ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೆಂಗಳೂರು ಟ್ರಾಫಿಕ್‌ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಯುನಿಸೈಕಲ್ ಮೊರೆ ಹೋದ ಯುವಕ; ವಿಡಿಯೊ ವೈರಲ್‌

Viral Video: ಆಟೋ ಮತ್ತು ಕಾರ್‌ಗಳಿಂದ ಕೂಡಿದ ಜನನಿಬಿಡ ಪ್ರದೇಶದಲ್ಲಿ ಒಂದು ಅಸಾಮಾನ್ಯ ದೃಶ್ಯ ಎಲ್ಲರ ಗಮನ ಸೆಳೆಯಿತು. ಮಿತಿ ಮೀರಿದ ಟ್ರಾಫಿಕ್ ನಡುವೆ ಯುವಕನೊಬ್ಬ ಯುನಿಸೈಕಲ್ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರು ಟ್ರಾಫಿಕ್‌ನಲ್ಲಿ ಯುನಿಸೈಕಲ್ ಮೊರೆ ಹೋದ ಯುವಕ

ಟ್ರಾಫಿಕ್‌ ನಡುವೆ ಯುನಿಸೈಕಲ್ ಸವಾರಿ ಮಾಡಿದ ಯುವಕ -

Profile
Pushpa Kumari Feb 5, 2026 3:45 PM

ಬೆಂಗಳೂರು, ಫೆ. 5: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನನಿತ್ಯ‌ ಟ್ರಾಫಿಕ್ ಕಿರಿಕಿರಿ ಮಿತಿಮೀರಿ ಹೋಗಿದೆ. ಇದೆಲ್ಲದರ ನಡುವೆ ಒಂದಲ್ಲ ಒಂದು ವಿಚಿತ್ರ ದೃಶ್ಯಗಳು ಅಲ್ಲಿದ್ದ ಜನರನ್ನೇ ದಿಗ್ಬ್ರಮೆಗೊಳಿಸುತ್ತದೆ.‌ ಅದೇ ರೀತಿ ಆಟೋ ಮತ್ತು ಕಾರುಗಳ ನಡುವೆ, ಜನನಿಬಿಡ ಪ್ರದೇಶದಲ್ಲಿ ಒಂದು ಅಸಾಮಾನ್ಯ ದೃಶ್ಯ ಎಲ್ಲರ ಗಮನ ಸೆಳೆಯಿತು. ಮಿತಿ ಮೀರಿದ ಟ್ರಾಫಿಕ್ ನಡುವೆ ಯುವಕನೊಬ್ಬ ಯುನಿಸೈಕಲ್ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.

ಬೆಂಗಳೂರು ಟ್ರಾಫಿಕ್ ನಡುವೆ ಯುವಕನೊಬ್ಬ ಯುನಿಸೈಕಲ್ ಸವಾರಿ ಮಾಡುವ ಮೂಲಕ ಅಲ್ಲಿದ್ದವರನ್ನು ದಿಗ್ಭ್ರಮೆಗೊಳಿಸಿದ್ದಾನೆ. ವಾಹನಗಳಿಂದ ತುಂಬಿ ತುಳುಕುತ್ತಿರುವ ರಸ್ತೆಯ ಮೇಲೆ ಆ ಯುವಕ ಅತ್ಯಂತ ಸಲೀಸಾಗಿ ಒಂದೇ ಚಕ್ರದ ವಾಹನದ ಮೇಲೆ ಸವಾರಿ ಮಾಡಿದ್ದಾನೆ. ಇವನ ಈ ಸಾಹಸ ಕಂಡು ಪಕ್ಕದಲ್ಲಿ ಸಂಚರಿಸುತ್ತಿದ್ದ ಸವಾರರು ಒಂದು ಕ್ಷಣ ಶಾಕ್ ಆಗಿದ್ದಾರೆ.

