ಪಷ್ಟವಾಗಿ ನನ್ನ ತಪ್ಪು. ಸಹಾಯ ಮಾಡಲು ಇವರಂತಹ ಜನರಿದ್ದರೆ ಏನೂ ಸಮಸ್ಯೆಯಾಗುವುದಿಲ್ಲ. ಆದ್ದರಿಂದ, ಭಾರತೀಯ ಸೇನೆಗೆ ಸೆಲ್ಯೂಟ್. ನಿಜವಾಗಿಯೂ, ನಿಮಗೆ ಸೆಲ್ಯೂಟ್. ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದಾರೆ.

ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ತ್ವರಿತವಾಗಿ ಗಮನ ಸೆಳೆಯಿತು. ಸೇನಾ ಸಿಬ್ಬಂದಿಯ ನಿಸ್ವಾರ್ಥ ಕಾರ್ಯವನ್ನು ನೆಟ್ಟಿಗರು ಶ್ಲಾಘಿಸಿದರು.