Viral Video: ‘ಉಯಿ ಅಮ್ಮ’ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ ಯುವತಿ; ವಿಡಿಯೊ ವೈರಲ್
ಕಾಲೇಜು ವಿದಾಯ ಕಾರ್ಯಕ್ರಮವೊಂದರಲ್ಲಿ ಯುವತಿಯೊಬ್ಬಳು ‘ಉಯಿ ಅಮ್ಮ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಇದನ್ನು ಕಂಡ ನೆಟ್ಟಿಗರು ಆಕೆಯ ಡ್ಯಾನ್ಸ್ ಜೊತೆಗೆ ಕ್ಯಾಮೆರಾಮೆನ್ ಅನ್ನು ಸಹ ಹೊಗಳಿದ್ದಾರೆ.


ಇತ್ತೀಚೆಗಷ್ಟೇ ಯುವಕನೊಬ್ಬ ಮೈಕಲ್ ಜಾಕ್ಸನ್‌ನಂತೆ ಮೂನ್‌ವಾಕ್ ಮಾಡಿದ ಡ್ಯಾನ್ಸ್ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಕಾಲೇಜು ವಿದಾಯ ಕಾರ್ಯಕ್ರಮವೊಂದರಲ್ಲಿ ಯುವತಿಯೊಬ್ಬಳು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾಳೆ. ಅವಳ ಡ್ಯಾನ್ಸ್ ಪ್ರದರ್ಶನ ವ್ಯಾಪಕ ಮೆಚ್ಚುಗೆಯನ್ನು ಗಳಿಸಿವೆ. ನೆಟ್ಟಿಗರು ಆಕೆಯ ಡ್ಯಾನ್ಸ್ ಜೊತೆಗೆ ಕ್ಯಾಮೆರಾಮೆನ್ ಅನ್ನು ಸಹ ಹೊಗಳಿದ್ದಾರೆ.ಅವಳ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಆಕೆ ತರಗತಿಯಲ್ಲಿ ‘ಉಯಿ ಅಮ್ಮ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾಳೆ. ಇದರಲ್ಲಿ ಕ್ಯಾಮೆರಾವನ್ನು ಕ್ರಿಯಾತ್ಮಕವಾಗಿ ಬಳಸಿಕೊಂಡಿದ್ದು ಹೆಚ್ಚು ಪ್ರಶಂಸೆಗೆ ಗುರಿಯಾಗಿದೆ. ಕ್ರಿಯಾತ್ಮಕ ಛಾಯಾಗ್ರಹಣದಿಂದಾಗಿ ಆಕೆಯ ಪ್ರದರ್ಶನ ಹೆಚ್ಚು ಆಕರ್ಷಕವಾಗಿ ಕಂಡಿದೆ ಎನ್ನಲಾಗಿದೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು 38 ದಶಲಕ್ಷಕ್ಕೂ ವ್ಯೂವ್ಸ್ ಗಳಿಸಿದೆಯಂತೆ. ಈ ವಿಡಿಯೊದಲ್ಲಿ ಕವಿತಾ ಎನ್ನುವ ಯುವತಿ ಇತ್ತೀಚೆಗೆ ಬಿಡುಗಡೆಯಾದ ಆಜಾದ್ ಚಿತ್ರದ ಉಯಿ ಅಮ್ಮ ಹಾಡಿಗೆ ನೃತ್ಯ ಮಾಡಿದ್ದಾಳೆ. ಖ್ಯಾತ ನಟಿ ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ ಮೂಲತಃ ಈ ಹಾಡನ್ನು ಹಾಡಿದ್ದಾಳೆ. ಈ ಹಾಡು ಪ್ರಸ್ತುತ ಸೋಶಿಯಲ್ ಮಿಡಿಯಾಗಳಲ್ಲಿ ಟ್ರೆಂಡಿಂಗ್ ಆಗಿದೆ.
ತನ್ನ ಇನ್‌ಸ್ಟಾಗ್ರಾಂ ಚಾನೆಲ್‍ನಲ್ಲಿ 100,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕವಿತಾ, ಆಗಾಗ ತನ್ನ ನೃತ್ಯ ವೀಡಿಯೊಗಳನ್ನು ಹಂಚಿಕೊಳ್ಳುತ್ತಾಳೆ. ಈ ವಿಡಿಯೊಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವು ವೀಕ್ಷಕರು "ಕ್ಯಾಮೆರಾಮನ್ ರಾಕ್ಸ್" ಮತ್ತು "ಕ್ರೆಡಿಟ್ ಗೋಸ್ ಟು ಕ್ಯಾಮೆರಾಮನ್" ಎಂಬಂತಹ ಕಾಮೆಂಟ್‍ಗಳನ್ನು ಮಾಡಿದರೆ, ಕೆಲವರು ಕವಿತಾ ಡ್ಯಾನ್ಸ್ ಅನ್ನು ಹೊಗಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಐಫೋನ್ ಬಳಸುವವರೇ... ಎಚ್ಚರ! ನಿಮಗೂ ಹೀಗಾಗ್ಬೋದು; ಈ ವಿಡಿಯೊ ನೋಡಿ
ಇತ್ತೀಚೆಗಷ್ಟೇ ಅಮಿಟಿ ಯೂನಿವರ್ಸಿಟಿ ಜಾರ್ಖಂಡ್‍ನ ಅಮಿಫೋರಿಯಾ 2025 ಕಾರ್ಯಕ್ರಮದ ಸಮಯದಲ್ಲಿ, ಡ್ಯಾನ್ಸರ್ ಒಬ್ಬ ಮೈಕಲ್ ಜಾಕ್ಸನ್‌ನ ಫೇಮಸ್ ಡ್ಯಾನ್ಸ್ ಸ್ಟೆಪ್ ಆದ ಮೂನ್‌ವಾಕ್ ಅನ್ನು ಮರುಸೃಷ್ಟಿಸಲು ಪ್ರಯತ್ನಿಸಿದ್ದನು. ಅದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಇದು ನೆಟ್ಟಿಗರಿಗೆ ಇಷ್ಟವಾಗದ ಕಾರಣ ಅವನನ್ನು ಟ್ರೋಲ್ ಮಾಡಿದ್ದಾರೆ.
ರಾಂಚಿ ಮೂಲದ ಯುವಕ ಶಶಾಂಕ್ ಸಿಂಗ್, ಜಾರ್ಖಂಡ್‍ನಲ್ಲಿ ನಡೆದ ಕಾಲೇಜು ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಮೈಕಲ್ ಜಾಕ್ಸನ್ 'ಡೇಂಜರಸ್' ಹಾಡಿಗೆ ಡ್ಯಾನ್ಸ್ ಪ್ರದರ್ಶನ ನೀಡಿದ್ದನು. ಹಾಗೇ ಮೈಕಲ್ ಜಾಕ್ಸನ್‌ನ ಮೂನ್‌ವಾಕ್ ಮತ್ತು ಸಿಗ್ನೇಚರ್ ಹೆಡ್ ಬೌ ಮಾಡಲು ಪ್ರಯತ್ನಿಸಿದ್ದನು. ಸಿಂಗ್ ತನ್ನ ಪ್ರದರ್ಶನದ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದು ಕೂಡಲೇ ವೈರಲ್ ಆಗಿದೆ. ಆದರೆ ಇದು ನೆಟ್ಟಿಗರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಟ್ರೋಲ್ ಮಾಡಿದ್ದಾರೆ.