ಮಾತು ಬಾರದಿದ್ದರೂ ಹೃದಯ ಗೆದ್ದ ಇಂಡಿಗೋ ಉದ್ಯೋಗಿ: ಹೃದಯಸ್ಪರ್ಶಿ ವಿಡಿಯೊ ಶೇರ್ ಮಾಡಿದ ಪ್ರಯಾಣಿಕ!
Viral News: ಒಬ್ಬರ ಮನಸ್ಸನ್ನು ಅರ್ಥೈಸಿಕೊಳ್ಳಲು ಕೇವಲ ಮಾತುಗಳು ಮಾತ್ರ ಮುಖ್ಯವಲ್ಲ.. ಅವರ ಭಾವನೆಗಳು ಹಾಗೂ ಒಳ್ಳೆಯ ಮನಸ್ಸು ಇದ್ದರೆ ಸಾಕು ಎಂಬುದನ್ನು ಈ ದೃಶ್ಯ ತೋರಿಸಿಕೊಟ್ಟಿದೆ. ಇಂಡಿಗೋದ ಬ್ಯಾಗೇಜ್ ಚೆಕ್-ಇನ್ ಸಿಬ್ಬಂದಿಯೊಬ್ಬರಿಗೆ ಮಾತು ಬರೋದಿಲ್ಲ. ಆದರೆ ಆತ್ಮವಿಶ್ವಾಸ ದಿಂದ ಪ್ರಯಾಣಿಕರಿಗೆ ನಗುವಿನೊಂದಿಗೆ ಸ್ವಾಗತಾರ್ಹ ಮಾಡುತ್ತಾರೆ. ಕೇವಲ ಕೈಸಜ್ಞೆಗಳು ಮತ್ತು ಮುಖದ ಭಾವನೆಗಳ ಮೂಲಕವೇ ಅವರು ಪ್ರಯಾಣಿಕರಿಗೆ ನೆರವು ನೀಡುತ್ತಿದ್ದಾರೆ.
ಮಾತು ಬಾರದಿದ್ದರೂ ಹೃದಯ ಗೆದ್ದ ಇಂಡಿಗೋ ಉದ್ಯೋಗಿ -
ನವದೆಹಲಿ,ಜು.1: ಇಂಡಿಗೋ ಉದ್ಯೋಗಿ ಮತ್ತು ಪ್ರಯಾಣಿಕನ ನಡುವಿನ ಹೃದಯಸ್ಪರ್ಶಿ ಸಂವಾದವೊಂದು ಸೋಷಿಯಲ್ ಮೀಡಿಯಾದಲ್ಲಿ(Viral Video) ಎಲ್ಲರ ಹೃದಯ ಗೆದ್ದಿದೆ. ಒಬ್ಬರ ಮನಸ್ಸನ್ನು ಅರ್ಥೈಸಿಕೊಳ್ಳಲು ಕೇವಲ ಮಾತುಗಳು ಮಾತ್ರ ಮುಖ್ಯವಲ್ಲ, ಅವರ ಭಾವನೆಗಳು ಹಾಗೂ ಒಳ್ಳೆಯ ಮನಸ್ಸು ಇದ್ದರೆ ಸಾಕು ಎಂಬುದನ್ನು ಈ ದೃಶ್ಯ ತೋರಿಸಿಕೊಟ್ಟಿದೆ. ಇಂಡಿಗೋದ ಬ್ಯಾಗೇಜ್ ಚೆಕ್-ಇನ್ ಸಿಬ್ಬಂದಿಯೊಬ್ಬರಿಗೆ ಮಾತು ಬರೋದಿಲ್ಲ. ಆದರೆ ಆತ್ಮ ವಿಶ್ವಾಸದಿಂದ ಪ್ರಯಾಣಿಕರಿಗೆ ನಗುವಿನೊಂದಿಗೆ ಸ್ವಾಗತಾರ್ಹ ಮಾಡುತ್ತಾರೆ. ಕೇವಲ ಕೈ ಸಂಜ್ಞೆಗಳು ಮತ್ತು ಮುಖದ ಭಾವನೆಗಳ ಮೂಲಕವೇ ಅವರು ಪ್ರಯಾಣಿಕರಿಗೆ ನೆರವು ನೀಡುತ್ತಿದ್ದಾರೆ.
ಪ್ರಯಾಣಿಕ ಅಮನ್ ಸಿಂಗ್ ಎಂಬವರು ಈ ಕ್ಲಿಪ್ ಶೇರ್ ಮಾಡಿಕೊಂಡಿದ್ದಾರೆ. ಇಂಡಿಗೊ ವಿಮಾನಯಾನ ಸಂಸ್ಥೆಯ ಮೂಕ ಉದ್ಯೋಗಿಯೊಬ್ಬರು ತಮ್ಮ ಪ್ರೀತಿಯ ನಡವಳಿಕೆ ಮೂಲಕ ಹೃದಯ ಗೆದ್ದಿದ್ದಾರೆ. ಇಂಡಿಗೋ ಸಂಸ್ಥೆಯ ಲಗೇಜ್ ಚೆಕ್-ಇನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಫ್ಜಲ್ ಎಂಬ ಉದ್ಯೋಗಿಯೂ ಪ್ರಯಾಣಿಕರೊಬ್ಬರಿಗೆ ಅತ್ಯಂತ ಆತ್ಮವಿಶ್ವಾಸ ಮತ್ತು ಮುಗುಳ್ನಗೆ ಯಿಂದ ಸಹಾಯ ಮಾಡುತ್ತಿದ್ದಾರೆ..
