ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಬಂದಿದೆ": ಕಾರ್ಪೊರೇಟ್ ಕಂಪನಿ ನಿಯಮಗಳ ಬಗ್ಗೆ ಜೆನ್ ಝೀ ಉದ್ಯೋಗಿ ಬೇಸರ!

Viral News: ಕಾರ್ಪೊರೇಟ್ ಕಂಪನಿಗೆ ಉದ್ಯೋಗಿಯಾಗಿರುವ ಜೆನ್ ಝೀ ಯುವತಿಯೊಬ್ಬರು ಕಚೇರಿಯ ಕಠಿಣ ನಿಯಮಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಿಂಗಳಿಗೆ ಕೇವಲ 3 ವೇತನ ಸಹಿತ ರಜೆಗಳು, 10 ನಿಮಿಷಕ್ಕಿಂತ ಹೆಚ್ಚು ತಡವಾಗಿ ಬಂದರೆ ಕಠಿಣ ಕ್ರಮ ಕೈಗೊಳ್ಳುವ ನಿಯಮ ಹಾಗೂ 9 ಗಂಟೆಗಳ ಕೆಲಸದ ಅವಧಿಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಪೊರೇಟ್ ಕಂಪನಿ ಕಠಿಣ ನಿಯಮದ ಬಗ್ಗೆ ಜೆನ್ ಝೀ ಯುವತಿ ದೂರು

ಸಾಂದರ್ಭಿಕ ಚಿತ್ರ -

Profile
Pushpa Kumari Oct 18, 2026 6:56 PM

ನವದೆಹಲಿ, ಅ. 18: ಕಾರ್ಪೊರೇಟ್ ಉದ್ಯಮದಲ್ಲಿ ಒತ್ತಡಗಳ ಬಗ್ಗೆ ದೂರುಗಳು ಕೇಳಿ ಬರುತ್ತಲೇ ಇದೆ. ವೈಯಕ್ತಿಕ ಕೆಲಸಕ್ಕೂ ಸಮಯ ಸಿಗದೆ ಉದ್ಯೋಗ ತ್ಯಜಿಸಿದವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕಾರ್ಪೊರೇಟ್ ಕಂಪನಿಗೆ ಸೇರಿರುವ ಜೆನ್ ಝೀ ಯುವತಿಯೊಬ್ಬರು ಕಚೇರಿಯ ಕಠಿಣ ನಿಯಮಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಿಂಗಳಿಗೆ ಕೇವಲ 3 ವೇತನ ಸಹಿತ ರಜೆಗಳು, 10 ನಿಮಿಷಕ್ಕಿಂತ ಹೆಚ್ಚು ತಡವಾಗಿ ಬಂದರೆ ಕಠಿಣ ಕ್ರಮ ಕೈಗೊಳ್ಳುವ ನಿಯಮ ಹಾಗೂ 9 ಗಂಟೆಗಳ ಕೆಲಸದ ಅವಧಿಯ ಬಗ್ಗೆಯೂ ಅಸಮಾಧಾನ (Viral News) ವ್ಯಕ್ತಪಡಿಸಿದರು.

ಯುವತಿಯ ಕಸಿನ್ ಈ ಬಗ್ಗೆ ಆನ್‌ಲೈನ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಸೋದರ ಸಂಬಂಧಿ ಹೊಸ ಕೆಲಸದ ಸ್ಥಳದಲ್ಲಿರುವ ನಿಯಮಗಳ ಬಗ್ಗೆ ಮಾತನಾಡಲು ಕರೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ. ನಿರ್ದಿಷ್ಟ ಊಟದ ಸಮಯ ಸಿಗುವ ಬಗ್ಗೆ ಆಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇಲ್ಲಿ ಊಟಕ್ಕೆಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗಿದೆ. ನಾವು ಆ ಸಮಯದಲ್ಲಿ ಮಾತ್ರ ಊಟ ಮಾಡಬೇಕು. ಒಂದು ವೇಳೆ ನನಗೆ ಅದಕ್ಕೂ ಮುಂಚೆಯೇ ಹಸಿವಾದರೆ ಏನು ಮಾಡುವುದು?ʼʼ ಎಂದು ಅವರು ಪ್ರಶ್ನಿಸಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ:



