ಪ್ರೇಯಸಿ ಜತೆ ಮೊಮೋಸ್ ತಿನ್ನಲು ಬಂದ ಪತಿ: ರೆಡ್‌ಹ್ಯಾಂಡ್ ಆಗಿ ಹಿಡಿದ ಪತ್ನಿಯನ್ನು ಕಾರ್‌ನ ಬಾನೆಟ್ ಮೇಲೆಯೇ ಎಳೆದೊಯ್ದ ವಿಡಿಯೊ ವೈರಲ್
Viral Video: ಪ್ರೇಯಸಿಯೊಂದಿಗೆ ಮೊಮೋಸ್ ತಿನ್ನಲು ಬಂದಿದ್ದ ಪತಿಯನ್ನು ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ನಡೆದಿದೆ. ಈ ವೇಳೆ ಆಕೆಯಿಂದ ತಪ್ಪಿಸಿಕೊಳ್ಳಬೇಕೇಂದು ಪತಿ ಪತ್ನಿಯನ್ನು ಕಾರಿನ ಬಾನೆಟ್ ಮೇಲೆಯೇ ಸುಮಾರು ನೂರು ಮೀಟರ್ ದೂರದವರೆಗೆ ಎಳೆದೊಯ್ದಿದ್ದಾನೆ. ಈ ಆಘಾತಕಾರಿ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಪ್ರೇಯಸಿ ಜತೆ ಸಿಕ್ಕಿಬಿದ್ದ ಪತಿ -
ಲಕನೌ, ಅ. 4: ಇಂದು ದಾಂಪತ್ಯ ಕಲಹದ ವಿಚಾರಗಳು ಬೀದಿಗೆ ಬರುವಂತಾಗಿದೆ. ಇದೀಗ ಪ್ರೇಯಸಿಯೊಂದಿಗೆ ಮೊಮೋಸ್ ತಿನ್ನಲು ಬಂದಿದ್ದ ಪತಿಯನ್ನು ಪತ್ನಿ ರೆಡ್‌ಹ್ಯಾಂಡ್ ಆಗಿ ಹಿಡಿದ ಘಟನೆಯೊಂದು ನಡೆದಿದೆ. ಈ ವೇಳೆ ಆಕೆಯಿಂದ ತಪ್ಪಿಸಿಕೊಳ್ಳಬೇಕೇಂದು ಪತಿ ಪತ್ನಿಯನ್ನು ಕಾರಿನ ಬಾನೆಟ್ ಮೇಲೆಯೇ ಕೂರಿಸಿ ಸುಮಾರು ನೂರು ಮೀಟರ್‌ವರೆಗೆ ಎಳೆದೊಯ್ದಿದ್ದಾನೆ. ಈ ಆಘಾತಕಾರಿ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ಈ ಘಟನೆ ನಡೆದಿದೆ. ಮಯಾಂಕ್ ಎಂಬಾತ ಪ್ರೇಯಸಿ ಮಹಿ ಜತೆ ಮೋಮೋ ತಿನ್ನಲು ಹೊರಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಮಯಾಂಕ್ ಪ್ರೇಯಸಿ ಜತೆಗೆ ಕಾರಿನಲ್ಲಿ ಬಂದು ಮೊಮೋಸ್ ತಿನ್ನುತ್ತಿದ್ದಾಗ, ಪತ್ನಿ ನೋಡಿದ್ದಾಳೆ. ಕೋಪಗೊಂಡ ಪತ್ನಿ ಸುನಿತಾ ಕಾರಿನ ಗಾಜನ್ನು ತಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ಸುನೀತಾ ತನ್ನ ಪತಿಯನ್ನು ಮತ್ತೊಬ್ಬ ಮಹಿಳೆಯೊಂದಿಗೆ ನೋಡಿ ಆಕ್ರೋಶಗೊಂಡು ಕಾರಿನ ಕಿಟಕಿಗಳನ್ನು ಬಡಿಯಲು ಪ್ರಾರಂಭಿಸಿದ್ದಾಳೆ. ಗಾಬರಿಗೊಂಡ ಮಯಾಂಕ್ ಕಾರನ್ನು ಲಾಕ್ ಮಾಡಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ಸುನೀತಾ ಕಾರಿನ ಮುಂದೆ ಬಂದು ಬಾನೆಟ್ ಮೇಲೆ ಮಲಗಿದ್ದಾಳೆ. ಮಯಾಂಕ್ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ.
ವಿಡಿಯೊ ನೋಡಿ:
The wife is hanging onto the car's bonnet. The husband is sitting inside with his girlfriend. In fact, the wife caught both of them together. She stood in front of the car. When the husband drove the car, the wife remained hanging onto the bonnet. 📍#Meerut, #UttarPradesh https://t.co/A60QHwQbAg
— Siraj Noorani (@sirajnoorani) October 4, 2026
ಕಾರ್ ನಿಲ್ಲಿಸದ ಮಯಾಂಕ್ ಸ್ವಲ್ಪ ದೂರ ಚಲಾಯಿಸಿದ್ದಾನೆ. ಕಾರಿನ ಬಾನೆಟ್ ಮೇಲೆ ನರಳಾಡಿದ ಸುನೀತಾ ಕಾಪಾಡುವಂತೆ ಕುರುಚಾಡಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಕಾರನ್ನು ಸುತ್ತುವರಿದು ತಡೆದು ನಿಲ್ಲಿಸಿದ್ದಾರೆ. ಕಾರಿನ ಬಾನೆಟ್ ಮೇಲೆ ಸುಮಾರು 100 ಮೀಟರ್‌ಗಳಷ್ಟು ಪತ್ನಿಯನ್ನು ಎಳೆದೊಯ್ದ ಮಯಾಂಕ್ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಸ್ಥಳೀಯರು ಜಮಾಯಿಸುವುದನ್ನು ಕಂಡು ಮಯಾಂಕ್ ಕಾರನ್ನು ನಿಲ್ಲಿಸಬೇಕಾಯಿತು. ಸುನೀತಾ ತನ್ನ ಪತಿಯ ವಿರುದ್ಧ ಹಲ್ಲೆ, ವರದಕ್ಷಿಣೆ ಕಿರುಕುಳ ಮತ್ತು ದಾಂಪತ್ಯ ದ್ರೋಹದ ಆರೋಪ ಹೊರಿಸಿ ದೂರು ದಾಖಲಿಸಿದ್ದಾಳೆ.
ಕತ್ತಿನಲ್ಲಿ ಟ್ರ್ಯಾಕ್ಟರ್ ಟೈರ್ ಸಿಲುಕಿ ಒದ್ದಾಡಿದ ಕಾಡಾನೆ; ಜೀವದ ಹಂಗು ತೊರೆದು ಕಾಪಾಡಿದ ಅರಣ್ಯಾಧಿಕಾರಿಗಳು
ಮಯಾಂಕ್ ವಿರುದ್ಧ ಹತ್ಯೆಗೆ ಯತ್ನಿಸಿದ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಕೋತ್ವಾಲಿಯ ಸರ್ಕಲ್ ಆಫೀಸರ್ ಸಂಗ್ರಾಮ್ ಸಿಂಗ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಯಾಂಕ್ ಮತ್ತು ಆತನ ಪ್ರೇಯಸಿ ಮಹಿಯನ್ನು ಬಂಧಿಸಿದ್ದು, ಟೊಯೋಟಾ ಅರ್ಬನ್ ಕ್ರೂಸರ್ ಕಾರನ್ನು ವಶಪಡಿಸಿಕೊಂಡಿದ್ದಾರೆ.