ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಾಲಿಯಲ್ಲಿ ಇಂಧನ ಕೊರತೆಯಿಂದ ಸಂಚಾರ ದಟ್ಟಣೆ: ಅವ್ಯವಸ್ಥೆ ಬಿಚ್ಚಿಟ್ಟ ಭಾರತೀಯ ಉದ್ಯಮಿ

Viral Video: ಇತ್ತೀಚೆಗೆ ಬಾಲಿಯಿಂದ ಹಿಂದಿರುಗಿದ ಭಾರತೀಯ ಉದ್ಯಮಿ ಸುಶೀಲ್ ಜೈನ್ ಇಂಧನ ಬಿಕ್ಕಟ್ಟಿನಿಂದ ಎದುರಿಸಿದ ಸಂಕಷ್ಟವನ್ನು ವಿವರಿಸಿದ್ದಾರೆ. ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳು ಕಿಲೋ ಮೀಟರ್‌ಗಟ್ಟಲೆ ಸಾಲಿನಲ್ಲಿ ನಿಂತಿದ್ದು ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಮುಂದಿನ ದಿನಗಳಲ್ಲಿ ಈ ಜನಪ್ರಿಯ ಪ್ರವಾಸಿ ತಾಣಕ್ಕೆ ಭೇಟಿ ನೀಡಲು ಪ್ಲ್ಯಾನ್‌ ಮಾಡುವ ಪ್ರವಾಸಿಗರು ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದ್ದಾರೆ.

ಬಾಲಿಯಲ್ಲಿ ತೈಲ ವಿತರಣಾ ಸಮಸ್ಯೆ: ನರಕದ ಅನುಭವ ಎಂದ ಭಾರತೀಯ ಉದ್ಯಮಿ

ಬಾಲಿಯಲ್ಲಿ ಇಂಧನ ಕೊರತೆಯಿಂದ ಬಗ್ಗೆ ಮಾಹಿತಿ ನೀಡಿದ ಭಾರತೀಯ ಉದ್ಯಮಿ ಸುಶೀಲ್ ಜೈನ್ ಮತ್ತು ಟ್ರಾಫಿಕ್‌ ಜಾಮ್‌ -

Profile
Pushpa Kumari Oct 18, 2026 6:38 PM

ಬಾಲಿ, ಅ. 18: ಇತ್ತೀಚೆಗೆ ಇಂಡೋನೇಷ್ಯಾದ ಬಾಲಿಯಿಂದ ಹಿಂದಿರುಗಿದ ಭಾರತೀಯ ಉದ್ಯಮಿ ಸುಶೀಲ್ ಜೈನ್ ಇಂಧನ ಬಿಕ್ಕಟ್ಟಿನಿಂದ ಎದುರಾದ ಸಂಕಷ್ಟವನ್ನು ವಿವರಿಸಿದ್ದಾರೆ. ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳು ಕಿಲೋ ಮೀಟರ್‌ಗಟ್ಟಲೆ ಸಾಲಿನಲ್ಲಿ ನಿಂತಿದ್ದು ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಮುಂದಿನ ದಿನಗಳಲ್ಲಿ ಈ ಜನಪ್ರಿಯ ಪ್ರವಾಸಿ ತಾಣಕ್ಕೆ ಭೇಟಿ ನೀಡಲು ಪ್ಲ್ಯಾನ್‌ ಮಾಡುವ ಪ್ರವಾಸಿಗರು ಎಚ್ಚರಿಕೆಯಿಂದಿರಬೇಕು ಎಂದು ಅವರು ಸಲಹೆ (Viral News) ನೀಡಿದ್ದಾರೆ.

