ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅದ್ಧೂರಿ ಮದುವೆಗೆ ಮಗನಿಗೆ ಪರ್ಸನಲ್ ಲೋನ್ ಮಾಡಲು ಪೋಷಕರ ಒತ್ತಾಯ: ಪೋಸ್ಟ್ ಮೂಲಕ ಅಳಲು ತೋಡಿಕೊಂಡ ಯುವಕ!

Viral News: ಇಲ್ಲೊಬ್ಬ ಯುವಕ ಪೋಷಕರ ಅದ್ಧೂರಿ ಮದುವೆಯ ಬೇಡಿಕೆ ಬಗ್ಗೆ ಬೇಸರ ಹೊರಹಾಕಿದ್ದಾನೆ. ಸುಮಾರು 50 ಲಕ್ಷ ವೆಚ್ಚದ ವೈಭವದ ಮದುವೆಗಾಗಿ 45 ಲಕ್ಷದ ವೆರೆಗೆ ವೈಯಕ್ತಿಕ ಲೋನ್ ಪಡೆಯಲು ಪೋಷಕರು ಒತ್ತಾಯಿಸಿದ್ದಾರೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇಷ್ಟು ಮೊತ್ತದ ಸಾಲ ಮಾಡಿ ಮದುವೆಯಾಗುವುದು ತಪ್ಪು ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಅದ್ದೂರಿ ಮದುವೆಗೆ ಪೋಷಕರ ಬೇಡಿಕೆ: ಪೋಸ್ಟ್ ಮೂಲಕ ಬೇಸರ ಹೊರಹಾಕಿದ ಯುವಕ

ಇಂಟರ್ ನೆಟ್ ಚಿತ್ರ -

Profile
Pushpa Kumari Sep 21, 2026 3:47 PM

ನವದೆಹಲಿ, ಸೆ. 21: ಭಾರತೀಯ ಮದುವೆ ಎಂದಾಗ ಅಲ್ಲಿ ಅದ್ಧೂರಿತನದ ವೈಭವ ಇದ್ದೇ ಇರುತ್ತದೆ. ದುಬಾರಿ ವೆಚ್ಚದ ಮದುವೆ ಮಂಟಪ, ಭರ್ಜರಿ ಭೋಜನ, ಹೀಗೆ ಗ್ರ್ಯಾಂಡ್ ಆಗಿಯೇ ಸಿದ್ದತೆ ಮಾಡಿಕೊಳ್ಳಲು ಬಯಸುತ್ತಾರೆ. ಇಲ್ಲೊಬ್ಬ ಯುವಕ ಪೋಷಕರ ಅದ್ಧೂರಿ ಮದುವೆಯ ಬೇಡಿಕೆ ಬಗ್ಗೆ ಬೇಸರ ಹೊರಹಾಕಿದ್ದಾನೆ. ಸುಮಾರು 50 ಲಕ್ಷ ವೆಚ್ಚದ ವೈಭವದ ಮದುವೆಗಾಗಿ 45 ಲಕ್ಷದ ವೆರೆಗೆ ವೈಯಕ್ತಿಕ ಲೋನ್ ಪಡೆಯಲು ಪೋಷಕರು ಒತ್ತಾಯಿಸಿದ್ದಾರೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಇಷ್ಟು ಮೊತ್ತದ ಸಾಲ ಮಾಡಿ ಮದುವೆಯಾಗುವುದು ತಪ್ಪು ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ರೆಡ್ಡಿಟ್ ನಲ್ಲಿ ಯುವಕ ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾನೆ. ದೀರ್ಘಕಾಲದ ಪ್ರಯತ್ನದ ನಂತರ ಪೋಷಕರು ತಮ್ಮ ಪ್ರೇಮ ವಿವಾಹಕ್ಕೆ ಒಪ್ಪಿಕೊಂಡಿದ್ದರೂ, ಅದ್ದೂರಿ ಮದುವೆ ನಡೆಸಬೇಕೆಂಬ ಷರತ್ತನ್ನು ವಿಧಿಸಿದ್ದಾರೆ ಎಂದು 27 ವರ್ಷದ ಯುವಕನು ಅಳಲು ತೋಡಿಕೊಂಡಿದ್ದಾನೆ.