ಅದರಲ್ಲೂ ತಿಂಗಳಿಗೆ ಕೇವಲ 3 ರಜೆಗಳು ಮಾತ್ರ ಇವೆ. ಕಚೇರಿಗೆ 10 ನಿಮಿಷಕ್ಕಿಂತ ಹೆಚ್ಚು ತಡವಾಗಿ ಬರುವಂತಿಲ್ಲ ಎಂಬ ನಿಯಮ ಕೂಡ ಇಲ್ಲಿದೆ. ಪ್ರತಿದಿನ 9 ಗಂಟೆಗಳ ಕಾಲ ಬಿಡುವು ಇಲ್ಲದೆ ಕೆಲಸ ಮಾಡಬೇಕಾಗಿರುವುದು ಬಹಳಷ್ಟು ಆಘಾತ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಇಲ್ಲಿನ ಮ್ಯಾನೇಜರ್ ಕೂಡ ಬಹಳಷ್ಟು ಗದರಿಸುತ್ತಾರೆ.‌ ಯಾವುದಾದರೂ ಸಂದೇಹವಿದ್ದರೆ ಸಹಾಯ ಕೇಳಿ. ಆದರೆ ಇದು ಪ್ರಮುಖ ಪ್ರಾಜೆಕ್ಟ್ ಆಗಿರುವುದರಿಂದ ಯಾವುದೇ ತಪ್ಪು ಮಾಡಬೇಡಿ ಎಂದು ಮ್ಯಾನೇಜರ್ ಕಠಿಣವಾಗಿ ಹೇಳಿದ್ದು ಯುವತಿಗೆ ತೀವ್ರ ಮಾನಸಿಕ ಒತ್ತಡವನ್ನುಂಟು ಮಾಡಿದೆ.

ಗದ್ದೆಯಲ್ಲಿದ್ದ ಆನೆಗೆ ಟಾರ್ಚ್ ತೋರಿಸಿ ಕೆರಳಿಸಿದ ಜನ; ನುಗ್ಗಿ ದಾಳಿ ಮಾಡಿದ ಒಂಟಿ ಸಲಗ

​ಈ ಎಲ್ಲ ಒತ್ತಡಗಳನ್ನು ತಾಳಲಾರದೆ ಯುವತಿ, "ನನ್ನ ಮಾನಸಿಕ ಆರೋಗ್ಯ ಸಂಪೂರ್ಣ ಹಾಳಾಗಿದೆ. ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಬಂದಿದೆ. ನಾನು ಈ ಕೆಲಸಕ್ಕೆ ಸೇರಿದ್ದೇ ತಪ್ಪು" ಎಂದು ತನ್ನ ಕಸಿನ್ ಬಳಿ ಅಳಲು ತೋಡಿಕೊಂಡಿದ್ದಾರೆ. ಸದ್ಯ ಪೋಸ್ಟ್ ವಿಭಿನ್ನ ಪ್ರತಿಕ್ರಿಯೆಗಳನ್ನು ಪಡೆದಿದೆ, ಕೆಲವು ಬಳಕೆದಾರರು ಯುವತಿಯ ಅನುಭವದ ಬಗ್ಗೆ ತಮಾಷೆ ಮಾಡುತ್ತಿದ್ದರೆ, ಇನ್ನು ಕೆಲವರು ಕಂಪನಿಯಲ್ಲಿ ನಡೆಸಿಕೊಳ್ಳುವ ರೀತಿಗೆ ಬೇಸರ ವ್ಯಕ್ತ ಪಡಿಸಿದ್ದಾರೆ.