ವಿಡಿಯೋ ನೋಡಿ:
ಅಫ್ಜಲ್ ಅವರಿಗೆ ಮಾತನಾಡಲು ಸಾಧ್ಯವಾಗದಿದ್ದರೂ, ಸಂಪೂರ್ಣ ಬ್ಯಾಗೇಜ್ ಚೆಕ್-ಇನ್ ಪ್ರಕ್ರಿಯೆಯು ಸುಗಮ, ಸುಲಭ ಮತ್ತು ಯಾವುದೇ ಅಡೆತಡೆಗಳು ಇಲ್ಲದೆ ಮುಕ್ತವಾಗಿ ಮಾಡು ತ್ತಿದ್ದರು. ಕೈ- ಸನ್ನೆಗಳು, ಮುಖಭಾವಗಳು ಮತ್ತು ಸ್ಪಷ್ಟ ಮಾರ್ಗದರ್ಶನದ ಮೂಲಕ, ಅಫ್ಜಲ್ ಎಲ್ಲವನ್ನೂ ಸರಾಗವಾಗಿ ಪೂರ್ಣಗೊಳಿಸುತ್ತಿದ್ದರು.
ಅತ್ಯುತ್ತಮ ಗ್ರಾಹಕ ಸೇವೆಯು ಮಾತನಾಡುವ ಭಾಷೆಗಿಂತ ಹೆಚ್ಚಾಗಿ ತಾಳ್ಮೆ ಮತ್ತು ತಿಳುವಳಿಕೆಯ ಮೇಲೆ ನಿರ್ಮಿಸಲ್ಪಟ್ಟಿದೆ ಎಂದು ಈ ದೃಶ್ಯ ಹೇಳುವಂತಿದೆ. ವಿಡಿಯೋದಲ್ಲಿ ಅಫ್ಜಲ್ ಅವರು ಧರಿಸಿರುವ ಬ್ಯಾಡ್ಜ್ ಆಕರ್ಷಕವಾಗಿ ಕಾಣುತ್ತಿದೆ. ಅದರ ಮೇಲೆ, "ನನಗೆ ಮಾತನಾಡಲು ಮತ್ತು ಕೇಳಲು ಸಾಧ್ಯವಿಲ್ಲ, ಆದರೆ ನಿಮಗೆ ಸಹಾಯ ಮಾಡಲು ನಾನು ಖುಷಿಪಡುತ್ತೇನೆ ಎಂದು ಬರೆಯಲಾಗಿದೆ"
ಈ ಅದ್ಭುತ ಅನುಭವದ ಬಗ್ಗೆ ಬರೆದುಕೊಂಡಿರುವ ಪ್ರಯಾಣಿಕ ಅಮನ್ ಸಿಂಗ್ ಇವರು ನಿಜ ವಾಗಿಯೂ ನನ್ನ ದಿನವನ್ನು ಪೂರ್ತಿಗೊಳಿಸಿದರು., ಸಂವಹನಕ್ಕೆ ಕೇವಲ ಮಾತುಗಳಷ್ಟೇ ಸೀಮಿತವಲ್ಲ ಎಂದು ತೋರಿಸಿಕೊಟ್ಟ ಈ ವ್ಯಕ್ತಿಯಿಂದ ತನಗೆ ಬಹಳಷ್ಟು ಪ್ರೇರಣೆ ಸಿಕ್ಕಿದೆ ಎಂದಿದ್ದಾರೆ. ವಿಡಿಯೋದ ಕೊನೆಯಲ್ಲಿ ಅಮನ್ ಅವರು ಅಫ್ಜಲ್ ಅವರಿಗೆ ಹಸ್ತಲಾಘವ ಮಾಡಿ ಧನ್ಯವಾದ ತಿಳಿಸಿದ್ದಾರೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಹಲವಾರು ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಅಂಗವಿಕಲ ವ್ಯಕ್ತಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದಕ್ಕಾಗಿ ವಿಮಾನಯಾನ ಸಂಸ್ಥೆಯನ್ನು ಶ್ಲಾಘಿಸಿದ್ದಾರೆ. ಎಲ್ಲ ಕಂಪನಿಗಳೂ ಇಂತಹ ಅವಕಾಶ ಕಲ್ಪಿಸಿಕೊಡಬೇಕು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದರು.