ʼʼನನ್ನ ಮಗನನ್ನು ಈ ಚಳಿಯಲ್ಲಿ ಹೇಗೆ ಬಿಟ್ಟು ಹೋಗಲಿ?ʼʼಹುತಾತ್ಮ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ತಾಯಿ
Martyred soldier statue: ಚಳಿಯ ತೀವ್ರತೆಯ ನಡುವೆ, ಈ ಚಳಿಯಲ್ಲಿ ನನ್ನ ಮಗನನ್ನು ಹೇಗೆ ಬಿಟ್ಟು ಹೋಗಲಿ? ಎಂದು ಕಣ್ಣೀರಿಡುತ್ತಾ, ಹುತಾತ್ಮ ಸೈನಿಕನ ಪ್ರತಿಮೆಗೆ ತಾಯಿ ಕಂಬಳಿ ಹೊದಿಸಿದ ಹೃದಯಸ್ಪರ್ಶಿ ಘಟನೆ ಮನಕಲಕುವಂತಿದೆ. ಮಗನ ಮೇಲಿನ ಪ್ರೀತಿ, ತ್ಯಾಗ ಮತ್ತು ದೇಶಭಕ್ತಿಯನ್ನು ಪ್ರತಿಬಿಂಬಿಸುವ ಈ ದೃಶ್ಯ ನೋಡಿ ನೆಟ್ಟಿಗರು ಕಂಬನಿ ಮಿಡಿದಿದ್ದಾರೆ.
ಹುತಾತ್ಮ ಯೋಧ ಗುರ್ನಾಮ್ ಸಿಂಗ್ ಪ್ರತಿಮೆಗೆ ಕಂಬಳಿ ಹೊದಿಸಿದ ತಾಯಿ -
ಶ್ರೀನಗರ, ಜ.10: ಚಳಿಗೆ ಜನರು ಗಡಗಡನೆ ನಡುಗುತ್ತಿದ್ದಾರೆ. ಮನೆಯಿಂದ ಹೊರಬರಲಾಗದೆ ಬಹಳಷ್ಟು ಮಂದಿ ಕಂಬಳಿ ಹೊದ್ದು ಮಲಗಿದ್ದಾರೆ. ಎರಡೆರಡು ಬಟ್ಟೆ, ಸ್ವೆಟರ್ ಧರಿಸದೆ ಮನೆಯಿಂದ ಹೊರಬರಲಾಗುತ್ತಿಲ್ಲ. ಇದರ ನಡುವೆ ಹೃದಯಸ್ಪರ್ಶಿ ಘಟನೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (viral video) ಆಗುತ್ತಿದೆ.
ಜಮ್ಮುವಿನಲ್ಲಿ ಕಾನ್‌ಸ್ಟೆಬಲ್ ಗುರ್ನಾಮ್ ಸಿಂಗ್ (Gurnam Singh) ಪ್ರತಿಮೆಗೆ ಅವರ ತಾಯಿ ಜಸ್ವಂತ್ ಕೌರ್, ಮಾತೃವಾತ್ಸಲ್ಯ ತೋರಿದ್ದಾರೆ. ಗುರ್ನಾಮ್ ಸಿಂಗ್ ಪ್ರತಿಮೆಯ ಸುತ್ತಲೂ ಕಂಬಳಿ ಹೊದಿಸಿ, ಕೊರೆಯುವ ಚಳಿಯಿಂದ ಅವರನ್ನು ರಕ್ಷಿಸಿದರು.
Infiltration In JK: ಬಾರಾಮುಲ್ಲಾದಲ್ಲಿ ಪಾಕ್‌ನಿಂದ ಒಳಸುಳುವಿಕೆಗೆ ಯತ್ನ; ಕಾರ್ಯಾಚರಣೆಯಲ್ಲಿ ಸೈನಿಕ ಹುತಾತ್ಮ
ಜಸ್ವಂತ್ ಕೌರ್‌ಗೆ, ಆಕೆಯ ಪುತ್ರ ಗುರ್ನಮ್ ಕೇವಲ ಯುದ್ಧದಲ್ಲಿ ಮಡಿದ ಸೈನಿಕನಲ್ಲ. ಆತ ಅವಳ ಜೀವಂತ, ಉಸಿರಾಡುವ ಮಗ. ಅವಳ ಹೃದಯದಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ. ನಾನು ಒಬ್ಬ ತಾಯಿ. ಈ ಕೊರೆಯುವ ಚಳಿಯಲ್ಲಿ, ನಮ್ಮನ್ನು ನಾವು ಬೆಚ್ಚಗಿಡಲು ಪ್ರಯತ್ನಿಸುವಾಗ ನನ್ನ ಮಗನ ಪ್ರತಿಮೆಯನ್ನು ಕೊರೆಯುವ ಚಳಿಗೆ ಒಡ್ಡಲು ನಾನು ಹೇಗೆ ಬಿಡಲಿ? ಎಂದು ಅವರು ಹೇಳಿರುವುದು ಮನಕಲಕುವಂತಿದೆ.