ಬಹಳಷ್ಟು ಪ್ರಯತ್ನದ ಮೇರೆಗೆ ತನ್ನ ಪೋಷಕರು ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡಿದ್ದಾರೆ. ಆದರೆ ಅದಕ್ಕೊಂದು ಷರತ್ತು ವಿಧಿಸಿದ್ದಾರೆ. ಮದುವೆ ತಮ್ಮಿಷ್ಟದಂತೆ ಅದ್ದೂರಿಯಾಗಿಯೆ ನಡೆಸಬೇಕು ಎಂದಿದ್ದಾರೆ. ಈ ಅದ್ದೂರಿ ಮದುವೆಯ ಒತ್ತಡವು ಆರ್ಥಿಕ ಸಂಕಷ್ಟವಾಗಿ ಪರಿಣಮಿಸಿದೆ. ತನ್ನ ಪೋಷಕರು ಮದುವೆಗೆ ಕನಿಷ್ಠ 50 ಲಕ್ಷ ರೂ. ಖರ್ಚು ಮಾಡಬೇಕೆಂದು ಬಯಸಿದ್ದು, ಇದಕ್ಕಾಗಿ 45 ಲಕ್ಷ ರೂ. ವೈಯಕ್ತಿಕ ಸಾಲ ಪಡೆಯುವಂತೆ ಸಲಹೆ ನೀಡಿದ್ದಾರೆ.

Viral Video: ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ: ಇದು ದೇವರ ನಾಡಿನ ಅಯ್ಯಪ್ಪ ಸ್ವಾಮಿ ದೇವಾಲಯದ ವಿಶಿಷ್ಟ ಆಚರಣೆ

ಯುವಕನ ತಂದೆಗೆ ಈಗಾಗಲೇ 50 ಲಕ್ಷ ಬ್ಯಾಂಕ್ ಸಾಲವಿದೆ. ​ಜಮೀನು ಮಾರಿ ಸಾಲ ತೀರಿಸುವುದಾಗಿ ತಂದೆ ಹೇಳುತ್ತಿದ್ದಾರೆ. ಆದರೆ ಆ ದಂಪತಿಯ ಮಾಸಿಕ ಕೈಗೆ ಸಿಗುವ ಸಂಬಳ ಸುಮಾರು 2.5 ಲಕ್ಷ ರೂ. ಎಂದು ಯುವಕ ತಿಳಿಸಿದ್ದು ತಮ್ಮ ಭಾವಿ ಪತ್ನಿ ಸಾಲವನ್ನು ಒಟ್ಟಾಗಿ ಮರುಪಾವತಿಸಲು ಸಿದ್ಧರಿದ್ದರೂ, ಇಷ್ಟು ದೊಡ್ಡ ಮೊತ್ತದ ಸಾಲದೊಂದಿಗೆ ವೈವಾಹಿಕ ಜೀವನವನ್ನು ಪ್ರಾರಂಭಿಸಲು ಬಹಳಷ್ಟು ಭಯ ಇದೆ ಎಂದು ಬರೆದಿದ್ದಾರೆ.

​ವಧುವಿನ ಕುಟುಂಬದವರು 15 ಲಕ್ಷದ ಸರಳ ಮದುವೆಗೆ ಸಿದ್ಧರಿದ್ದಾರೆ. ಆದರೆ ತನ್ನ ಕುಟುಂಬದಲ್ಲಿ ಯಾರೂ ಇದುವರೆಗೆ ಅದ್ಧೂರಿ ಮದುವೆ ಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ ಹಾಗೂ ಅಂತರಜಾತಿ ವಿವಾಹವಾಗಿರುವುದರಿಂದ ಪೋಷಕರು ಗ್ರ್ಯಾಂಡ್ ಮದುಗೆಗೆ ಪಟ್ಟು ಹಿಡಿದಿದ್ದಾರೆ.ಆದರೆ ಮದುವೆಯ ಆರಂಭದಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಸಾಲದ ಹೊರೆ ಹೊರುವುದು ಸರಿಯೇ? ಎಂದು ಯುವಕ ಆತಂಕ ವ್ಯಕ್ತಪಡಿಸಿದ್ದಾನೆ. ಆದರೆ ಈ ಪೋಸ್ಟ್ ಗೆ ನೆಟ್ವಿಗರು ಪ್ರತಿಕ್ರಿಯೆ ನೀಡಿದ್ದು ಬಳಕೆದಾರರೊಬ್ಬರು ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.