ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮನೆ ಅಡುಗೆ ನೀಡಿದ ಸೆಕ್ಯುರಿಟಿ ಗಾರ್ಡ್: ಆತಂಕ ವ್ಯಕ್ತಪಡಿಸಿದ ಮಹಿಳೆ

Viral Video: ಸೆಕ್ಯುರಿಟಿ ಗಾರ್ಡ್‌ ಒಬ್ಬರು ಮನೆಯಲ್ಲಿ ತಯಾರಿಸಿದ ಆಹಾರವನ್ನುನೀಡಿರುವ ಬಗ್ಗೆ ಮಹಿಳೆ ಆತಂಕ ವ್ಯಕ್ತ ಪಡಿಸಿದ್ದಾರೆ. ಅಡುಗೆಯವರನ್ನು ಕೆಲಸದಿಂದ ತೆಗೆದುಹಾಕಿದ ಕಾರಣಕ್ಕೆ ಭದ್ರತಾ ಸಿಬ್ಬಂದಿ ಅಡುಗೆಯನ್ನು ಕಳುಹಿಸಿಕೊಟ್ಟ ಘಟನೆಯನ್ನು ಗುರುಗ್ರಾಮದ ಮಹಿಳೆ ಹಂಚಿಕೊಂಡಿದ್ದಾರೆ.

ಸೆಕ್ಯುರಿಟಿ ಗಾರ್ಡ್‌ನಿಂದ ಮನೆ ಅಡುಗೆ: ಇದು ಕಾಳಜಿಯೇ? ಪ್ರಶ್ನಿಸಿದ ಮಹಿಳೆ

ಪ್ರಿಯಾಂಕಾ -

Profile
Pushpa Kumari Oct 1, 2026 10:30 PM

ಚಂಡೀಗಢ, ಅ. 1: ಸೆಕ್ಯುರಿಟಿ ಗಾರ್ಡ್‌ ಒಬ್ಬರು ಮನೆಯಲ್ಲಿ ತಯಾರಿಸಿದ ಆಹಾರ ನೀಡಿರುವ ಬಗ್ಗೆ ಮಹಿಳೆ ಆತಂಕ ವ್ಯಕ್ತ ಪಡಿಸಿದ್ದಾರೆ. ಅಡುಗೆಯವರನ್ನು ಕೆಲಸದಿಂದ ತೆಗೆದುಹಾಕಿದ ಕಾರಣಕ್ಕೆ ಭದ್ರತಾ ಸಿಬ್ಬಂದಿ ಅಡುಗೆಯನ್ನು ಕಳುಹಿಸಿಕೊಟ್ಟ ಘಟನೆಯನ್ನು ಹರಿಯಾಣದ ಗುರುಗ್ರಾಮದ ಮಹಿಳೆ ಹಂಚಿಕೊಂಡಿದ್ದಾರೆ. ಅವರು ಆಹಾರವನ್ನು ಕಳುಹಿಸಿದ್ದು ತಮ್ಮನ್ನ ಗೊಂದಲಕ್ಕೀಡು ಮಾಡಿದೆ. ಆಹಾರ ಕಳುಹಿಸಿದ್ದು ಒಂದು ರೀತಿಯ ಕಾಳಜಿಯುಳ್ಳ ಕೆಲಸವೇ? ಅಥವಾ ಅಸಹನೀಯ ಭಾವನೆಯೇ ಎಂದು ತಿಳಿಯುತ್ತಿಲ್ಲ ಎಂದು ಪೋಸ್ಟ್‌ನಲ್ಲಿ ಶೇರ್ (Viral News) ಮಾಡಿದ್ದಾರೆ.

ಪ್ರಿಯಾಂಕಾ ಗಿರಿ ಮತ್ತು ಅವರ ರೂಮ್‌ಮೇಟ್ ಇತ್ತೀಚೆಗಷ್ಟೇ ಅವರ ಮನೆಯ ಅಡುಗೆಯವರನ್ನು ಕೆಲಸದಿಂದ ತೆಗೆದು ಹಾಕಿದ್ದರು. ಹೊಸ ಅಡುಗೆಯವರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಪ್ರಿಯಾಂಕಾ ಕಚೇರಿಯಿಂದ ಮನೆಗೆ ಬಂದಾಗ, ಸೆಕ್ಯುರಿಟಿ ಗಾರ್ಡ್ ತನ್ನ ಹೆಂಡತಿಯಿಂದ ಅಡುಗೆ ಮಾಡಿಸಿ ತಂದುಕೊಟ್ಟಿದ್ದಾರೆ.

ವಿಡಿಯೊ ನೋಡಿ:

ಈ ಬಗ್ಗೆ ಮಾತನಾಡಿದ ಪ್ರಿಯಾಂಕಾ, ಗಾರ್ಡ್‌ಗೆ ಹಣ ಬೇಡವಂತೆ,  ಪ್ರತಿದಿನ ಊಟ ಕಳುಹಿಸುವುದಾಗಿ ಹೇಳಿದರು. ಇದು ಗೊಂದಲ ಮೂಡಿಸಿತು. ʼʼಆ ಗಾರ್ಡ್ ಊಟ ತಂದುಕೊಡುವಷ್ಟು ಆಪ್ತರಾಗಿರಲಿಲ್ಲ" ಎಂದು ಹೇಳಿದ ಪ್ರಿಯಾಂಕಾ, ʼʼಪ್ರತಿದಿನವೂ ಉಚಿತವಾಗಿ ಊಟ ಕಳುಹಿಸುತ್ತೇನೆ, ಹಣ ಬೇಡ ಎಂದು ಹೇಳಿದ್ದಲ್ಲದೆ, ಊಟ ಕೊಡುವಾಗ ಸ್ವಲ್ಪ ಗದರಿಸುವ ರೀತಿ ಮಾತನಾಡಿದ್ದಾರೆʼʼ ಎಂದಿದ್ದಾರೆ.

ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ತಲೆ ತಗ್ಗಿಸಿದ ನಾಗರಿಕ ಸಮಾಜ

"ಇದು ಕಾಳಜಿಯೋ ಅಥವಾ ಭಯಪಡಬೇಕಾದ ವಿಷಯವೋ ತಿಳಿಯುತ್ತಿಲ್ಲ. ಮುಂಚಿತವಾಗಿ ತಿಳಿಸದೆ ಊಟ ತಂದದ್ದು ಮತ್ತು ತಮ್ಮ ವಾಸಸ್ಥಳ ತಿಳಿದಿರುವ ವ್ಯಕ್ತಿಯಿಂದ ಬಂದ ಈ ರೀತಿಯ ವರ್ತನೆ ಆತಂಕ ಉಂಟು ಮಾಡಿದೆʼʼ ಎಂದು ಹೇಳಿದ್ದಾರೆ.

ಈ ವಿಡಿಯೊ ಆನ್‌ಲೈನ್‌ನಲ್ಲಿ ಗಮನ ಸೆಳೆದಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ʼʼಭದ್ರತಾ ಸಿಬ್ಬಂದಿ ತನ್ನ ಪತ್ನಿಗೆ ಅಡುಗೆ ಕೆಲಸವನ್ನು ಹುಡುಕಿಕೊಡಲು ಪ್ರಯತ್ನಿಸುತ್ತಿರಬಹುದುʼʼ ಎಂದಿದ್ದಾರೆ. ಕೆಲವರು ಎಚ್ಚರಿಕೆಯಿಂದ ಇರುವುದರಲ್ಲಿ ತಪ್ಪೇನಿಲ್ಲ ಎಂದು ಸಲಹೆ ನೀಡಿದ್ದಾರೆ.