ವಿಡಿಯೊ ನೋಡಿ:



ಸಾಮಾನ್ಯ ದಟ್ಟಣೆಯಿಂದ ತುಂಬಿರುವ ಫ್ಲೈಓವರ್‌ನಿಂದ ವಿಡಿಯೊ‌ ಪ್ರಾರಂಭವಾಗುತ್ತದೆ. ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಈ ಮಧ್ಯದಲ್ಲಿ ಸವಾರನು ಹೆಲ್ಮೆಟ್, ನೀ-ಗಾರ್ಡ್ಸ್ ಮತ್ತು ಬ್ಯಾಗ್ ಧರಿಸಿ ಪೂರ್ಣ ಸಿದ್ಧತೆಯೊಂದಿಗೆ ಯುನಿಸೈಕಲ್ ಸವಾರಿ ಮಾಡುತ್ತಿದ್ದಾನೆ. ಅವನು ನೇರವಾಗಿ ನಿಂತು, ಒಂದೇ ಚಕ್ರದ ಮೇಲೆ ಸಮತೋಲನ ಸಾಧಿಸಿದ್ದಾನೆ. ಇತರ ವಾಹನಗಳು ಅವನನ್ನು ಹಾದು ಹೋಗುವಾಗ ಸ್ಥಿರವಾದ ವೇಗದಲ್ಲಿ ಮುಂದೆ ಸಾಗಿದ್ದಾನೆ.

ಎತ್ತಿನ ಬಂಡಿ ಜತೆ ತೆರಳುತ್ತಿದ್ದ ಮಹಿಳೆ ಚಕ್ರಕ್ಕೆ ಸಿಲುಕಿ ಸಾವು: ವಿಡಿಯೊ ವೈರಲ್

ವಿಡಿಯೊ ಮಾಡಿದ ವ್ಯಕ್ತಿ ಕನ್ನಡದಲ್ಲೇ ಪ್ರತಿಕ್ರಿಯಿಸಿ, "ಇಷ್ಟು ದಿನ 2, 3 ಮತ್ತು 4 ಚಕ್ರದ ವಾಹನ ನೋಡಿದ್ದೆವು. ಆದರೆ ಈ ಒನ್ ವೀಲ್ಹರ್‌ ಬ್ಯಾಲನ್ಸ್ ನೋಡಿ ಶಾಕ್ ಆಯ್ತು ಎಂದು ಹೇಳಿಕೊಂಡಿದ್ದಾರೆ. ನಾನು ಇದನ್ನು ಇಷ್ಟರವರೆಗೆ ನೋಡಿಲ್ಲ. ಮೊದಲ ಬಾರಿಗೆ ನೋಡುತ್ತಿದ್ದೇನೆ‌. ಈ ಮನುಷ್ಯನ ಸಮತೋಲನವನ್ನು ನೋಡಿದಾಗ ನನಗೆ ಇನ್ನಷ್ಟು ಆಘಾತವಾಯಿತುʼʼ ಎಂದಿದ್ದಾರೆ.

ಫೆಬ್ರವರಿ 4ರಂದು ಹಂಚಿಕೊಳ್ಳಲಾದ ಈ ಕ್ಲಿಪ್ ಇಲ್ಲಿಯವರೆಗೆ 17,000 ವೀಕ್ಷಣೆಗಳನ್ನು ದಾಟಿದ್ದು ಅನೇಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಬಳಕೆದಾರರೊಬ್ಬರು ''ಮುಖ್ಯ ರಸ್ತೆಗಳಲ್ಲಿ ಅದನ್ನು ಸವಾರಿ ಮಾಡುವುದು ಕಾನೂನುಬದ್ಧವೇ?" ಎಂದು ಕೇಳಿದ್ದಾರೆ. ಕೆಲವರು‌ ಆತನ ಸಮತೋಲನ ಮತ್ತು ಧೈರ್ಯವನ್ನು ಮೆಚ್ಚಿದ್ದರೆ ಬೆಂಗಳೂರಿನ ರಸ್ತೆ ಗುಂಡಿಗಳ ನಡುವೆ ಇದು ತುಂಬಾ ಅಪಾಯಕಾರಿ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.