ವಿಡಿಯೊ ವೀಕ್ಷಿಸಿ:
In a moving display of a mother’s love, Jaswant Kaur, mother of Constable Gurnam Singh, wrapped a blanket around his statue in Jammu to shield him from the biting cold.
— Komal Mahajan (@KomalMahajan_) January 10, 2026
If you see the tricolour flutter, it’s not just the wind—it carries the last breath of soldiers like Gurnam🇮🇳 pic.twitter.com/3AUEDlFEIp
ಪಾಕಿಸ್ತಾನದ ಆಕ್ರಮಣದಿಂದ ಭಾರತದ ಗಡಿಗಳನ್ನು ರಕ್ಷಿಸುತ್ತಿದ್ದಾಗ, 2016 ರ ಅಕ್ಟೋಬರ್ 21-22 ರ ರಾತ್ರಿ ಹಿರಾ ನಗರ ವಲಯದಲ್ಲಿ ಗುರ್ನಮ್ ಮೇಲೆ ಗುಂಡು ಹಾರಿಸಲಾಯಿತು. ಈ ವೇಳೆ ಅವರು ಹುತಾತ್ಮರಾದರು. ಆದರೆ, ಅವರು ದೇಶದ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ.
ಗುರ್ನಮ್ ಹುತಾತ್ಮರಾಗುವ ಒಂದು ದಿನ ಮೊದಲು, ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ್ದರು. ಒಬ್ಬ ಭಯೋತ್ಪಾದಕನನ್ನು ಕೊಂದಿದ್ದರು, ಇತರರು ಪಲಾಯನಗೈದಿದ್ದರು. ಭಾರಿ ಶೆಲ್ ದಾಳಿಯ ಸೋಗಿನಲ್ಲಿ, ಪಾಕಿಸ್ತಾನಿ ಸೇನೆಯು ಭಯೋತ್ಪಾದಕರ ಗುಂಪನ್ನು ಭಾರತದ ಕಡೆಗೆ ತಳ್ಳಲು ಪ್ರಯತ್ನಿಸುತ್ತಿತ್ತು. ಆದರೆ, ಹದ್ದಿನ ಕಣ್ಣು ನೆಟ್ಟಿದ್ದ ಗುರ್ನಮ್ ಗೋಡೆಯಂತೆ ನಿಂತು ಅವರ ದಾಳಿಯನ್ನು ವಿಫಲಗೊಳಿಸಿದ್ದರು.
Ex Soldier Hunger strike: ಕಾರ್ಗಿಲ್ ವಿಜಯೋತ್ಸವದ ದಿವಸಾ ಜಮೀನಿಗಾಗಿ ಉಪವಾಸ ಸತ್ಯಾಗ್ರಹ ಕುಳಿತ ಮಾಜಿ ಸೈನಿಕ
ನೀವು ತ್ರಿವರ್ಣ ಧ್ವಜ ಹಾರಾಡುವುದನ್ನು ನೋಡಿದರೆ, ಅದು ಕೇವಲ ಗಾಳಿಯಿಂದಲ್ಲ. ಗುರ್ನಾಮ್ ಮತ್ತು ಇತರ ಸೈನಿಕರ ಕೊನೆಯ ಉಸಿರಿನಿಂದ ಅದು ಹಾರಾಡುತ್ತಿರುವುದು ಎಂದು ಜಸ್ವಂತ್ ಅವರ ಸಹೋದರ ಕುಲ್ವಿಂದರ್ ಸಿಂಗ್ ಹೆಮ್ಮೆಯಿಂದ ಹೇಳಿದರು. ಇತರರಿಗೆ, ಗುರ್ನಾಮ್ ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಇನ್ನೊಬ್ಬ ಸೈನಿಕ. ಆದರೆ ಅವನ ತಾಯಿಗೆ, ಅವನು ಒಬ್ಬ ಮಗ, ಅವಳ ಅಸ್ತಿತ್ವದ ಒಂದು ಭಾಗ ಎಂದು ಜಸ್ವಂತ್ ಅವರ ನೆರೆಮನೆಯವರಾದ ಅಶ್ವನಿ ಹೇಳಿದರು.