ಇಂಧನ ಕೊರತೆಯಿಂದಾಗಿ ವಾಹನಗಳು ಪೆಟ್ರೋಲ್ ಬಂಕ್ ಮುಂದೆ ಕಿಲೋ ಮೀಟರ್ ದೂರ ನಿಂತಿದ್ದು ದೀರ್ಘ ಸಾಲುಗಳು ಕಂಡು ಬಂದಿತ್ತು. ಇದರಿಂದಾಗಿ ತೀವ್ರ ಸಂಚಾರ ದಟ್ಟಣೆ ಉಂಟಾಯಿತು ಎಂದು ಅಲ್ಲಿನ ಸಂದರ್ಭದ ಬಗ್ಗೆ ವಿವರಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಪೆಟ್ರೋಲ್ ಬಂಕ್‌ಗಳ ಹೊರಗೆ ಕಾರ್‌ಗಳು ಮತ್ತು ಬೈಕ್‌ಗಳು  ಸಾಲುಗಟ್ಟಿ ನಿಂತಿರುವುದನ್ನು ಜೈನ್ ತೋರಿಸಿದ್ದಾರೆ. "ನಾನು ಬಾಲಿಯಿಂದ ಭಾರತಕ್ಕೆ ಹಿಂತಿರುಗುತ್ತಿದ್ದೇನೆ. ಈ ವೇಳೆ ವಿಮಾನವನ್ನು ತಪ್ಪಿಸಿಕೊಳ್ಳುವ ಸ್ಥಿತಿಗೆ ಬಂದಿದ್ದೆ. ನೀವು ಬಾಲಿಯಲ್ಲಿದ್ದರೆ ಅಥವಾ ಅಲ್ಲಿಗೆ ಪ್ರಯಾಣಿಸುತ್ತಿದ್ದರೆ, ಪ್ರಸ್ತುತ ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಿʼʼ ಎಂದಿದ್ದಾರೆ.

ಈ ಇಂಧನ ಬಿಕ್ಕಟ್ಟು ಸ್ಥಳೀಯರು ಮತ್ತು ಪ್ರವಾಸಿಗರಿಬ್ಬರ ಮೇಲೂ ಪರಿಣಾಮ ಬೀರಿದೆ. ಜನರು ಇಂಧನ ತುಂಬಿಸಿಕೊಳ್ಳಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಡೋನೇಷ್ಯಾದ ಅಧಿಕಾರಿಗಳ ಪ್ರಕಾರ, ಈ ಕೊರತೆಗೆ ಇಂಧನದ ಪೂರೈಕೆಯ ಸ್ಥಗಿತ ಅಥವಾ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಅಡಚಣೆಗಳಲ್ಲ. ಬದಲಾಗಿ ಇಂಧನ ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಗಳೇ ಕಾರಣ.

ಅಪರಿಚಿತರ ಮೇಲೆಯೂ ಭಾರತೀಯರ ನಂಬಿಕೆ ಕಂಡು ಭಾವುಕನಾದೆ ಎಂದ ಅಮೆರಿಕದ ಲೇಖಕ

ಇಂಡೋನೇಷ್ಯಾದ ಇಂಧನ ಮತ್ತು ಖನಿಜ ಸಂಪನ್ಮೂಲ ಸಚಿವಾಲಯದ ತೈಲ ಮತ್ತು ಅನಿಲ ವಿಭಾಗದ ಮಹಾನಿರ್ದೇಶಕ ಲಾವೋಡೆ ಸುಲೈಮಾನ್ ಮಾತನಾಡಿ, ಇಂಧನ ಟ್ಯಾಂಕರ್ ಒಂದರ ಆಗಮನದಲ್ಲಿ ಉಂಟಾದ ವಿಳಂಬದಿಂದಾಗಿ ದ್ವೀಪಕ್ಕೆ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಬಾಲಿಗೆ ಇಂಧನ ಸಾಗಿಸುತ್ತಿದ್ದ ತೈಲ ಟ್ಯಾಂಕರ್‌ಗೆ ಸಮಸ್ಯೆ ಆದ ಕಾರಣ ಪೂರೈಕೆ ವಿಳಂಬವಾಗಿದೆ ಎಂದಿದ್ದಾರೆ.